ಭಾರತದಲ್ಲಿ ಬಿಯರ್ ಕುಡಿಯೋದಕ್ಕೆ ಆರಂಭವಾಗಿದ್ದು ಯಾವಾಗ ಗೊತ್ತೆ?: ಮೊದಲು ಸೇವನೆ ಮಾಡಿದ್ದು ಇವರೆ ನೋಡಿ ​| BEER

dk (51) (1)
Published on

BEER:ಭಾರತದಲ್ಲಿ ಮದ್ಯ ಇತಿಹಾಸ ಈಗಿನದ್ದು ಅಲ್ಲ, ಅದು ಕೂಡ ಪುರಾತನವಾಗಿದೆ. ನಮ್ಮ ಪುರಾಣಗಳಲ್ಲಿ ಸೋಮರಸದ ಬಗ್ಗೆ ಉಲ್ಲೇಖವಿದೆ. ಆದರೆ, ನಮ್ಮಲ್ಲಿ ಮದ್ಯವು ಬಹು ಪ್ರಚಲಿತೆಗೆ ಬಂದಿದ್ದು ಮೊಘಲ್​​ ರಾಜರ ಕಾಲದಲ್ಲಿ ಎಂದು ಹೇಳಬಹುದು. ಇದೀಗ ಯುವಕರ ಹಾಟ್​ ಫೇವರ್​ ಬಿಯರ್(BEER) ಅನ್ನು ಭಾರತಕ್ಕೆ ಪರಿಚಯ ಮಾಡಿಕೊಟ್ಟವರ್ಯಾರು ಮತ್ತು ಮೊದಲು ಸೇವನೆ ಮಾಡಿದ್ದು ಯಾರು ಎಂಬುವುದರ ಬಗ್ಗೆ ತಿಳಿಯೋಣ..

ಮೋಘಲರು ಭಾರತಕ್ಕೆ ಬಂದ ನಂತರವೇ ಮದ್ಯ ಪರಿಚಯವಾಯಿತು. ಮೋಘಲ್​ ಚಕ್ರವರ್ತಿ ಅಕ್ಬರ್​ ಮದ್ಯ ಸೇವನೆಯಿಂದ ದೂರು ಇದ್ದರು. ಆದರೆ, ಅವರ ಅಸ್ಥಾನದಲ್ಲಿ ಮಾತ್ರ ಮದ್ಯ ಸೇವೆನೆ ಸಾಮಾನ್ಯವಾಗಿತ್ತು. ಬಳಿಕ ಬಂದ ಜಹಾಂಗಿರ್​​ಗೆ ಮದ್ಯವನ್ನು ತುಂಬಾ ಇಷ್ಟಪಡುತ್ತಿದ್ದರು ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಅಲ್ಲಿಂದ ಮದ್ಯ ಕುಡಿಯುವುದು ರಾಜರ ಜೀವನ ಶೈಲಿಯ ಒಂದು ಭಾಗವಾಯಿತು ಎಂದು ಹೇಳಲಾಗಿದೆ.

1716ರಲ್ಲಿ  ಭಾರತಕ್ಕೆ ಬಂದ ಬಿಯರ್​

ಭಾರತಕ್ಕೆ ವ್ಯಾಪರಕ್ಕೆಂದು ಬಂದ ಬ್ರಿಟಿಷರಿಂದ ಮದ್ಯ ನಮ್ಮ ದೇಶದಲ್ಲಿ ಮಾರಾಟ ಸರಕು ಆಗಿತು. ಬಳಿಕ 1716ರೊತ್ತಿಗೆ ಇಂಗ್ಲೆಂಡ್​ನಿಂದ ಭಾರತಕ್ಕೆ ಬಿಯರ್​ ಅನ್ನು ಅಮದು ಮಾಡಿಕೊಳ್ಳಲಾಯಿತು(ಬಿಯರ್​ ಕುಡಿದ್ದು ಕೂಡ ಬ್ರಿಟಿಷರೇ). ವಿದೇಶದಿಂದ ಬಿಯರ್​ ತರಿಸಿಕೊಳ್ಳುವುದರಿಂದ ಅದರ ಗುಣಮಟ್ಟ ಕ್ಷೀಣಿತೊಡಗಿತು. ಅಲ್ಲಿಂದ ಭಾರತಲ್ಲಿಯೇ ಬಿಯರ್​ ಉತ್ಪಾದನೆ ಮಾಡಲು ಬ್ರಿಟಿಷ್​ನ ಎಡ್ವರ್ಡ್ ಅಬ್ರಹಾಂ ಡೈಯರ್ ಎಂಬಾತ 1830 ರಲ್ಲಿ ಭಾರತದ ಮೊದಲ ಬ್ರೂವರಿಯನ್ನು(ಬಿಯರ್​ ಉತ್ಪಾದಿಸುವ ಘಟಕ) ಸ್ಥಾಪಿಸಿದರು. ಲಯನ್ ಬ್ರಾಂಡ್ ಬಿಯರ್ ಎನ್ನುವ ಹೆಸರಿನ ಬಿಯರ್​ ಇಲ್ಲಿಂದ ಆರಂಭವಾಯಿತು.

ಅಲ್ಲಿಂದ ಭಾರತದಲ್ಲಿ ಬೇರೆ ಬೇರೆ ಬ್ರೂವರಿಗಳನ್ನು ಸ್ಥಾಪಿಸಿದರು. 1915ರಲ್ಲಿ ಸ್ಕಾಟಿಷ್​ ಉದ್ಯಮಿಯೊಬ್ಬ ದಕ್ಷಿಣ ಭಾರತದಲ್ಲಿದ್ದ ನಾಲ್ಕು ಘಟಕಗಳನ್ನು ಒಗ್ಗೂಡಿಸಿ ಯುನೈಟೆಡ್​ ಬ್ರೂವರಿಯನ್ನು ಸ್ಥಾಪಿಸಿದನು.

ವಿಟ್ಟಲ್​ ಮಲ್ಯ ಕಾಲ ಆರಂಭ

1947ರಲ್ಲಿ ಮೊದಲ ಬಾರಿಗೆ ಯುನೈಟೆಡ್​ ಬ್ರೂವರಿ ಕಂಪನಿಯ ಷೇರುಗಳನ್ನು ಬ್ರಿಟಿಷರಿಂದ ಖರೀದಿಸಿ, ಕಂಪನಿಯ ಭಾರತದ ಮೊದಲ ನಿರ್ದೇಶಕನಾಗಿ ಆಯ್ಕೆಯಾದನು. ವಿಟ್ಟಲ್​ ಮಲ್ಯ ಭಾರತದ ಉದ್ಯಮಿ ವಿಜಯ್​ ಮಲ್ಯ ತಂದೆ. ತಂದೆಯ ಮರಣ ನಂತರ ವಿಜಯ್​ ಮಲ್ಯಮ ಕಂಪನಿ ಓನರ್​​ ಆದರು (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net