

ಅಹಮದಾಬಾದ್: ಗಂಡನ ದೇಹದಲ್ಲಿ ಲವ್ ಬೈಟ್ ಕಂಡ ಹೆಂಡತಿ, ಅವನೊಂದಿಗೆ ಜಗಳಕ್ಕೆ ನಿಂತಿದ್ದು, ಇದೀಗ ಗಂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ತನ್ನ ಅಮ್ಮ ಮತ್ತು ಸಹೋದರನೇ ಆತನ ಮೇಲೆ ಹಲ್ಲೆ ಮಾಡಿದ್ದಾಗಿ ಆತ ದೂರು ದಾಖಲಿಸಿದ್ದಾನೆ.
ಅಹಮದಾಬಾದ್ನ ವಾಸ್ನಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೀತು ಓಡ್ ದೂರು ಸಲ್ಲಿಸಿರುವ ಪತಿ. ಈತ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಒಂದು ದಿನ ಈತನ ಕೈನಲ್ಲಿ ಲವ್ ಬೈಟ್ ಇರುವುದನ್ನು ಹೆಂಡತಿ ಕಂಡಿದ್ದಾಳೆ. ಇದು ಬೇರೆಯ ಹೆಂಗಸಿಂದಲೇ ಆಗಿರುವ ಲವ್ ಬೈಟ್ ಎಂದು ಆರೋಪಿಸಿದ್ದಾಳೆ. ಅದೇ ವಿಚಾರವಾಗಿ ಗಂಡನ ಜತೆ ಜಗಳಕ್ಕೆ ನಿಂತಿದೆ.
ಗಂಡ ಹೆಂಡತಿ ಜಗಳದ ಮಧ್ಯೆ ಹೆಂಡತಿಯ ಚಿಕ್ಕಪ್ಪನೂ ಹೋಗಿದ್ದಾನೆ. ನೀನು ನಿನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಚಿಕ್ಕಪ್ಪ ಆರೋಪಿಸಿದ್ದಾನೆ. ಈ ವಿಚಾರವಾಗಿ ಅವರಿಬ್ಬರ ನಡುವೆ ಜಗಳವಾಗಿದೆ. ಜೀತು ಮೇಲೆ ಹೆಂಡತಿಯ ಚಿಕ್ಕಪ್ಪ ಹಲ್ಲೆ ಮಾಡಿದನಂತೆ. ಆ ಕಾರಣವಿಟ್ಟುಕೊಂಡು ಜೀತು ಪೊಲೀಸ್ ಠಾಣೆಯ ಮೆಟ್ಟಿಲೇರಿ, ದೂರು ದಾಖಲಿಸಿದ್ದಾನೆ.
ಈ ರೀತಿ ದೂರನ್ನಿತ್ತು ಮನೆಗೆ ಬಂದ ಜೀತುಗೆ ಆತನ ತಾಯಿ ಮತ್ತು ಸಹೋದರ ಬೈದಿದ್ದಾರೆ. ಇಬ್ಬರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರಂತೆ. ಎರಡನೇ ಬಾರಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಜೀತು ತನ್ನ ತಾಯಿ ಮತ್ತು ಸಹೋದರನ ವಿರುದ್ಧವೂ ದೂರು ದಾಖಲಿಸಿ ಬಂದಿದ್ದಾನೆ. (ಏಜೆನ್ಸೀಸ್)