ಗ್ರಾಮ ಪಂಚಾಯಿತಿ ಚುನಾವಣೆಯ ಪರಾಜಿತ ಅಭ್ಯರ್ಥಿಯಿಂದಲೇ ಪತ್ನಿ ಕೊಲೆ

murder case
Published on

ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯ ಪರಾಜಿತ ಅಭ್ಯರ್ಥಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಉದಯ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಸೀತಲ್ ರಾಠೋಡ್(36) ಕೊಲೆಯಾದ ದುರ್ದೈವಿ.  ಪತಿ ಪ್ರೇಮಸಿಂಗ್ ಕೊಲೆ ಮಾಡಿದ್ದಾನೆ ಎಂದು ಶೀತಲ್ ಪೋಷಕರು ಆರೋಪಿಸಿದ್ದಾರೆ. ಕತ್ತು ಹಿಸುಕಿ ಕೊಲೆ ಮಾಡಿ, ನೀರಿನ ಟ್ಯಾಂಕ್ನಲ್ಲಿ ಹಾಕಿ ಆಕಸ್ಮಿಕವಾಗಿ ಬಿದ್ದು ಇಲ್ಲವೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸುವ ಪ್ರಯತ್ನ ಮಾಡಿದ್ದಾನೆ. ನಿಮ್ಮ ಮಗಳು ಟ್ಯಾಂಕಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೆತ್ತರಿಗೆ ಕರೆ ಮಾಡಿ ತಿಳಿಸಿದ್ದ.

ಸುದ್ದಿ ಅರಿಯುತ್ತಲೇ ದೌಡಾಯಿಸಿದ ಶೀತಲ್ ಮನೆಯವರು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿರಿ ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ತಂದಾಗ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ತಾಯಿ ಅಸುನೀಗಿದರೆ, ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಮೂರು ಮಕ್ಕಳು ಅನಾಥಪ್ರಜ್ಞೆ ಎದುರಿಸುವಂತಾಗಿದೆ.

ಲಾಕ್ಡೌನ್ ವೇಳೆ ದಂಪತಿ ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದರು. ಶೀತಲ್ ಪೋಷಕರು ಉದಯನಗರದಲ್ಲಿದ್ದ ಮನೆಯನ್ನು ಅವರಿಗೆ ಬಿಟ್ಟುಕೊಟ್ಟಿದ್ದರು. ಇತ್ತೀಚಿಗೆ ನಡೆದ  ಗ್ರಾಪಂ ಚುನಾವಣೆಯಲ್ಲಿ ಪ್ರೇಮಸಿಂಗ್ ದಿನಸಿ ತಾಂಡಾದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ. ಇದಕ್ಕೂ ಮೊದಲೇ ಪರಸ್ಪರರ ಬಗ್ಗೆ ಇಬ್ಬರಲ್ಲೂ ಅನುಮಾನ ಶುರುವಾಗಿತ್ತು. ಚುನಾವಣೆಯಲ್ಲಿ ಸೋತ ನಂತರ ಹಣಕ್ಕಾಗಿ ಪೀಡಿಸುತ್ತಿದ್ದ ಪ್ರೇಮಸಿಂಗ್, ಆಕೆಯ ಚಿನ್ನಾಭರಣ ಕೊಂಡೊಯ್ದಿದ್ದ. ಅಲ್ಲದೆ ಪತ್ನಿ ಮತ್ತು ಮಕ್ಕಳ ಹೆಸರಲ್ಲಿದ್ದ 7 ಲಕ್ಷ ರೂ. ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಇದನ್ನೂ ಓದಿರಿ ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಪತಿ ಕುಟುಂಬದವರು ಆಕೆ ಬಗ್ಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದರೆ, ಪ್ರೇಮಸಿಂಗ್​ಗೂ ದಿನಸಿ ತಾಂಡಾದಲ್ಲಿನ ಮಹಿಳೆ ಜತೆ ಅಕ್ರಮ ಸಂಬಂಧವಿತ್ತು ಎಂಬುದು ಶೀತಲ್ ಮನೆಯವರ ಪ್ರತ್ಯಾರೋಪ. ಇನ್ನು ಮಗಳ ಬಳಿಯಿದ್ದ ಹಣ ಕೊಂಡೊಯ್ದು ಆಕೆಗೆ ಕೊಟ್ಟಿದ್ದಾನೆ ಎಂಬುದು ಶೀತಲ್ ತಾಯಿ ಕಮಲಾಬಾಯಿ ಆರೋಪ.

ಶೀತಲ್ ಬೇರೆ ವ್ಯಕ್ತಿ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಈಚೆಗೆ ಟಿಕ್ಟಾಕ್ ಹುಚ್ಚು ಹೆಚ್ಚಿತ್ತು. ಸದಾ ಟಿಕ್ಟಾಕ್ ಮಾಡುವುದು, ಹೆಲೋ ಆ್ಯಪ್​ನಲ್ಲಿ ನೃತ್ಯ, ಡೈಲಾಗ್ ಹೇಳಿದ ದೃಶ್ಯ ಅಪ್ಲೋಡ್ ಮಾಡುವುದರಲ್ಲೇ ತಲ್ಲೀನಳಾಗಿರುತ್ತಿದ್ದಳು. ಮೂರು ಮಕ್ಕಳಿದ್ದರೂ ಗಮನ ಕೊಡದೆ ಫ್ಯಾಶನ್​ಗೆ ಮರುಳಾಗಿದ್ದಳು ಎಂದು ಪ್ರೇಮಸಿಂಗ್ ಕುಟುಂಬದವರು ಆರೋಪಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net