ಪತಿಗೆ 77,143 ರೂ. ಕೀ ಚೈನ್​ ಗಿಫ್ಟ್​ ಕೊಟ್ಟ ಪತ್ನಿ! ಕೋಪಗೊಂಡ ಗಂಡ ಮಾಡಿದ್ದೇನು? ವಿಡಿಯೋ ನೋಡಿ.. | Key Chain

dk - 2025-04-06T164954.297
Published on

Key Chain : ಸೋಷಿಯಲ್​ ಮೀಡಿಯಾದಲ್ಲಿ ಸಾಮಾನ್ಯವಾಗಿ ದಿನಂಪ್ರತಿ ಒಂದಿಲ್ಲೊಂದು ವಿಡಿಯೋಗಳು ಯಾವುದೋ ವಿಚಾರಕ್ಕೆ ಭಾರೀ ವೈರಲ್​ ಆಗುತ್ತಿರುತ್ತದೆ. ಇದೀಗ ಇಂತದ್ದೇ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

ಹೊಳೆಯುವ ಬೆಕ್ಕಿನ ಆಕಾರದ ಚೈನ್​ ಗಿಫ್ಟ್​​ವೊಂದನ್ನು ಬರೊಬ್ಬರಿ 77,143 ರೂ.​ ಕೊಟ್ಟ ಪತ್ನಿಯೊಬ್ಬಳು ತನ್ನ ಪತಿಗೆ ಗಿಫ್ಟ್​ ಕೊಟ್ಟಿದ್ದಾಳೆ. ಇದನ್ನು ವಿಡಿಯೋ ಮಾಡಿರುವ ಈಕೆ, ಚೈನ್​ ಗಿಫ್ಟ್​​ ದರದ ಬಗ್ಗೆ ಪತಿ ಜತೆ ಮಾತನಾಡಿದ್ದಾಳೆ. ಗಿಫ್ಟ್ ದರ ಕೇಳಿದ ಪತಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾನೆ.

ವಿಡಿಯೋದಲ್ಲೇನಿದೆ..?

ನೀಲಿ ಬಣ್ಣದ ಸೀರೆ ಮತ್ತು ಸಂಪ್ರದಾಯಕ ಆಭರಣಗಳನ್ನು ಧರಿಸಿ, ಕ್ರಿಸ್ಟಿಯಾನ ಕ್ಯಾರಿ ಎಂಬ ಭಾರತೀಯ ಮಹಿಳೆ ವಿಡಿಯೋ ಚಿತ್ರಿಕರಿಸಲು ಆರಂಭಿಸಿದ್ದಾಳೆ. ನಾನು ಕೀ ಚೈನ್​ ಅನ್ನು ಆನ್​ಲೈನ್​ನಲ್ಲಿ 77,143 ರೂ. ಕೊಟ್ಟು ಖರೀದಿ ಮಾಡಿದ್ದಾನೆ ಎಂದು ಹೇಳಿದ್ದಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಂಡ, ಆಕೆಯ ಮೇಲೆ ಕೊಂಚ ಕೋಪನಗೊಂಡ ಇತ ಇದು ತುಂಬಾ ಕೆಟ್ಟದ್ದು, ಇದು ಸರಿಯಲ್ಲ. ಈ ಮೊತ್ತಕ್ಕೆ ಹೊಸದೊಂದು ಕಾರನ್ನು ಖರೀಸಿಬಹುದು ಎಂದು ಹೇಳಿ ಹೊರಟು ಹೋದ ಕ್ಲೀಪ್​​ಗಳು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸೋಷಿಯಲ್​ ಫ್ಲಾಟ್​ಫಾರಂನಲ್ಲಿ ತುಂಬಾನೇ ವೈರಲ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net