ಕಾವು ಮುದರ್‌ಪಲ್ಲದಲ್ಲಿ ಕಾಡಾನೆ ಉಪಟಳ

New Project (53)
Published on

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮದ ಕಾವು ಸಮೀಪದ ಮುದರ್‌ಪಲ್ಲ ಭಾಗಕ್ಕೆ ಎರಡನೇ ಬಾರಿ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ.

ಮಾಡ್ನೂರು ಗ್ರಾಮದ ಚಾಕೋಟೆ ವ್ಯಾಪ್ತಿಗೆ ಸೋಮವಾರ ರಾತ್ರಿ ಲಗ್ಗೆಯಿಟ್ಟು ಆ ಭಾಗದ ಕೃಷಿಕರ ತೋಟಗಳಲ್ಲಿ ಕೃಷಿ ಹಾನಿ ಮಾಡಿದ್ದ ಕಾಡಾನೆ ಮಂಗಳವಾರ ರಾತ್ರಿ ಕಾವು ಉಜ್ರುಗುಳಿ ಸಮೀಪದ ಮುದರ್‌ಪಲ್ಲ ಭಾಗಕ್ಕೆ ಕಾಲಿಟ್ಟು ಕೃಷಿ ಹಾನಿ ಉಪಟಳ ಮುಂದುವರಿಸಿದೆ. ಪುದರ್‌ಪಲ್ಲದ ಕೃಷಿಕರಾದ ದೇರಣ್ಣ ರೈ, ದಯಾನಂದ ರೈ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆ, ಅಡಕೆ, ದೀವಿಹಲಸು ಕೃಷಿ ಹಾನಿಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net