ಕದನ ವಿರಾಮ ಎಂದರೇನು?; ಭಾರತ-ಪಾಕ್​ Ceasefire ಮಾಡಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

dk - 2025-05-10T220003.870
Published on

Ceasefire: ಕಳೆದ ಒಂದು ವಾರದಿಂದ ಭಾರತ-ಪಾಕಿಸ್ತಾನ ನಡುವೆ ಭಾರೀ ಉದ್ವಿಗ್ನತೆ ತೀವ್ರವಾದ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿದ್ದಾರೆ. ಇದಾಗ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಕೂಡ ಕದನ ವಿರಾಮಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮೇ.10ರಂದು ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ ಮತ್ತು ಆಕಾಶ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿಕ್ರಮ್​ ಮಾಹಿತಿ ನೀಡಿದರು. ಇಲ್ಲಿಂದ ಎರಡು ದೇಶಗಳು ಕದನ ವಿರಾಮ ಉಲ್ಲಂಘನೆ ಮಾಡುವಂತಿಲ್ಲ. ಒಂದು ವೇಳೆ ಕದನ ವಿರಾಮ ಉಲ್ಲಂಘನೆ ಮಾಡಿದ್ರೆ ಏನಾಗುತ್ತೆ? ಯಾರಿಗೆ ಇದ್ರ ಬಗ್ಗೆ ಕಂಪ್ಲೇಟ್​ ಕೊಡೋದು ಎಂದು ನಿಮಗೆ ತಿಳಿದಿದೆಯೇ? ಕದನ ವಿರಾಮದ ಬಗ್ಗೆ ತಿಳಿಯೋಣ.

ಕದನ ವಿರಾಮ ಎಂದರೇನು..?

ಕದನ ವಿರಾಮ ಎಡಡು ದೇಶಗಳ ಒಪ್ಪಂದವಾಗಿದೆ.ಈ ಒಪ್ಪಂದ ಪ್ರಕಾರ, ಎರಡು ದೇಶಗಳು ಶಾಶ್ವತವಾಗಿ ಅಥಾವ ತಾತ್ಕಾಲಿಕವಾಗಿ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತೆ. ಎರಡೂ ದೇಶಗಳು ಗಡಿಯಲ್ಲಿ ಯಾವುದೇ ರೀತಿಯ ಮಿಲಿಟರಿ ಚಟುವಟಿಕೆಯನ್ನು ನಡೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತವೆ. ಒಂದು ದೇಶವು ಏಕಪಕ್ಷೀಯವಾಗಿ ಕದನ ವಿರಾಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಹಲವು ಬಾರಿ ಎರಡೂ ದೇಶಗಳು ಪರಸ್ಪರ ಒಪ್ಪಿಗೆಯ ಮೂಲಕ ಕದನ ವಿರಾಮವನ್ನು ನಿರ್ಧರಿಸುತ್ತವೆ. ಕೆಲವೊಮ್ಮೆ ಮಧ್ಯಸ್ಥಿಕೆಯ ಮೂಲಕ ಕದನ ವಿರಾಮ ಸಂಭವಿಸುತ್ತದೆ. ಕೆಲವೊಮ್ಮೆ ಕದನ ವಿರಾಮವನ್ನು ಶಾಶ್ವತವಾಗಿ ಜಾರಿ ಮಾಡಲಾಗುತ್ತದೆ. ಇನ್ನು ಕೆಲವೊಮ್ಮೆ ಸಲ್ಪ ಕಾಲ ನಿಲ್ಲಿಸಿ ಮತ್ತೆ ಯದ್ಧ ಆರಂಭವಾಗುತ್ತೆ.

ಕದನ ವಿರಾಮ ಉಲ್ಲಂಘನೆ ಮಾಡಿದ್ರೆ ಏನಾಗುತ್ತೆ..?

ಒಮ್ಮೆ ಕದನ ವಿರಾಮ ಜಾರಿಗೆ ಬಂದ ನಂತರ, ಎರಡೂ ದೇಶಗಳು ಅದನ್ನು ಉಲ್ಲಂಘಿಸುವಂತಿಲ್ಲ. ಗಡಿಯಲ್ಲಿ ಪರಸ್ಪರ ದಾಳಿ ಮಾಡಲು ಸಾಧ್ಯವಿಲ್ಲ. ಯಾವುದೇ ದೇಶವು ಕದನ ವಿರಾಮವನ್ನು ಘೋಷಿಸಿದರೆ, ವಿಶ್ವಸಂಸ್ಥೆಗೆ ದೂರು ನೀಡಬಹುದು. ಅಲ್ಲದೆ, ಕದನ ವಿರಾಮ ಉಲ್ಲಂಘನೆ ಬಗ್ಗೆ ವಿಶ್ವಸಂಸ್ಥೆ ಮಿಲಿಟರಿ ವೀಕ್ಷಕ ಗುಂಪಿಗೆ ದೂರು ನೀಡಬಹುದು. ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ, ವಿಶ್ವಸಂಸ್ಥೆಯು ಎರಡೂ ಪಕ್ಷಗಳ ಮಾತನ್ನು ಆಲಿಸುತ್ತದೆ. ವಿಶ್ವಸಂಸ್ಥೆಯು ಯಾವುದೇ ದೇಶದ ವಿರುದ್ಧ ಕ್ರಮ ಕೈಗೊಳ್ಳಬಹುದು.

ಭಾರತ-ಪಾಕ್​ Ceasefire ಮಾಡಿದ್ದೇಕೆ..?

ಟ್ರಂಪ್ ಆಡಳಿತವು ಪಾಕಿಸ್ತಾನದ ಮೇಲೆ ನೇರ ಒತ್ತಡ ಹೇರುವ ಮೂಲಕ ಯುದ್ಧದ ಉಲ್ಬಣವನ್ನು ಕಡಿಮೆ ಮಾಡುವಲ್ಲಿ ಪಾತ್ರವಹಿಸಿದೆ ಎಂದು ಹೇಳಲಾಗುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 1 ಬಿಲಿಯನ್ ಡಾಲರ್ ಸಾಲ ಬೇಕಾದರೆ ಕದನ ವಿರಾಮ ಮಾಡಿದ್ರೆ ಮಾತ್ರ ಸಾಲ ಸಿಗುತ್ತದೆ ಎನ್ನಲಾಗುತ್ತಿದೆ.

ಪಾಕ್​ಗೆ ಸಾಲ ನೀಡುವುದನ್ನು ಭಾರತವು ಬಲವಾದ ಪ್ರತಿರೋಧವನ್ನು ತೋರಿಸುತ್ತಾ ಮತದಾನದಿಂದ ದೂರವಿದ್ದರೂ ಸಹ, ಐಎಂಎಫ್ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಬೇಲ್‌ಔಟ್ ಪರವಾಗಿ ನಿರ್ಧರಿಸಿದೆ. ಈ ಹಣವನ್ನು ಪಾಕಿಸ್ತಾನದ ಜನರ ಅಭಿವೃದ್ಧಿ ಮತ್ತು ಉನ್ನತಿಗಾಗಿ ಎಂದಿಗೂ ಬಳಸಲಾಗಿಲ್ಲ ಮತ್ತು ಬದಲಾಗಿ ಭಯೋತ್ಪಾದನಾ ನಿಧಿಗೆ ತಿರುಗಿಸಲಾಗಿದೆ ಎಂದು ಭಾರತ ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net