ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

pooja murder 1
Published on

ಹಾಸನ: ಅನುಮಾನ ಮಿತಿ ಮೀರಿದ್ರೆ ಏನೆಲ್ಲ ಅವಾಂತರ ಸೃಷ್ಟಿಯಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಲ್ಲೊಬ್ಬ ಭೂಪ ರಾತ್ರೋರಾತ್ರಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಇತ್ತ ಏನೂ ಅರಿಯದ ಪುಟ್ಟ ಬಾಲಕ ಅನಾಥವಾಗಿದ್ದಾನೆ.

ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಪೂಜಾ(25) ಮೃತಪಟ್ಟಿದ್ದಾಳೆ. ಕೊಲೆ ಆರೋಪಿ ಗಂಗಾಧರ್(28) ತಲೆಮರೆಸಿಕೊಂಡಿದ್ದಾನೆ.

ಹೊಳೆನರಸೀಪುರದ ಕುರಬರಹಳ್ಳಿಯ ನಿಂಗೇಗೌಡ ಹಾಗೂ ಸಾವಿತ್ರಿ ದಂಪತಿಯ ಪೂಜಾಳ ಮದುವೆ 2014ರಲ್ಲಿ ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿಯ ಗಂಗಾಧರ ಎಂಬಾತನೊಂದಿಗೆ ಆಗಿತ್ತು. ಈ ದಂಪತಿಗೆ ಸುಮಾರು 5 ವರ್ಷದ ಗಂಡು ಮಗು ಇದೆ. ಮಂಗಳವಾರ ರಾತ್ರಿ ರಾಚೇನಹಳ್ಳಿಯಲ್ಲಿ ಹೆಂಡತಿಯನ್ನೇ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದ ಗಂಗಾಧರ್​ ತಲೆ ಮರೆಸಿಕೊಂಡಿದ್ದ.

ಗಂಗಾಧರ್​ಗೆ ಪತ್ನಿ ಪೂಜಾಳ ಮೇಲೆ ಅನುಮಾನ ಇತ್ತು. ಆಕೆ ಯಾರ ಜತೆ ಮಾತನಾಡಿರೂ ಅನುಮಾನಿಸಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ನನ್ನ ಅಕ್ಕನಿಗೆ ಭಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಅವಳು ಯಾವುದೇ ಗಂಡಸರ ಜತೆ ಮಾತನಾಡಿದರೂ ಅನುಮಾನಗೊಂಡು‌ ಹಿಂಸೆ ನೀಡುತ್ತಿದ್ದ ಎಂದು ಮೃತ ಪೂಜಾಳ ತಂಗಿ ಪೂರ್ಣಿಮ ಆರೊಪ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net