

Woman Beats Husband: ಮನೆಯಲ್ಲಿ ಗಂಡ ಹೆಂಡತಿ ಜಗಳ ಆಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಗಂಡ ಹೆಂಡತಿ ಜಗಳಗಳು ಮನೆಬಿಟ್ಟು ಬೀದಿಗಿಳಿದಿದೆ. ಎಷ್ಟೋ ಮದುವೆ ಸಮಾರಂಭಗಳಲ್ಲಿ ಸಣ್ಣ ವಿಷಯಕ್ಕೆ ಗಂಡ ಹೆಂಡತಿ ಕೂಗಾಡಿ, ಕಿತ್ತಾಡಿರುವ ವಿಡಿಯೋಗಳು ವೈರಲ್ ಆಗಿರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಈಗ ನಡು ರಸ್ತೆಯಲ್ಲಿ ಹೆಂಡತಿಯೊಬ್ಬಳು ತನ್ನ ಗಂಡನಿಗೆ ಚಪ್ಪಲಿಯಿಮದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ರಸ್ತೆಯಲ್ಲಿ ಈ ಘಟನೆ ನಡೆದಿದೆ. 21 ಸೆಕೆಂಡ್‌ಗಳ ಈ ವಿಡಿಯೋವನ್ನು @gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಚಲಿಸುವ ಬೈಕ್ ಮೇಲೆ ಗಂಡ ಹೆಂಡತಿಯ ಜಗಳವಾಡುತ್ತಿದ್ದು, ಹೆಂಡತಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಗಂಡನಿಗೆ ಸರಿಯಾಗಿ ಹೊಡೆಯುತ್ತಿದ್ದಾಳೆ ಎಂದು ಬರೆದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ ಹೆಂಡತಿ ಬೈಕ್ನಲ್ಲಿ ಗಂಡನ ಹಿಂದೆ ಕುಳಿತಿದ್ದಾಳೆ, ಇದ್ದಕ್ಕಿದ್ದಂತೆ ಸಿಟ್ಟಿಗೆದ್ದ ಹೆಂಡತಿ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಆತನಿಗೆ ಸರಿಯಾಗಿ ಹೊಡೆದಿದ್ದಾಳೆ. ಆದರೆ ಗಂಡ ಮಾತ್ರ ಇದ್ಯಾವುದಕ್ಕೋ ಪ್ರತಿಕ್ರಿಯಿಸದೇ ವೇಗವಾಗಿ ಬೈಕ್ ಓಡಿಸಿದ್ದಾನೆ. ವಿಡಿಯೋ ಮಾಡುವುದನ್ನು ನೋಡುವವರೆಗೂ ಹೆಂಡತಿ ಗಂಡನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ.
ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಒಬ್ಬ ನೆಟ್ಟಿಗ ಈ ವಿಡಿಯೋಗೆ ಸಹೋದರ ಹೆಲ್ಮೆಟ್ ಧರಿಸಿದ್ದರೆ ಇಂತಹ ಅನಾಹುತ ತಪ್ಪುತ್ತಿತ್ತು ಎಂದರೆ, ಇನ್ನೊಬ್ಬರು ಕೂಡ ಕೌಟುಂಬಿಕ ಹಿಂಸೆ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ, ಇದು ದೈಹಿಕ ಕಿರುಕುಳದ ಜೊತೆಗೆ, ಈ ಮಹಿಳೆ ತಮ್ಮ ಮತ್ತು ರಸ್ತೆಯಲ್ಲಿರುವ ಇತರರ ಜೀವಗಳಿಗೆ ಅಪಾಯವನ್ನುಂಟುಮಾಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಆ ಬಡ ವ್ಯಕ್ತಿ ಶೀಘ್ರದಲ್ಲೇ ಅವಳಿಂದ ಮುಕ್ತನಾಗುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)