Fruits : ಹಣ್ಣುಗಳು ಯಾರಿಗೆ ಇಷ್ಟ ಇಲ್ಲ ಹೇಳಿ?, ಚಿಕ್ಕ ಮಕ್ಕಳಿಂದ ವೃದ್ಧರತನಕ ಎಲ್ಲಾ ವಯಸ್ಸಿನವರಿಗೂ ಹಣ್ಣುಗಳು ಆರೋಗ್ಯಕರ ಚಿನ್ಹೆ ಇದ್ದಂತೆ. ರಸಭರಿತ, ಪೌಷ್ಠಿಕ ಹಾಗೂ ಅತ್ಯಂತ ರುಚಿಕರವಾಗಿರುತ್ತದೆ. ಅಲ್ಲದೆ, ಬಿಸಿಲಿನ ದಿನದಲ್ಲಿ ಒಂದು ರಿಫ್ರೆಶ್ ಕಲ್ಲಂಗಡಿ ತುಂಡನ್ನು ತಿನ್ನುವುದರಿಂದ ಹಿಡಿದು ತ್ವರಿತ ತಿಂಡಿಗಾಗಿ ಒಂದು ಹಿಡಿ ದ್ರಾಕ್ಷಿಯನ್ನು ತಿನ್ನುವವರೆಗೆ, ಹಣ್ಣುಗಳು ಯಾವಾಗಲೂ ಒಳ್ಳೆಯ ಉಪಾಯವೆಂದು ಭಾಸವಾಗುತ್ತದೆ. ಆದರೆ, ದಿನದ ಕೆಲ ಸಮಯದಲ್ಲಿ ಹಣ್ಣುಗಳು ತಿನ್ನುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:ವಯಸ್ಸು 43, ಧೋನಿ ಫಿಟ್ನೆಸ್ 100; ‘ಕ್ಯಾಪ್ಟನ್ ಕೂಲ್’ ರಹಸ್ಯ ಬಿಚ್ಚಿಟ್ಟ ಹರ್ಭಜನ್ ಸಿಂಗ್ | IPL 2025
ಹಣ್ಣು ಫೈಬರ್ ಮತ್ತು ನೈಸರ್ಗಿಕ ಸಕ್ಕರೆಗಳಿಂದ ತುಂಬಿರುವುದರಿಂದ ಅವು ದೇಹವನ್ನು ಉತ್ತೇಜಿಸುತ್ತವೆ. ಅಲ್ಲದೆ, ಸಾಧ್ಯವಾದಷ್ಟು ಆರೋಗ್ಯಕರ ರೀತಿಯಲ್ಲಿರುವಂತೆ ನೋಡಿಕೊಳ್ಳುತ್ತವೆ. ಆದರೆ ಅವು ಎಷ್ಟೇ ಒಳ್ಳೆಯದಾಗಿದ್ದರೂ, ಹಣ್ಣುಗಳು ಯಾವಾಗಲೂ ನಿಮಗೆ ಉತ್ತಮ ಆಯ್ಕೆಯಲ್ಲ. ಆಶ್ಚರ್ಯಕರವೇ? ನಿಮ್ಮ ದೇಹವನ್ನು ಹಣ್ಣುಗಳು ಹೇಗೆ ಆರೋಗ್ಯದಲ್ಲಿಡತ್ತವೇ ಎಂಬುದರಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಯಾವ ಸಮಯದಲ್ಲಿ ಹಣ್ಣುಗಳನ್ನು ತಿನ್ನಬಾರದು..?
1.ಖಾಲಿ ಹೊಟ್ಟೆಯಲ್ಲಿ
ಖಾಲಿ ಹೊಟ್ಟೆಯಲ್ಲಿದ್ದಾಗ ಹಣ್ಣುಗಳನ್ನು ತಿಂದ್ರೆ ನಿಮ್ಮ ದೇಹಕ್ಕೆ ಪ್ರಯೋಜನವಾಗುತ್ತದೆ ಎಂದ್ರೆ ಅದು ತಪ್ಪು. ಹೌದು, ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅಸಮತೋಲ ಇದ್ದರೆ, ಅವರು ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವನೆ ಮಾಡಿದ್ರೆ ಹೊಟ್ಟೆ ಹುಬ್ಬರಕ್ಕೆ ಕಾರಣವಾಗಬಹುದು. ಅಲ್ಲದೆ, ನೀವು ತೂಕ ಇಳಿಸಿಕೊಳ್ಳುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನದೀರಿ.
2. ಭಾರೀ ಊಟದ ಬಳಿಕ
ಭಾರೀ(ಹೊಟ್ಟೆ ತುಂಬಾ ಊಟ) ಊಟ ಮಾಡಿದ ಬಳಿಕ ಕೂಡಲೇ ಹಣ್ಣುಗಳನ್ನು ಹಲವು ಜನರಿಗೆ ತಿನ್ನುವ ರೂಢಿ ಇದೆ. ಹೀಗೆ ಮಾಡುವುದು ತಪ್ಪು ಎನ್ನುತ್ತಾರೆ ತಜ್ಞರು. ಏಕೆಂದರೆ ಹಣ್ಣುಗಳು ಪ್ರೋಟೀನ್ ಮತ್ತು ಕೊಬ್ಬುಗಳಿಗಿಂತ ವೇಗವಾಗಿ ಜೀರ್ಣವಾಗುತ್ತವೆ. ದೊಡ್ಡ ಊಟದ ನಂತರ ಹಣ್ಣುಗಳನ್ನು ತಿನ್ನುವುದರಿಂದ ಕರುಳಿನಲ್ಲಿ ಹುದುಗುವಿಕೆ ಉಂಟಾಗುತ್ತದೆ. ಇದು ಅಸ್ವಸ್ಥತೆ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
3.ತಡರಾತ್ರಿ
ತಡರಾತ್ರಿ ಹಸಿವಾದ್ರೆ ಹಣ್ಣು ತಿನ್ನುವುದು ತಪ್ಪಿಸಿ! ಹೌದು, ಹಣ್ಣುಗಳನ್ನು ಮಲಗುವ ಮುನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಇದರ ಪರಿಣಾಮವಾಗಿ ಮರುದಿನ ಬೆಳಿಗ್ಗೆ ನೀವು ನಿದ್ರಿಸುತ್ತೀರಿ ಎಂದು ತಜ್ಞರು ಅಭಿಪ್ರಾಯವಾಗಿದೆ.
4.ಹಾಲಿನೊಂದಿಗೆ
ಹಾಲು ಮತ್ತು ಹಣ್ಣುಗಳು ಒಟ್ಟಿಗೆ ಹೋಗುವುದಿಲ್ಲ. ನಿಮ್ಮ ನೆಚ್ಚಿನ ಹಣ್ಣನ್ನು ಹಾಲಿನೊಂದಿಗೆ ಸೇವಿಸಿದಾಗ ಅದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉಬ್ಬುವುದು ಮತ್ತು ಕರುಳಿನ ಸಮತೋಲನವನ್ನು ಅಡ್ಡಿಪಡಿಸುವುದರ ಜತೆಗೆ, ಹಾಲು ಮತ್ತು ಹಣ್ಣುಗಳ ಸಂಯೋಜನೆಯು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಈ ಆರೋಗ್ಯ ಸಮಸ್ಯೆಗಳು ಹೊಂದಿರುವವರು ಪನೀರ್ ತಿನ್ನಬೇಡಿ; ಕಾರಣ ಹೀಗಿದೆ |Paneer
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊರ ಬರಲು ಈ 4 ಮನೆಮದ್ದುಗಳನ್ನು ಬಳಸಿ; ಶೀಘ್ರ ಪರಿಹಾರ ಕಂಡುಕೊಳ್ಳಿ | Gastric