ರಾಹುಲ್ ಗಾಂಧಿ ಸಿಖ್ಖರ ಬಗ್ಗೆ ಹೇಳಿದ್ದನ್ನು ಭಾರತದಲ್ಲಿ ಮತ್ತೊಮ್ಮೆ ಪುನರಾವರ್ತಿಸಲಿ ನೋಡೋಣ: ಬಿಜೆಪಿ

rg

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಿಖ್ಖರ ಬಗ್ಗೆ ತಮ್ಮ ಹೇಳಿಕೆಗಳನ್ನು ಭಾರತದಲ್ಲಿ ಪುನರಾವರ್ತಿಸಲಿ ನೋಡೋಣ. ಅವರನ್ನು ನ್ಯಾಯಾಲಯದ ಮುಂದೆ ತರುತ್ತೇವೆ ಎಂದು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಮಂಗಳವಾರ ಹೇಳಿದ್ದಾರೆ.

ಇದನ್ನೂ ಓದಿ: ಹರಿಯಾಣ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ವಿನೇಶ್‌ ಫೋಗಟ್​ಗೆ ಪ್ರತಿಸ್ಪರ್ಧಿ ಯಾರು ಗೊತ್ತಾ?

ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ದೆಹಲಿಯಲ್ಲಿ 1984 ರ ಗಲಭೆಯಲ್ಲಿ 3000 ಸಿಖ್ಖರು ಕೊಲ್ಲಲ್ಪಟ್ಟರು ಎಂದು ಆರ್ಪಿ ಸಿಂಗ್ ಹೇಳಿದರು.

“ದೆಹಲಿಯಲ್ಲಿ 3000 ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು. ಅವರ ಪೇಟಗಳನ್ನು ತೆಗೆಯಲಾಯಿತು, ಅವರ ಕೂದಲನ್ನು ಕತ್ತರಿಸಲಾಯಿತು ಮತ್ತು ಗಡ್ಡವನ್ನು ಬೋಳಿಸಿದರು. ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ ಈ ಘಟನೆ ಸಂಭವಿಸಿತು ಎಂದು ರಾಹುಲ್ ಗಾಂಧಿ ಹೇಳುವುದಿಲ್ಲ. ರಾಹುಲ್ ಗಾಂಧಿ ಅವರು ಸಿಖ್ಖರ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಭಾರತದಲ್ಲಿ ಪುನರಾವರ್ತಿಸಲಿ ಎಂದು ಸವಾಲು ಹಾಕಿದರು. ನಂತರ ನಾನು ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯದ ಮುಂದೆ ತರುತ್ತೇನೆ ಎಂದು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಹೇಳಿದರು.

ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದಾಗಿದೆ ಎಂದು ಹೇಳಿದ್ದರು.

ಮೆರಿಕದ ವರ್ಜೀನಿಯಾದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?: ವರ್ಜೀನಿಯಾದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೊದಲನೆಯದಾಗಿ, ಹೋರಾಟ ಯಾಕೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಹೋರಾಟವು ರಾಜಕೀಯದ ಬಗ್ಗೆ ಅಲ್ಲ. ಇದು ಮೇಲ್ನೋಟಕ್ಕೆ ಸಂಬಂಧಿಸಿದೆ. ನಿಮ್ಮ ಹೆಸರೇನು? ಹೋರಾಟ ಯಾವುದರ ಬಗ್ಗೆ ಎಂದರೆ ಅವರು ಸಿಖ್ಖರು ಅವರಿಗೆ ಭಾರತದಲ್ಲಿ ತನ್ನ ಪೇಟವನ್ನು ಧರಿಸಲು ಅವಕಾಶ ನೀಡುತ್ತಾರೆಯೇ ಎಂಬುದರ ಬಗ್ಗೆ ಆಗಿದೆ. ಅಥವಾ ಅವರು ಸಿಖ್ಖರಾಗಿ ಭಾರತದಲ್ಲಿ ಕಾಡಾವನ್ನು ಧರಿಸಲು ಅನುಮತಿಸಲಾಗುವುದೇ? ಅಥವಾ ಅವನೊಬ್ಬ ಸಿಖ್, ಅವರಿಗೆ ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುವುದೇ? ಇದು ಹೋರಾಟ, ಇದು ಅವರಿಗೆ ಮಾತ್ರವಲ್ಲ ಎಲ್ಲ ಧರ್ಮದವರದ್ದೂ ಎಂದಿದ್ದಾರೆ.

ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿರೋಧ ಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದಿಗೂ ವಿದೇಶದಲ್ಲಿ ಸರ್ಕಾರದ ಮೇಲೆ ದಾಳಿ ನಡೆಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಾಜಪೇಯಿ ದೇಶ ತಲೆ ತಗ್ಗಿಸುವ ಕೆಲಸ ಮಾಡಲಿಲ್ಲ: ” ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಹೊಂದಿದ್ದು ಆ ಸ್ಥಾನವು ಜವಾಬ್ದಾರಿಯುತ ಸ್ಥಾನವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ , ವಿದೇಶದಲ್ಲಿ, ಅವರು ಎಂದಿಗೂ ದೇಶದ ಪ್ರತಿಷ್ಠೆಯನ್ನು ಕೆಡಿಸಲು ಪ್ರಯತ್ನಿಸಲಿಲ್ಲ ಎಂಬುದನ್ನು ನಾನು ರಾಹುಲ್ ಗಾಂಧಿಗೆ ನೆನಪಿಸಲು ಬಯಸುತ್ತೇನೆ. ಸತತ ಮೂರನೇ ಬಾರಿಗೆ ಸೋಲನುಭವಿಸುವ ಮೂಲಕ ಅವರ ಮನಸ್ಸಿನಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಮೋದಿ ವಿರೋಧಿ ಭಾವನೆಗಳು ಬೇರೂರಿವೆ. ಅವರು ನಿರಂತರವಾಗಿ ದೇಶದ ಪ್ರತಿಷ್ಠೆಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರತಿಷ್ಠೆಗೆ ಧಕ್ಕೆ ತರುವುದು ದೇಶದ್ರೋಹಕ್ಕೆ ಸಮ ಎಂದಿದ್ದಾರೆ.

ಸಂವಿಧಾನದ ಮೇಲೆ ದಾಳಿ ಮಾಡಿದವರು ಯಾರು? ತುರ್ತುಪರಿಸ್ಥಿತಿ ಹೇರಿದವರು ಯಾರು? ಅವರು ಭಾರತ್ ಜೋಡೋ ಯಾತ್ರೆಗೆ ಹೋಗುತ್ತಾರೆ ಆದರೆ ಅವರು ಭಾರತದೊಂದಿಗೆ ಅಥವಾ ಭಾರತದ ಜನರೊಂದಿಗೆ ಒಂದಾಗಲು ಸಾಧ್ಯವಿಲ್ಲ,” ಎಂದು ಚೌಹಾಣ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಕಾಂಗ್ರೆಸ್ ಪಕ್ಷವು ತಮ್ಮ ಸುಳ್ಳು ಪ್ರಚಾರವನ್ನು ಬಯಲಿಗೆಳೆಯುವ ಭಯದಲ್ಲಿದೆ ಎಂದು ಕುಟುಕಿದ್ದಾರೆ.

ಸಿಪಿಐ ನಾಯಕ ಸೀತಾರಾಂ ಯೆಚೂರಿ ಆರೋಗ್ಯ ಸ್ಥಿತಿ ಗಂಭೀರ, ವೆಂಟಿಲೇಟರ್​ನಲ್ಲಿ ಚಿಕಿತ್ಸೆ

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…