ಕಾಸರಗೋಡು: ನಗರದ ವಿವಿಧೆಡೆ ಕಳ್ಳನೋಟುಗಳು ಚಲಾವಣೆಯಲ್ಲಿದ್ದು, ಈ ಬಗ್ಗೆ ಜನರು ಜಾಗ್ರತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ. 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಇದರಲ್ಲಿ ರಿಸರ್ವ್ ಬ್ಯಾಂಕ್ ಹೆಸರಿನ ಬದಲಿಗೆ ‘ರಿವರ್ಸ್ ಬ್ಯಾಂಕ್’ ಎಂದು ಮುದ್ರಿಸಲಾಗಿದೆ. ಈ ನಕಲಿ ನೋಟುಗಳು ಅಸಲಿ ನೋಟನ್ನು ಹೋಲುತ್ತಿದ್ದು, ಸೂಕ್ಷ್ಮವಾಗಿ ಪರಿಶೋಧಿಸಿದಾಗ ಮಾತ್ರ ಸಾಚಾತನ ಪತ್ತೆಹಚ್ಚಬಹುದಾಗಿದೆ. ದೊಡ್ಡ ವ್ಯವಹಾರಗಳಿಗೆ ಈ ನೋಟುಗಳನ್ನು ಬಳಸುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ನಗರದ ಬ್ಯಾಂಕ್ ಒಂದಕ್ಕೆ ಪಾವತಿಸಲು ತಂದ 500 ರೂ. ಮುಖಬೆಲೆಯ ನೋಟುಗಳಲ್ಲಿ 5 ಖೋಟಾ ನೋಟು ಪತ್ತೆಹಚ್ಚಲಾಗಿದೆ.
