ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಬ್ಲೂ ಝೋನ್ ಡಯಟ್​ ಅಂದ್ರೆ ಏನು? ತೂಕ ಇಳಿಕೆಗೆ ಹೇಗೆ ಸಹಕಾರಿ? Blue Zone Diet

Blue Zone Diet

Blue Zone Diet : ಬ್ಲೂ ಝೋನ್ ಆಹಾರ ಪದ್ಧತಿ ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಪ್ರಪಂಚದ 5 ಬ್ಲೂ ಝೋನ್‌ಗಳಲ್ಲಿ ಬಳಸಲಾಗುವ ಆಹಾರ ಪದ್ಧತಿ ಇದಾಗಿದೆ. ಈ ಆಹಾರ ಕ್ರಮದಿಂದ ಅಲ್ಲಿನ ನಿವಾಸಿಗಳು ದೀರ್ಘ ಮತ್ತು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಹೀಗಾಗಿ ಅನೇಕ ಮಂದಿ ಈ ಬ್ಲೂ ಝೋನ್‌ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಆ ಐದು ಬ್ಲೂ ಝೋನ್​ಗಳು ಯಾವುವೆಂದರೆ, ಗ್ರೀಸ್‌ನ ಇಕಾರಿಯಾ, ಜಪಾನ್‌ನ ಒಕಿನಾವಾ, ಇಟಲಿಯ ಸಾರ್ಡಿನಿಯಾದ ಓಗ್ಲಿಯಾಸ್ಟ್ರಾ, ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾದಲ್ಲಿರುವ ಸೆವೆಂತ್-ಡೇ ಅಡ್ವೆಂಟಿಸ್ಟ್ ಸಮುದಾಯ ಮತ್ತು ಕೋಸ್ಟರಿಕಾದ ನಿಕೋಯಾ ಪೆನಿನ್ಸುಲಾ ಸೇರಿವೆ.

ಬ್ಲೂ ಝೋನ್​ನಲ್ಲಿ ವಾಸಿಸುವ ಜನರು ಆಹಾರ, ವಿಶ್ರಾಂತಿ ಮತ್ತು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ತಮ್ಮ ಜೀವನಶೈಲಿಯಿಂದಾಗಿ ಹೆಚ್ಚು ಕಾಲ ಬದುಕುತ್ತಾರೆ. ಈ ಜನರು ತಮ್ಮ ಆಹಾರ ಪದ್ಧತಿಯಿಂದಲೇ ಪ್ರಭಾವಿತರಾಗಿದ್ದಾರೆ. ಪ್ರಸಿದ್ಧ ಲೇಖಕ ಡ್ಯಾನ್ ಬಟ್ನರ್ ಎಲ್ಲೆಡೆ ಈ ಬ್ಲೂ ಝೋನ್​ ಆಹಾರವನ್ನು ಪರಿಚಯಿಸುತ್ತಿದ್ದಾರೆ.

ಇದು ಮುಖ್ಯವಾಗಿ ಬ್ಲೂ ಝೋನ್​ಗಳಲ್ಲಿ ವಾಸಿಸುವ ಜನರು ತಿನ್ನುವ ಆಹಾರಗಳನ್ನು ಒಳಗೊಂಡಿದೆ. ಈ ಆಹಾರಗಳು ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಬ್ಲೂ ಝೋನ್​ ಆಹಾರವು ಸಸ್ಯ ಆಧಾರಿತ ಪೋಷಣೆಯಲ್ಲಿ ಸಮೃದ್ಧವಾಗಿದೆ. ಅವರು ಕಡಿಮೆ ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಅಲ್ಲದೆ, ಹೆಚ್ಚು ಸಂಸ್ಕರಿಸದ ಶುದ್ಧ ಹಾಗೂ ಕಚ್ಚಾ ಆಹಾರಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.

ತೂಕ ಇಳಿಸಿಕೊಳ್ಳಲು ಬ್ಲೂ ಝೋನ್ ಡಯಟ್ ( Blue Zone Diet ) ಹೇಗೆ ಸಹಕಾರಿ?

ಬ್ಲೂ ಝೋನ್ ಡಯಟ್​ ಶೇ. 95% ಹಸಿರು ತರಕಾರಿಗಳು ಮತ್ತು ಸೊಪ್ಪುಗಳನ್ನು ಒಳಗೊಂಡಿರುತ್ತದೆ. ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಈ ಆಹಾರಗಳು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ಹಸಿವಿನ ಹಂಬಲವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಬ್ಲೂ ಝೋನ್​ ಆಹಾರಗಳು ಅಗತ್ಯ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಅಲ್ಲದೆ, ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಸಿರೆಲೆಗಳಾದ ಬೀನ್ಸ್‌ನ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಹಸಿವಿನ ಹಂಬಲವನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬೆನ್ನಲ್ಲೇ ಸೈಫ್​ ಅಲಿ ಖಾನ್​ಗೆ ಎಚ್ಚರಿಕೆ ನೀಡಿದ ವೈದ್ಯರು: ತಪ್ಪಿದ್ರೆ ಪ್ರಾಣಕ್ಕೆ ಕುತ್ತು! Saif Ali Khan

ಬ್ಲೂ ಝೋನ್​ಗಳಲ್ಲಿ ವಾಸಿಸುವ ಜನರು, ನಾವು ಹೆಚ್ಚಾಗಿ ತಿನ್ನುವ ಸಂಸ್ಕರಿಸಿದ ಬಿಳಿ ಬ್ರೆಡ್ ಬದಲಿಗೆ, ಹುಳಿ ಮತ್ತು ಬಹುಧಾನ್ಯ ಬ್ರೆಡ್‌ಗಳನ್ನು ತಿನ್ನುತ್ತಾರೆ. ಅಡುಗೆ ಎಣ್ಣೆಯ ವಿಷಯಕ್ಕೆ ಬಂದಾಗ, ಸಲಾಡ್‌ಗಳು ಅಥವಾ ಸೂಪ್‌ಗಳ ಮೇಲೆ ಆಲಿವ್ ಎಣ್ಣೆಯನ್ನು ಚಿಮುಕಿಸಲು ಮಾತ್ರ ಬಳಸಲಾಗುತ್ತದೆ. ಆಲಿವ್ ಎಣ್ಣೆಯನ್ನು ಬಳಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ನೀವು ಯಾವುದೇ ರೀತಿಯ ಆಹಾರವನ್ನು ಸೇವಿಸಿದರೂ ಅಥವಾ ಬ್ಲೂ ಝೋನ್ ಡಯಟ್ ಅನುಸರಿಸಿದರೂ, ನಿಮ್ಮ ದೇಹವನ್ನು ಸಾಕಷ್ಟು ನೀರಿನಿಂದ ಹೈಡ್ರೇಟ್ ಮಾಡಲು ಪ್ರಯತ್ನಿಸಿ. ಸಕ್ಕರೆ ಪಾನೀಯಗಳನ್ನು ಆದಷ್ಟು ತಪ್ಪಿಸಿ. ಆದ್ದರಿಂದ, ಸಂಸ್ಕರಿಸಿದ ಜ್ಯೂಸ್​ಗಳು, ತಂಪು ಪಾನೀಯಗಳು ಮತ್ತು ಕೃತಕ ಸಿಹಿಕಾರಕಗಳನ್ನು ಹೊಂದಿರುವ ಪಾನೀಯಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ. ನೀವು ರುಚಿಕರವಾದ ಜ್ಯೂಸ್​ ಕುಡಿಯಲು ಬಯಸಿದರೆ, ನೀವೇ ಮನೆಯಲ್ಲಿ ಸಕ್ಕರೆ ಮಿಶ್ರಣ ಮಾಡದೆ ತಯಾರಿಸಿ ಸೇವಿಸಿ.

ಬ್ಲೂ ಝೋನ್​ನಲ್ಲಿ ವಾಸಿಸುವ ಜನರು ಬಹಳ ಕಡಿಮೆ ಮಾಂಸವನ್ನು ತಿನ್ನುತ್ತಾರೆ. ಮಾಂಸ ಸೇವನೆಯು ಸಾಮಾನ್ಯವಾಗಿ ಆಚರಣೆಗಳು, ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೀಮಿತವಾಗಿರುತ್ತದೆ. ನಿಮ್ಮ ತೂಕವನ್ನು ನಿರ್ವಹಿಸಲು ಉತ್ತಮ ಆಹಾರ ಯೋಜನೆಯನ್ನು ಅನುಸರಿಸುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಆರೋಗ್ಯಕರ ಜೀವನಶೈಲಿಯು ವ್ಯಾಯಾಮ, ಸಾಮಾಜಿಕ ಚಟುವಟಿಕೆಗಳು, ಡಿಜಿಟಲ್ ಡಿಟಾಕ್ಸ್ (ಮೊಬೈಲ್​ನಿಂದ ದೂರ) ಇತ್ಯಾದಿಗಳನ್ನು ಒಳಗೊಂಡಿದೆ. ನಿಮ್ಮ ಜ್ಞಾನವನ್ನು ಹೆಚ್ಚಿಸಲು ಪ್ರತಿದಿನ ಪುಸ್ತಕದ 5-10 ಪುಟಗಳನ್ನು ಓದಲು ಪ್ರಯತ್ನಿಸಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್​ ಹಾಳಾಗಲು ಶುರುವಾಗಿದೆ ಎಂದರ್ಥ! ಕೂಡಲೇ ಎಚ್ಚೆತ್ತುಕೊಳ್ಳಿ | Liver Health

ನಿಂತುಕೊಂಡೇ ನಿದ್ರಿಸುವ ಜೀವಿಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ… General Knowledge

Share This Article

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…

ಬೇಸಿಗೆಯಲ್ಲಿ ಸೌತೆಕಾಯಿ ಒಂದು ವರದಾನ.. ಆರೋಗ್ಯದ ಜತೆಗೆ ಸೌಂದರ್ಯವನ್ನೂ ತರುತ್ತದೆ.. Beauty Benefits Of Cucumber

ಬಿಸಿಲಿನಲ್ಲಿ ಸೌತೆಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ Beauty Benefits Of Cucumber : ಸೌತೆಕಾಯಿಯು ಹಲವಾರು…

ಶನಿಯ ಅನುಗ್ರಹದಿಂದಾಗಿ ಈ 3 ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…