

Dasara Festival : ದಸರಾ ಒಂಬತ್ತು ದಿನಗಳ ಕಾಲ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಒಂಬತ್ತು ರಾತ್ರಿಗಳ (ನವರಾತ್ರಿ) ಮತ್ತು ಹತ್ತನೇ ದಿನದಂದು ಆಚರಿಸಲಾಗುವ ಉತ್ಸವವಾಗಿದೆ, ಇದು ಶಕ್ತಿಯ ಆರಾಧನೆ ಮತ್ತು ಒಳ್ಳೆಯದು ಕೆಟ್ಟದ್ದನ್ನು ಜಯಿಸುವ ಸಂಕೇತವಾಗಿದೆ. ದಸರಾ ದಿನದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು? ಎನ್ನುವ ಪ್ರಶ್ನೆಗೆ ನಿಮಗೆ ಇರುತ್ತದೆ. ಈ ಕುರಿತಾಗಿ ನಾವು ಇಂದು ತಿಳಿಸಿ ಕೊಡಲಿದ್ದೇವೆ.
1) ಯಾರೊಂದಿಗೂ ಜಗಳವಾಡಬೇಡಿ.
2) ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ.
3) ಕೆಟ್ಟ ಕಾರ್ಯಗಳಿಂದ ಮತ್ತು ಕೆಟ್ಟ ಜನರಿಂದ ದೂರವಿರಬೇಕು.
4) ಪ್ರಾಣಿಗಳು ಮತ್ತು ಪಕ್ಷಿಗಳನ್ನು ಹಿಂಸಿಸಬಾರದು.
6) ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಕೊಳಕಾಗಲು ಬಿಡಬಾರದು.
7) ನೀವು ದಾನಧರ್ಮ ಮಾಡಬೇಕು.
8) ಮನೆಯಲ್ಲಿ ಸಂಜೆ ಹಾಗೂ ಬೆಳಿಗ್ಗೆ ವೇಳೆ ದೀಪಗಳನ್ನು ಹಚ್ಚಬೇಕು.
9) ರಾಮ ಮತ್ತು ದುರ್ಗಾ ದೇವಿಯನ್ನು ಪೂಜಿಸಬೇಕು.
10) ನೀವು ಖಂಡಿತವಾಗಿಯೂ ಚಿನ್ನ, ಬೆಳ್ಳಿ ಅಥವಾ ಯಾವುದೇ ಹೊಸ ವಸ್ತುವನ್ನು ಖರೀದಿಸಬೇಕು.
ಕ್ಯಾಲೆಂಡರ್ ಪ್ರಕಾರ, ದಸರಾ ಹಬ್ಬವನ್ನು ಪ್ರತಿ ವರ್ಷ ಆಶ್ವಿಯುಜ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ತ್ರೇತಾಯುಗದ ಈ ದಿನದಂದು, ಭಗವಾನ್ ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಿದನು. ಅಂದಿನಿಂದ, ರಾಮನನ್ನು ಪೂಜಿಸಲಾಗುತ್ತದೆ ಮತ್ತು ದುಷ್ಟತನದ ಮೇಲೆ ಒಳ್ಳೆಯತನದ ವಿಜಯದ ಸಂಕೇತವಾಗಿ ರಾವಣನನ್ನು ಸುಡಲಾಗುತ್ತದೆ.
"ನವರಾತ್ರಿ" ಎಂದೂ ಕರೆಯಲ್ಪಡುವ ಈ ಹಬ್ಬವು ಭಾರತದಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ಭಕ್ತಿಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ದಸರಾ ವಿಶೇಷವಾಗಿ ಮೈಸೂರಿನಲ್ಲಿ ಭವ್ಯವಾಗಿ ಆಚರಿಸಲ್ಪಡುತ್ತದೆ, ಇದನ್ನು "ನಾಡಹಬ್ಬ" ಎಂದು ಕರೆಯಲಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.