More

    ರಶ್ಮಿಕಾ ಮಂದಣ್ಣ ಹಿಂದಿಯ ಜೆರ್ಸಿ ಕೈಬಿಟ್ಟಿದ್ದೇಕೆ?

    ಬೆಂಗಳೂರು: ಸೌತ್ ಸಿನಿಮಾಗಳ ಜತೆಗೆ ಬಾಲಿವುಡ್​ನಲ್ಲಿಯೂ ಕನ್ನಡತಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹಿಂದಿಯಲ್ಲಿ ‘ಮಿಷನ್ ಮಜ್ನು’, ಅಮಿತಾಭ್ ಬಚ್ಚನ್ ಜತೆಗೆ ‘ಗುಡ್​ಬೈ’ ಚಿತ್ರದ ಕೆಲಸಗಳನ್ನೂ ಆರಂಭಿಸಿದ್ದಾರೆ.

    ಹೀಗಿರುವಾಗಲೇ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದು ಹಿಂದಿಯಲ್ಲಿ ತಯಾರಾಗುತ್ತಿರುವ ‘ಜೆರ್ಸಿ’ ಚಿತ್ರದ ರಿಮೇಕ್ ಕುರಿತು. ಹೌದು, ಕಳೆದ ವರ್ಷವೇ ‘ಜೆರ್ಸಿ’ ಚಿತ್ರದ ಹಿಂದಿ ರಿಮೇಕ್​ನಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಅದೇ ರೀತಿ ನಿರ್ದೇಶಕರೂ ರಶ್ಮಿಕಾಗೆ ಅಪ್ರೋಚ್ ಸಹ ಮಾಡಿದ್ದರು. ಆದರೆ, ಒಂದಷ್ಟು ಕಾರಣ ನೀಡಿ ಸಿನಿಮಾದಿಂದ ಹಿಂದೆ ಸರಿದಿದ್ದರು.

    ಏಕೆ ಆ ಚಿತ್ರ ಕೈ ಬಿಟ್ಟಿದ್ದು ಎಂಬ ಬಗ್ಗೆ ಮಾಹಿತಿಯೂ ಹೊರಬಿದ್ದಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಸ್ವತಃ ರಶ್ಮಿಕಾ ಆ ಬಗ್ಗೆ ಹೇಳಿಕೊಂಡಿದ್ದಾರೆ. ‘ನಟಿಸಿದ್ದರೆ ಬಾಲಿವುಡ್​ನಲ್ಲಿ ‘ಜೆರ್ಸಿ’ ಚಿತ್ರವೇ ನನ್ನ ಮೊದಲ ಹಿಂದಿ ಸಿನಿಮಾ ಆಗುತ್ತಿತ್ತು. ಮೂಲ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ ಪಾತ್ರಕ್ಕೆ ನ್ಯಾಯ ನೀಡಲು ಆಗುತ್ತೋ ಇಲ್ಲವೋ ಎಂಬ ಅಳುಕಿತ್ತು ಮತ್ತು ನಂಬಿಕೆ ಇರಲಿಲ್ಲ. ಹಾಗಾಗಿ ಆ ಚಿತ್ರದಿಂದ ಹಿಂದೆ ಸರಿದೆ’ ಎಂದಿದ್ದಾರೆ. ಸದ್ಯ ‘ಜೆರ್ಸಿ’ ರಿಮೇಕ್​ನಲ್ಲಿ ಶಾಹಿದ್ ಕಪೂರ್ ಜತೆಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತ ಹಿಂದಿಯ ಸಿನಿಮಾಗಳ ಜತೆಗೆ ತೆಲುಗಿನ ‘ಪುಷ್ಪ’, ಶರ್ವಾನಂದ ಜತೆಗೆ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದಲ್ಲಿಯೂ ಬಿಜಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts