More

    ಕಾಂಗ್ರೆಸ್​ನಿಂದ ಹಿಂದುಗಳ ಭಾವನೆಗೆ ಧಕ್ಕೆ: ಕೇಂದ್ರ ಸಚಿವೆ ಶೋಭಾ‌ ಕರಂದ್ಲಾಜೆ ಆಕ್ರೋಶ

    ಬೆಂಗಳೂರು: ಶ್ರೀ ಆಂಜನೇಯನ ಹುಟ್ಟು, ಜನ್ಮ ಸ್ಥಳದ ಬಗ್ಗೆ ಅಪಮಾನಿಸುವ ಮೂಲಕ ಹಿಂದುಗಳ ಭಾವನೆ, ಆಚಾರ-ವಿಚಾರ, ಶ್ರದ್ಧೆಗಳಿಗೆ ಕಾಂಗ್ರೆಸ್ ಪಕ್ಷ ಧಕ್ಕೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ‌ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

    ಮಹಾಲಕ್ಷ್ಮಿ ಲೇಔಟ್ ನ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನ ಧೋರಣೆ ವಿರೋಧಿಸಿ ರಾಜ್ಯದ ಎಲ್ಲೆಡೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಹಿಂದು ಧರ್ಮ ರಕ್ಷಣೆಗೆ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೇವೆ. ಜತೆಗೆ ಬಹುಸಂಖ್ಯಾತ ಹಿಂದುಗಳ ನಂಬಿಕೆ, ಭಾವನೆಗಳ ರಕ್ಷಣೆಗಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

    ಇದನ್ನೂ ಓದಿ: ತನ್ನೊಂದಿಗೆ ಮಲಗಿದ ವೃದ್ಧನ ವಿಡಿಯೋ ಹರಿಬಿಟ್ಟ ಯುವತಿ: ಮರ್ಯಾದೆಗೆ ಅಂಜಿ ಪ್ರಾಣಬಿಟ್ಟ 72ರ ವೃದ್ಧ

    ಚುನಾವಣಾ ರಾಜಕೀಯ ಬೇರೆ‌. ಧಾರ್ಮಿಕ ಭಾವನೆ ಬೇರೆಯಾಗಿದೆ‌. ಕಿಷ್ಕಿಂಧೆ ಆಂಜನೇಯನ ಜನ್ಮ ಸ್ಥಳ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಂಜನೀ ಪುತ್ರನೆಂದು ಸಾರುವ ಪೌರಾಣಿಕ ಐತಿಹ್ಯಗಳಿವೆ. ಆದರೂ ಕಾಂಗ್ರೆಸ್ ನ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಜನ್ಮಸ್ಥಳ, ಭಗವಾನ್ ಆಂಜನೇಯನ ಕುರುಹುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವ ಜತೆಗೆ ಸೂರ್ಯಪುತ್ರ ಎನ್ನುವ ಮೂಲಕ ಅಪಮಾನಿಸಿದ್ದಾರೆ ಎಂದು ಕಿಡಿಕಾರಿದರು.

    ಅಭಿವೃದ್ಧಿ, ಡಬಲ್ ಇಂಜಿನ್ ಸರ್ಕಾರದ ಆಧಾರದಲ್ಲಿ ಬಿಜೆಪಿ ಚುನಾವಣೆ ಎದುರಿಸಿದೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ, ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂಬ ಭರವಸೆ ನೀಡಿ ಬಹುಸಂಖ್ಯಾತ ಹಿಂದುಗಳಲ್ಲಿ ಭಯ-ಭೀತಿ ಸೃಷ್ಟಿಸುವ ಕೆಲಸ ಮಾಡಿದೆ ಎಂದು ಶೋಭಾ‌ ಕರಂದ್ಲಾಜೆ ಆರೋಪಿಸಿದರು.

    ಕರ್ನಾಟಕ ಚುನಾವಣೆ: ಬೀದಿಯಲ್ಲಿ ಸಿಕ್ತು ಝಣ ಝಣ ಕಾಂಚಾಣ! ಮರದ ಬುಡದಲ್ಲಿಯೂ ಗರಿ ಗರಿ ನೋಟು ಪತ್ತೆ

    ಅತಿವೇಗದಿಂದಾಗಿ ಯೂಟ್ಯೂಬರ್ ದುರಂತ ಸಾವು ಪ್ರಕರಣ: ಯುವಕನ ಕ್ಯಾಮೆರಾ ಬಿಚ್ಚಿಟ್ಟ ರಹಸ್ಯವಿದು…

    ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಗೋವಾ ಸರ್ಕಾರ ಸಾಥ್​, ಸರ್ಕಾರಿ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts