ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿ: ಮೆಟ್ಟಿಲ ಬಳಿಯೇ ಪ್ರಾಣ ಬಿಟ್ಟ ಹೆಂಡತಿ..

steps
ಸಾಂದರ್ಭಿಕ ಚಿತ್ರ
Published on

ಪುಣೆ: ಪತಿ ತನ್ನನ್ನು ಮನೆಯಿಂದ ಹೊರಹಾಕಿದ ಕಾರಣಕ್ಕೆ ಮಹಿಳೆಯೊಬ್ಬಳು ಮನೆಯ ಮೆಟ್ಟಿಲ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ.

ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದ ಚಿರತೆ: ಮೈದಡವಿ, ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು..!

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಲಭಾ ಸುರೇಂದ್ರ ಪೂಜಾರಿ (42) ಎಂದು ಗುರುತಿಸಲಾಗಿದ್ದು, ವೈಷ್ಣವ್ ಅಪಾರ್ಟ್‌ಮೆಂಟ್​ನಲ್ಲಿ ತನ್ನ ಗಂಡನೊಡನೆ ವಾಸಿಸುತ್ತಿದ್ದಳು ಎಂದು ಹೇಳಲಾಗಿದೆ. ಘಟನೆ ಸಂಬಂಧ ಮಹಿಳೆಯ ಸಹೋದರನ ದೂರಿನ ಮೇರೆಗೆ ಆಕೆಯ ಪತಿ ಸುರೇಂದ್ರ ರವೀಂದ್ರ ಪೂಜಾರಿ (42), ಧೀರ ಸಮೀರ್ ಹಾಗೂ ಅತ್ತೆ ರಜನಿ ವಿರುದ್ಧ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಹಾಗೂ ಆತನ ಕುಟುಂಬದವರು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪತಿ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಆದರೆ ಮಹಿಳೆ ಅಪಾರ್ಟ್​ಮೆಂಟ್​ನ ಮೆಟ್ಟಿಲ ಬಳಿಯೇ ಮೂರು ದಿನಗಳಿಂದ ವಾಸಿಸುತ್ತಿದ್ದು ಆಕೆ ಹಸಿವಿನಿಂದ ಬಳಲುತ್ತಿದ್ದಳು. ಕೊನೆಗೆ ಮಹಿಳೆಯು ಮೆಟ್ಟಿಲು ಪಕ್ಕದ ಕಿಟಕಿಗೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net