ಪ್ರಜ್ವಲ್​ ಅವರಿಗೆ ಎಂದು ಎಷ್ಟು ಸರಿ ಕೂಗ್ತೀರಾ, ನನಗೂ ಒಂದು ಸರಿ ಜೈಕಾರ ಹಾಕಿದ್ರೆ ನಿಮ್ ಗಂಟಲು ಹೋಗ್ಬಿಡ್ತಿತ್ತಾ?: ಶಾಸಕ ಶಿವಲಿಂಗೇಗೌಡ

JDS jaikara
Published on

ಹಾಸನ: ಪ್ರಜ್ವಲ್ ಅವರಿಗೆ, ಪ್ರಜ್ವಲ್ ಅವರಿಗೆ ಎಂದು ಎಷ್ಟು ಸಲ ಕೂಗುತ್ತೀರಾ ನಾನು ಇಲ್ಲೇ ಇದ್ದೀನಿ ಒಬ್ಬನಾದ್ರೂ ಜೈ ಕಾರ ಹಾಕೋದು ಬೇಡ್ವಾ ಎಂದು ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಜಾನಳ್ಳಿಯಿಂದ ಒಬ್ಬ ಹುಡುಗ ಬಂದಿದ್ದಾನೆ. ಶಿವಲಿಂಗೇಗೌಡನಿಗೆ ಜೈ ಅಂದ್ರೆ ನಿನ್ನ ಗಂಟು ಹೋಗ್ಬಿಡುತ್ತಾ, ನಿಮ್ಮ ಪಿಎ ಒಬ್ಬ ಇದ್ದಾನೆ ಬೇಜಾರು ಮಾಡ್ಕೋಬೇಡಿ. ಅವನು ಹತ್ತು ಹುಡುಗರು ಕಟ್ಟಿಕೊಂಡು ಎಲ್ಲಿ ಹೋದರೂ ಹೀಗೆ ಕೂಗಿಸುತ್ತಾನೆ ಯಾಕೆ ಎಂದು ಪ್ರಜ್ವಲ್​ ವಿರುದ್ಧವೇ ಗರಂ ಆದರು.

ಅವತ್ತೊಂದು ದಿನ ಮಂಜನಹಳ್ಳಿಯಲ್ಲಿ ಮುಂದಿನ ಎಂಎಲ್‌ಎ ಗಂಗಾಧರ್ ಅವರಿಗೆ ಹೇಳ್ದೆ ಅವನು ನಿಂತುಕೊಳ್ಳೋದಾದ್ರೆ ಈಗಲೇ ಹೂವಿನಹಾರ ಹಾಕಿ ಬಿಟ್ಟುಕೊಟ್ಟು ಹೋಗ್ತೀನಿ ಅಂದೆ, ಪ್ರಜ್ವಲ್ ಪಿಎ ಮತ್ತು ಮಂಜನಹಳ್ಳಿ ಯುವಕನೊಬ್ಬನ ಬಗ್ಗೆ ಹೆಸರು ಹೇಳದೆ ಬಹಿರಂಗ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ ಶಾಸಕ ಶಿವಲಿಂಗೇಗೌಡ

ಇದೇ ವೇಳೆ ಯುವಕರಿಗೆ ಬುದ್ದಿ ಹೇಳಿದ ಸಂಸದ ಪ್ರಜ್ವಲ್ ರೇವಣ್ಣ,ಎಲ್ಲರೂ ಒಟ್ಟಿಗೆ ಇರಬೇಕು. ನಾನೇ ಶಿವಲಿಂಗಣ್ಣ ಅವರಿಗೆ ಕರೆ ಮಾಡಿ ಕರೆದುಕೊಂಡು ಬಂದಿದ್ದೇನೆ. ನಮ್ಮ ಕಡೆ ಇರಬಹುದು, ಬೇರೆ ಕಡೆಯಿಂದ ಇರಬಹುದು. ಗೊಂದಲ ಸೃಷ್ಟಿ ಮಾಡಬೇಡಿ. ದಯವಿಟ್ಟು ಪಕ್ಷ ಒಡೆಯುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net