

ಬೆಂಗಳೂರು: ದಂಪತಿಗಳ ನಡುವೆ ಪ್ರೀತಿ, ಕೋಪ, ತಾಪ, ಜಗಳ, ಸರಸ, ವಿರಸ ಇದ್ದದ್ದೇ... ಕೆಲವೊಮ್ಮೆ ಗಂಡನ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವ ಹೆಂಡತಿಯ ಕೋಪದ ಪ್ರೀತಿ ಎಷ್ಟು ಚೆಂದ ಎಂಬುದನ್ನು ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ತೋರಿಸಲಾಗಿದೆ.
ವಿಡಿಯೋದಲ್ಲಿ ತೋರಿಸಿರುವ ಹಾಗೆ ಪತಿ ಪ್ರೀತಿಯಿಂದ ಪತ್ನಿಯ ಮನವೊಲಿಸಿ ಆಕೆ ಹೇಳಿದ್ದನ್ನೆಲ್ಲ ಕೇಳುತ್ತಾನೆ. ಕೊನೆಗೆ ಅವಳು ಬಾಗಿಲು ತೆರೆಯಲು ಒಪ್ಪಿಕೊಳ್ಳುತ್ತಾಳೆ. ಇಂತಹ ಜೋಡಿಯ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದ ಆರಂಭದಲ್ಲಿ ಪತಿ ಮನೆಯ ಹೊರಗೆ ನಿಂತಿರುವುದನ್ನು ನೋಡಬಹುದು. ಹೆಂಡತಿ ಮನೆಯ ಬಾಗಿಲು ತೆರೆಯುವುದಿಲ್ಲ. ಅವಳು ಅವನನ್ನು ಮನೆಯಿಂದ ಹೊರಗೆ ಇರುವಂತೆ ಕೇಳುತ್ತಾಳೆ. ಯಾಕೆ ಅಂತೀರಾ?.
ಗಂಡ ಮನೆಯ ಹೊರಗೆ ನಿಂತು ಡೋರ್ ಬೆಲ್ ಬಾರಿಸುತ್ತಲೇ ಇರುತ್ತಾನೆ. ಆಗ ಅವನ ಹೆಂಡತಿ ಬಾಗಿಲ ಬಳಿ ಬಂದು ಅವನನ್ನು ಕೇಳುತ್ತಾಳೆ..."ಏನಾಯಿತು, ಏಕೆ ಗಂಟೆ ಬಾರಿಸುತ್ತಿದ್ದೀರಿ", ಅದಕ್ಕೆ ಗಂಡ ಬಾಗಿಲು ತೆರೆಯಲು ಕೇಳುತ್ತಾನೆ. ಆದರೆ ಹೆಂಡತಿ ಬಾಗಿಲು ತೆರೆಯುವುದಿಲ್ಲ ಎಂದು ಹೇಳುತ್ತಾಳೆ. "ನೀವು 12 ಗಂಟೆಗೆ ಮನೆಯಿಂದ ಹೊರಟು ಒಂದು ಗಂಟೆಗೆ ಬರುತ್ತೇನೆ ಎಂದು ಹೇಳಿದ್ರಿ. ಈಗ 2 ಗಂಟೆಯಾಗಿದೆ ಮತ್ತು ನಾನು 1:30 ರಿಂದ ನಿಮಗೆ ಕರೆ ಮಾಡುತ್ತಿದ್ದೇನೆ. ನೀವು 2:15 ಕ್ಕೆ ಫೋನ್ ತೆಗೆದುಕೊಂಡು ನಾನು 10 ನಿಮಿಷಗಳಲ್ಲಿ ಬರುತ್ತೇನೆ ಎಂದು ಹೇಳಿದಿರಿ. 3 ಗಂಟೆಗೆ ಇನ್ನೂ 10 ನಿಮಿಷ ಬಾಕಿ ಇದೆ. ಈಗ ನೀವು ಬಂದಿದ್ದೀರಿ" ಎನ್ನುತ್ತಾಳೆ.
ಇದಾದ ನಂತರ ಪತಿ ತನ್ನನ್ನು ಒಳಗೆ ಬರಲು ಅವಕಾಶ ಮಾಡಿಕೊಡು ಎಂದು ವಿನಂತಿಸುತ್ತಾನೆ. ಈ ಸಂದರ್ಭದಲ್ಲಿ, ಅವಕಾಶವನ್ನು ಉಪಯೋಗಿಸಿಕೊಂಡ ಪತ್ನಿ, ಪತಿಯಿಂದ 500 ರೂ ಕೇಳುತ್ತಾಳೆ. ಮೊದಲು 500 ರೂ ನೋಟು ನೀಡಿ ನಂತರ ಬಾಗಿಲು ತೆರೆಯುತ್ತೇನೆ ಎಂದು ಹೇಳುತ್ತಾಳೆ. ಕೊನೆಗೆ ಪತಿ ಪತ್ನಿಯ ಮಾತಿಗೆ ಒಪ್ಪಿ ತನ್ನ ಪರ್ಸ್‌ನಿಂದ 500 ರೂ. ಕೊಡುತ್ತಾನೆ. ಆಗ ಹೆಂಡತಿ ಕೇಳುತ್ತಾಳೆ, "ಈಗ ಹೇಳಿ, ನೀವು ಹೀಗೆ ಮಾಡುತ್ತೀರಾ?", ಪತಿ "ಇಲ್ಲ" ಎಂದು ಉತ್ತರಿಸಿದಾಗ ಹೆಂಡತಿ ಬಾಗಿಲು ತೆರೆದು ಪತಿಯನ್ನು ಒಳಗೆ ಬಿಡುತ್ತಾಳೆ.