More

    ಕಳೆದ ಬಾರಿ ಮಾಡಿದ್ದ ತಪ್ಪುಗಳನ್ನು ಈ ಬಾರಿಯಾದ್ರೂ ಸರಿಪಡಿಸಿಕೊಳ್ತಾರಾ ನಟಿ ರಮ್ಯಾ?

    ಮಂಡ್ಯ: ಸಕ್ಕರೆ ನಾಡು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ ನಟಿ ರಮ್ಯಾ, ಈ ಬಾರಿಯಾದರೂ ಮತದಾನಕ್ಕೆ ಬರ್ತಾರಾ? ಕಳೆದ ಎರಡ್ಮೂರು ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸದ ರಮ್ಯಾ ಈ ಬಾರಿಯಾದ್ರೂ ಹಕ್ಕು ಚಲಾಯಿಸುತ್ತಾರಾ?

    2014ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದಲೇ ಮಾಜಿ ಸಂಸದೆ ರಮ್ಯಾ ದೂರ ಉಳಿದಿದ್ದರು. 2018ರ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರಮ್ಯಾ ಮತ ಹಾಕಲು ಬರಲಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿರುವ ರಮ್ಯಾ, ಈ ಬಾರಿಯಾದರೂ ಮತ ಚಲಾಯಿಸಲು ಬರ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

    ಇದನ್ನೂ ಓದಿ: ತನ್ನೊಂದಿಗೆ ಮಲಗಿದ ವೃದ್ಧನ ವಿಡಿಯೋ ಹರಿಬಿಟ್ಟ ಯುವತಿ: ಮರ್ಯಾದೆಗೆ ಅಂಜಿ ಪ್ರಾಣಬಿಟ್ಟ 72ರ ವೃದ್ಧ

    ಬೂತ್ ನಂ. 170

    ರಮ್ಯಾ ಅವರ ಮತದಾನದ ಹಕ್ಕು ಮಂಡ್ಯದ ವಿದ್ಯಾನಗರದಲ್ಲಿದೆ. ಬೂತ್ ನಂ. 170 ರಲ್ಲಿ ರಮ್ಯಾ ಮತ ಹಾಕಬೇಕಿದೆ. ರಮ್ಯಾ ಅವರ ವೋಟರ್ ಐಡಿ ಸಂಖ್ಯೆ RWJ8703399. ಬೇಜವಬ್ದಾರಿ ಮೆರೆಯದೆ ತಮ್ಮ ಹಕ್ಕು ಚಲಾಯಿಸುತ್ತಾರಾ ಎಂದು ಕಾದು ನೋಡಬೇಕಿದೆ.

    ಮೇ 13ಕ್ಕೆ ಫಲಿತಾಂಶ

    ನಾಳೆ (ಮೇ.10) ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ರಾಜ್ಯ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಅಧಿಕಾರ ರಚನೆಗೆ 113 ಸದಸ್ಯರನ್ನು ಒಳಗೊಂಡ ಸ್ಪಷ್ಟ ಬಹುಮತವನ್ನು ಯಾವುದಾದರೊಂದು ಪಕ್ಷ ಪಡೆಯಬೇಕಿದೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

    ಕಾಂಗ್ರೆಸ್​ನಿಂದ ಹಿಂದುಗಳ ಭಾವನೆಗೆ ಧಕ್ಕೆ: ಕೇಂದ್ರ ಸಚಿವೆ ಶೋಭಾ‌ ಕರಂದ್ಲಾಜೆ ಆಕ್ರೋಶ

    ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ

    ಅತಿವೇಗದಿಂದಾಗಿ ಯೂಟ್ಯೂಬರ್ ದುರಂತ ಸಾವು ಪ್ರಕರಣ: ಯುವಕನ ಕ್ಯಾಮೆರಾ ಬಿಚ್ಚಿಟ್ಟ ರಹಸ್ಯವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts