ವೈದ್ಯರಿಗೇಕೆ ನಾವು ಚಪ್ಪಾಳೆ ತಟ್ಟಬೇಕು?

Doctors
Published on

ಬೆಂಗಳೂರು: ಕರೊನಾ ಸೋಂಕನ್ನು ತಡೆಗಟ್ಟಲು ಅತ್ಯಗತ್ಯವಾಗಿರುವ ಸಾಮಾಜಿಕ ಅಂತರದ ಅಭ್ಯಾಸವನ್ನು ಜನರಲ್ಲಿ ಮೂಡಿಸುವುದು ಹಾಗೂ ಮುಂದಿನ ಕೆಟ್ಟ ದಿನಗಳಿಗೆ ಜನರನ್ನು ಸಿದ್ಧಪಡಿಸುವುದು ಭಾನುವಾರ ದೇಶಾದ್ಯಂತ ಕರೆ ನೀಡಲಾಗಿರುವ ‘ಜನತಾ ಕರ್ಫ್ಯೂ’ ಉದ್ದೇಶ.

ಇದರ ಜತೆಗೇ, ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಯಲ್ಲಿ ನಿಂತು ವೈದ್ಯರು, ಶುಶ್ರೂಶಕರು ಸೇರಿ ವೈದ್ಯಕೀಯ ಸಿಬ್ಬಂದಿಗೆ ಅಭಿನಂದಿಸಿ ಚಪ್ಪಾಳೆ ತಟ್ಟುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಕರೊನಾ ಸೋಂಕು ಆವರಿಸಿದಂದಿನಿಂದ ತಮ್ಮೆಲ್ಲ ರಜೆಯನ್ನೂ ರದ್ದುಪಡಿಸಿ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇರಾನ್​ನಲ್ಲೂ ವೈದ್ಯಕೀಯ ವ್ಯವಸ್ಥೆ ಹಾಗೂ ಸಿಬ್ಬಂದಿ ಕಡಿಮೆಯಿರುವ ಕಾರಣ ವೈದ್ಯರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇರಾನ್​ನಲ್ಲಿ ವೈದ್ಯರ ಕೊರತೆ ಇರುವುದರಿಂದ ವೈದ್ಯೆ ಶಿರೀನ್ ರೌಹಾನಿ ಶುಶ್ರೂಶೆಯಲ್ಲಿ ತೊಡಗಿದ್ದರು. ಇದರಿಂದಾಗಿ ಸ್ವತಃ ವೈದ್ಯರಿಗೇ ಕರೊನಾ ತಗುಲಿತು. ಇದನ್ನೂ ಲೆಕ್ಕಿಸದೆ, ತಮಗೆ ಚಿಕಿತ್ಸೆ ಪಡೆಯುವ ಜತೆಗೆ ಶುಶ್ರೂಶೆಯನ್ನೂ ಮುಂದುವರಿಸಿದ್ದರು. ಆದರೆ ವೈರಾಣುವಿನ ದಾಳಿಗೆ ತುತ್ತಾಗಿ ಎರಡು ದಿನದ ಹಿಂದೆ ರೌಹಾನಿ ನಿಧನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net