

ಬೆಂಗಳೂರು: ಪದ್ಮನಾಭ ನಗರದ ಚುನಾವಣೆಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆ ಬಿಜೆಪಿ ಆರ್. ಅಶೋಕ್ರನ್ನು ಕನಕಪುರ ಹಾಗೂ ಪದ್ಮನಾಭ ನಗರದಲ್ಲಿ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಇದೀಗ ಅದಕ್ಕೆ ತಿರುಮಂತ್ರ ಹೂಡಿರುವ ಡಿಕೆಶಿ, ಪದ್ಮನಾಭ ನಗರದಿಂದ ಡಿಕೆ ಸುರೇಶ್ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಅಶೋಕ್ ರನ್ನ ಕಟ್ಟಿಹಾಕಲು ಡಿ.ಕೆ.ಶಿವಕುಮಾರ್ ಮಾಡಿರುವ ತಿರುಮಂತ್ರದಿಂದಾಗಿ ಪದ್ಮನಾಭ ನಗರದಲ್ಲಿ ಇಬ್ಬರು ಅಭ್ಯರ್ಥಿಯಿಂದ ನಾಮಪತ್ರ ಕಾಂಗ್ರೆಸ್ ಹಾಕಿಸಲಿದೆಯಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಈ ನಡುವೆ ರಘುನಾಥ ನಾಯ್ಡು ಇಂದೇ ನಾಮಪತ್ರ ಸಲ್ಲಿಸಲಿದ್ದು ಈ ನಡುವೆ ಡಿ.ಕೆ.ಸುರೇಶ್ ಅವರಿಂದಲೂ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಡಿಕೆಶಿ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಿಕೆಶಿ, "ಪದ್ಮನಾಭ ನಗರದಲ್ಲಿ ರಘುನಾಥ ನಾಯ್ಡು ಅವರಿಗೆ ಟಿಕೇಟ್ ನೀಡಿದ್ದೇವೆ. ಅವರಿಗೆ ಬಿಜೆಪಿಯ ಕಾರ್ಯಕರ್ತರೆ ಬೆಂಬಲ ನೀಡಿದ್ದಾರೆ. ಬಹಳ ಮಂದಿ ಕಾರ್ಪೋರೇಟರ್ಸ್, ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಡ್ಯಾಮೇಜ್ ಕಂಟ್ರೋಲ್ಗೆ ಪ್ರಯತ್ನ ಪಡ್ತಿದಾರೆ. ಇಂದು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಖರ್ಗೆ ಸಾಹೇಬರು, ಜನರಲ್ ಸೆಕ್ರರೆಟರಿ ಅವರೆಲ್ಲ ಚರ್ಚೆ ಮಾಡ್ತಿದಾರೆ. ಉಳಿದ ಕ್ಷೇತ್ರಗಳ ಬಗ್ಗೆ ಇಂದು ಫೈನಲ್ ಮಾಡ್ತಾರೆ.
ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಎಲ್ಲಿ, ಏನು ಎಂಬುದನ್ನ ನೋಡಬೇಕು" ಎಂದು ಪರೋಕ್ಷವಾಗಿ ಪದ್ಮನಾಭ ನಗರದಲ್ಲಿ ನಾಮಪತ್ರ ಸಲ್ಲಿಸುವ ಬಗ್ಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.