ವಿಜಯ್ ದೇವರಕೊಂಡ ಮುಂದಿನ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಇಲ್ಲ? ಹಾಗಾದ್ರೆ ಹೊಸ ನಟಿ ಯಾರು?

vijay deverakonda
Published on

ಆಂಧ್ರಪದೇಶ: 'ಅರ್ಜುನ್ ರೆಡ್ಡಿ'(Arjun Reddy) ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ(Tollywood) ಹೊಸದೊಂದು ಸಂಚಲನ ಹುಟ್ಟುಹಾಕಿದ ನಟ ವಿಜಯ್ ದೇವರಕೊಂಡ(Vijay Devarakonda), ಇದೀಗ ಸಾಲು ಸಾಲು ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಟಾಲಿವುಡ್​ನಲ್ಲಿ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಜೋಡಿಯಾಗಿ ಮಿಂಚಿದ 'ಗೀತಾ ಗೋವಿಂದಂ' ಚಿತ್ರ ಬ್ಲಾಕ್​ಬಸ್ಟರ್​ ಹಿಟ್ ನೀಡುವ ಮೂಲಕ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿತು. ಸದ್ಯ ಈ ಚಿತ್ರದ ನಿರ್ದೇಶಕ ಪರಶುರಾಮ್ ಅವರೊಟ್ಟಿಗೆ ಇದೀಗ ಮತ್ತೊಮ್ಮೆ ನಟ ವಿಜಯ್ ಕೈಜೋಡಿಸಿದ್ದಾರೆ.

ಪರಶುರಾಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ನಾಯಕ ನಟರಾಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುವುದು ಖಚಿತವಾದರೂ, ನಟಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ! ವಿಜಯ್ ನಟನೆಯ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ(Pooja Hegde) ಅವರೇ ನಾಯಕಿ ಎಂಬ ವದಂತಿಗಳು ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಆದ್ರೆ, ಈ ಬಗ್ಗೆ ಇತ್ತೀಚಿನ ವರದಿಯೊಂದು ಸ್ಪಷ್ಟಪಡಿಸಿದ್ದು, ಅಸಲಿಗೆ ಪೂಜಾ ಹೆಗ್ಡೆ ಅವರ ಬದಲಿಗೆ ಸೀತಾ ರಾಮಮ್ ಚಿತ್ರದ ನಾಯಕಿ ಮೃಣಾಲ್ ಠಾಕೂರ್(Mrunal Thakur) ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಈ ಚಿತ್ರದ ಮೂಲಕ ವಿಜಯ್ ಮತ್ತು ಮೃಣಾಲ್ ಜೋಡಿ ಪ್ರಥಮ ಬಾರಿಗೆ ತೆರೆಯ ಮೇಲೆ ಮಿಂಚಲಿದ್ದಾರೆ. ಸದ್ಯ ನಟಿ ಮೃಣಾಲ್ ಠಾಕೂರ್ ನಟ ನಾನಿ ಅವರ 30ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ನಿರ್ದೇಶಕ ಪರಶುರಾಮ್ ಅವರ ಹೊಸ ಚಿತ್ರದ ಚಿತ್ರೀಕರಣದಲ್ಲಿ ಯಾವಾಗ ಭಾಗಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net