ಸೋಂಪು ಕಾಳುಗಳನ್ನು ಸೇವಿಸಿದರೆ ಹೊಟ್ಟೆ ಕರಗುತ್ತದೆಯೇ; ವೈದ್ಯರು ಹೇಳೋದೇನು?Fennel

fennel1
Published on

Health tips : ನಾವುಗಳು ಹೆಚ್ಚಾಗಿ ಈ ಸೋಂಪು ಕಾಳುಗಳನ್ನು ಊಟವಾದ ಬಳಿಕ ರೆಸ್ಟೋರೆಂಟ್‌ನಲ್ಲಿ ತಿಂದಿರುತ್ತೇವೆ. ಸೋಂಪು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದರ ಜೊತೆಗೆ ಉತ್ತಮ ಮೌತ್ ಫ್ರೆಶ್‌ನರ್‌ನಂತೆ ಕೆಲಸ ಮಾಡುತ್ತದೆ. ಈ ಸೋಂಪು ಕಾಳುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ವೈದ್ಯರು ಹೇಳುತ್ತಾರೆ. ತೂಕ ಇಳಿಸುವಲ್ಲಿ ಸೋಂಪು ಕೂಡ ಪ್ರಯೋಜನಕಾರಿಯಾಗಿದೆ. ಸೋಂಪು ನೀರನ್ನು ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಆದರೆ ಪ್ರತಿದಿನ ಊಟದ ನಂತರ ಸೋಂಪು ತಿನ್ನುವುದರಿಂದ ಆಗುವ ಪ್ರಯೋಜನ ಏನು ಮತ್ತು ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಊಟದ ನಂತರ ಸೋಂಪು ಸೇವನೆ:

5) ಗಂಟಲು ನೋವು ಇದ್ದರೆ ನೀವು ಸೋಂಫು ಮತ್ತು ಕಲ್ಲುಸಕ್ಕರೆಯನ್ನು ತಿನ್ನಬೇಕು. ಇದರಲ್ಲಿರುವ ಔಷಧೀಯ ಗುಣಗಳು ನೆಗಡಿ ಮತ್ತು ಕೆಮ್ಮಿನಿಂದ ಮುಕ್ತಿ ನೀಡುತ್ತದೆ.

4) ಸೋಂಪು ಸೇವಿಸುವುದರಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ. ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ಜನರು ಸೋಂಪು ತಿನ್ನುವುದರಿಂದ ಹೆಚ್ಚಿನ ಪರಿಹಾರವನ್ನು ಕಂಡುಕೊಳ್ಳಬಹುದು.

3) ಸೋಂಪು pH ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಇದು ಜಠರಕರುಳಿನ ಪ್ರದೇಶವನ್ನು ಶುಚಿಗೊಳಿಸಿ, ಎದೆಯುರಿ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

2) ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವಲ್ಲಿ ಸೋಂಪು ಕೂಡ ಪರಿಣಾಮಕಾರಿಯಾಗಿದೆ. ಇದು ನಿಮ್ಮ ಉಸಿರನ್ನು ತಾಜಾಗೊಳಿಸುವ ನೈಸರ್ಗಿಕ ಸುವಾಸನೆಯನ್ನು ಹೊಂದಿರುತ್ತದೆ.

1) ಊಟದ ನಂತರ ಸೋಂಪು ಕಾಳುಗಳನ್ನು ಅಗಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಸೋಂಪು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ, ಇದು ಆಹಾರವನ್ನು ತಿಂದ ನಂತರ ಹೊಟ್ಟೆ ಉಬ್ಬುವುದನ್ನು ನಿವಾರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸೋಂಪು ತಿನ್ನುವುದರಿಂದ ಆಗುವ ಪ್ರಯೋಜನಗಳು :

ದೇಹದ ತೂಕ ಇಳಿಸುವಲ್ಲಿ ಸೋಂಪು ಕೂಡ ಪ್ರಯೋಜನಕಾರಿಯಾಗಿದೆ. ಇದು ಹಸಿವು ತಡೆಯುವ ಗುಣಗಳನ್ನು ಹೊಂದಿರುವುದರಿಂದ ನಮ್ಮ ತೂಕ ಇಳಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರನ್ನು ಕುಡಿಯುವುದು ನಮ್ಮ ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

ಸೋಂಪು ಹೊಟ್ಟೆಯ ಪ್ರದೇಶದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಬೀಜದಲ್ಲಿ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹದ ಆಂತರಿಕ ವಿಷವನ್ನು ಹೊರಹಾಕುತ್ತದೆ ಮತ್ತು ಕೊಳಕು ವಿಷವನ್ನು ತೆಗೆದುಹಾಕುತ್ತದೆ. ಸೋಂಪು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಈ ಧಾನ್ಯವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಚರ್ಮದ ಮೇಲೆ ಮೊಡವೆಗಳು ಬರದಂತೆ ರಕ್ಷಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿಯೂ ಸೋಂಪು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಯಾರು ಸೋಂಪು ನೀರು ಕುಡಿಯಬಾರದು:

ಸೋಂಪಿನಲ್ಲಿರೋ ಎಣ್ಣೆ ತುಂಬಾ ಜನರಿಗೆ ಅಲರ್ಜಿ ಸಮಸ್ಯೆಗಳನ್ನ ಉಂಟುಮಾಡುತ್ತೆ. ಅಂಥವರು ಸೋಂಪು ನೀರು ಕುಡಿಯಬಾರದು. ಗರ್ಭಿಣಿಯರು, ಬಾಣಂತಿಯರು ಸೋಂಪು ನೀರು ಕುಡಿಯಬಾರದು. ಯಾವುದಾದರೂ ಕಾಯಿಲೆ ಕಡಿಮೆ ಆಗೋಕೆ ಔಷಧಿ ಪಡೆಯುತ್ತಿರೋರು ಸಹ ಡಾಕ್ಟರ್ ಸಲಹೆ ಇಲ್ಲದೆ ಸೋಂಪು ನೀರು ಕುಡಿಯಬಾರದು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net