More

    ಜಲ ಮಂಡಳಿ ಬಿಲ್​ ಪಡೆಯಲು, ಶುಲ್ಕ ಪಾವತಿಗೆ ಸುಲಭ ವಿಧಾನ

    ಬೆಂಗಳೂರು: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ( ಜಲ ಮಂಡಳಿ) ಗ್ರಾಹಕರ ಬಿಲ್​ ರವಾನೆ ಹಾಗೂ ಶುಲ್ಕ ಪಾವತಿಗೆ ಆನ್​ಲೈನ್​ ವಿಧಾನವನ್ನು ರೂಪಿಸಿದೆ.

    ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ವಿತರಣೆ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಏಪ್ರಿಲ್​ ತಿಂಗಳ ನೀರಿನ ಬಿಲ್​ಅನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಹಿಂದಿನ ತಿಂಗಳು ಬಳಸಿದ ನೀರಿನ ಪ್ರಮಾಣದ ದಿನವಹಿ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
    ಮಂಡಳಿಯ ವೆಬ್​ಸೈಟ್​ನಲ್ಲಿ ಗ್ರಾಹಕರ ಆರ್​ಆರ್​ ಸಂಖ್ಯೆ, ಬಳಸಿದ ನೀರಿನ ಪ್ರಮಾಣ, ಶುಲ್ಕ ಹಾಗೂ ಹಿಂದಿನ ಬಾಕಿ ಮೊತ್ತವನ್ನು ನೀಡಲಾಗಿದೆ. ಇದನ್ನು ಆಧರಿಸಿ ಗ್ರಾಹಕರು ಬಿಲ್​ ಪಾವತಿಸಬಹುದು.

    ಇದರ ಹೊರತಾಗಿಯೂ ಬಿಲ್​ ವಿವರ ಪಡೆದುಕೊಳ್ಳಲು ಸಾಧ್ಯವಾಗದವರು ತಮ್ಮ ಆರ್​ಆರ್​ ಸಂಖ್ಯೆ, ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು 8762228888 ಸಂಖ್ಯೆಗೆ ವಾಟ್ಸ್​ಆ್ಯಪ್​ ಮಾಡಿದಲ್ಲಿ ಬಿಲ್​ ವಿವರವನ್ನು ಕಳುಹಿಸಲಾಗುತ್ತದೆ ಎಂದು ಜಲ ಮಂಡಳಿ ತಿಳಿಸಿದೆ.

    ಇನ್ನು ಗ್ರಾಹಕರು ಬಿಲ್​ ಪಾವತಿಗೆ ಪೇಟಿಎಂ, ಗೂಗಲ್​ ಪೇ, ಫೋನ್​ ಪೇ ಹಾಗೂ ಆನ್​ಲೈನ್​ ಬ್ಯಾಂಕಿಂಗ್​ ಮೂಲಕವೂ ಪಾವತಿಸಬಹುದು ಎಂದು ತಿಳಿಸಿದೆ. ವಿವರಗಳಿಗೆ https://www.bwssb.gov.in/ ಸಂಪರ್ಕಿಸಬಹುದು.

    ಸಾವನ್ನು ಎದುರುನೋಡುತ್ತಿದ್ದ ಆ ಕ್ಷಣ- ಕರೋನಾ ಸೋಂಕಿನಿಂದ ಬಚಾವ್​ ಆದ ಮಹಿಳೆಯೊಬ್ಬರ ಅನುಭವ ಕಥನ

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts