More

  ಈ ರೀತಿಯ ಗಂಡಸರನ್ನು ನಂಬಲು ಭಯವಾಗುತ್ತದೆ; ರಶ್ಮಿಕಾ ಮಂದಣ್ಣ ಹೀಗೆನ್ನಲು ಕಾರಣವೇನು?

  ಮುಂಬೈ: 2023ರ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಅನಿಮಲ್ ಚಿತ್ರವು ಬಾಕ್ಸ್​ಆಫೀಸ್​ನಲ್ಲಿ ಮಾತ್ರ ಧೂಳೆಬ್ಬಿಸಿತ್ತು. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಈ ಚತ್ರವು ರಶ್ಮಿಕಾ ಮಂದಣ್ಣ, ತ್ರಿಪ್ತಿ ದಿಮ್ರಿ ಹಾಗೂ ರಣವೀರ್​ ಕಪೂರ್​ಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ನಟರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಚಿತ್ರ ಬಡುಗಡೆಯಾಗಿ ಏಳು ತಿಂಗಳಾದ ಮೇಲೆ ಚಿತ್ರದ ಕುರಿತು ಮಾತನಾಡಿರುವ ರಶ್ಮಿಕಾ ರಣವೀರ್​ ಕಪೂರ್ ಪಾತ್ರವನ್ನು ಸ್ಟುಪಿಡ್​ ಎಂದು ಕರೆದಿದ್ದಾರೆ.

  ಅನಿಮಲ್​ ಚಿತ್ರದಲ್ಲಿ ರಣವೀರ್​ ಕಪೂರ್​ ರಣವಿಜಯ್​ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ರಣ್​ವಿಜಯ್​ ಸಿಂಗ್​ ಹಾಗೂ ಗೀತಾಂಜಲಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಎಂದಿಗೂ ನಿನಗೆ ಮೋಸ ಮಾಡಲ್ಲ ಅಂತ ರಣ್​ವಿಜಯ್​ ಸಿಂಗ್ ತಾಳಿ ಕಟ್ಟುವ ವೇಳೆ​ ಪ್ರಮಾಣ ಮಾಡಿರುತ್ತಾನೆ. ಹಾಗಿದ್ದರೂ ಕೂಡ ಆತ ಪರಸ್ತ್ರೀ ಸಹವಾಸ ಮಾಡಿ, ಗೀತಾಂಜಲಿಗೆ ಮೋಸ ಮಾಡುತ್ತಾನೆ.

  ಇದನ್ನೂ ಓದಿ: ಅವರೆಲ್ಲ ನನ್ನನ್ನು ಟ್ರೋಲ್​ ಮಾಡಿದ್ದರು… ದರ್ಶನ್​ ಕೇಸ್​ ಬಗ್ಗೆ ನಟಿ ರಮ್ಯಾ ಖಡಕ್​ ಮಾತು

  ಆ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಾನಕವಾದ ವಿಷಯ ಬೇರೇನೂ ಇಲ್ಲ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಇತ್ತ ಈ ಪೋಸ್ಟ್​ಗೆ ಕಮೆಂಟ್​ ಮೂಲಕ ಪ್ರತಿಕ್ರಿಯಿಸಿರುವ ರಶ್ಮಿಕಾ ತಿದ್ದುಪಡಿ: ಮೂರ್ಖನಾದ ಗಂಡಸನ್ನು ನಂಬುವುದು ಭಯಾನಕ. ತುಂಬ ಒಳ್ಳೆಯ ಗಂಡಸರು ಇದ್ದಾರೆ. ಅಂಥವರನ್ನು ನಂಬುವುದು ವಿಶೇಷ ಎಂದು ರಿಪ್ಲೈ ಮಾಡಿದ್ದಾರೆ.

  See also  ಬಸವಣ್ಣ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

  ಇತ್ತ ಈ ಪೋಸ್ಟ್​ಗೆ ಪರ-ವಿರೋಧದ ಕಮೆಂಟ್​ಗಳು ವ್ಯಕ್ತವಾಗುತ್ತಿದ್ದು, ಹಲವರು ಸ್ತ್ರೀ ವಿರೋಧದ ಸಿನಿಮಾವನ್ನು ಬೆಂಬಲಿಸುವುದಕ್ಕಿಂತ ಸುಮ್ಮನಿರುವುದೇ ವಾಸಿ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಕೌರ್ಯ ಅತಿಯಾಗಿದ್ದು, ಈ ರೀತಿಯ ಚಿತ್ರಗಳು ಸಮಾಜದಲ್ಲಿ ಇನ್ನಷ್ಟು ಕ್ರೈಂ ಮಾಡುವುದಕ್ಕೆ ಪ್ರೇರಣೆ ನೀಡುತ್ತವೆ ಎಂದು ಕಿಡಿಕಾರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts