ಟೆಸ್ಟ್​ ಮ್ಯಾಚ್ ಟೀ ಬ್ರೇಕ್​ ವೇಳೆ ಕ್ರಿಕೆಟಿಗರು ಏನನ್ನು ಸೇವಿಸುತ್ತಾರೆ? ಓಲಿ ಪೋಪ್ ಹೇಳಿದ್ದು ಹೀಗೆ| Test Match Lunch Break

food
Published on

Test Match; ಕ್ರಿಕೆಟ್​ ಎಂಬುದು ಕೇವಲ ಬ್ಯಾಟಿಂಗ್​ ಮತ್ತು ಬೌಲಿಂಗ್​ನಿಂದ ಕೂಡಿರುವ ಸಾಮಾನ್ಯ ಕ್ರೀಡೆಯಲ್ಲ. ಇದಕ್ಕಾಗಿ ಮೈದಾನದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಆಟಗಾರರು ವ್ಯಾಯಾಮ, ಯೋಗ ಜೊತೆಗೆ ಉತ್ತಮ ಆಹಾರವನ್ನು ಸೇವನೆ ಮಾಡುವ ಮೂಲಕ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳುತ್ತಾರೆ.

ಆಟಗಾರರು ಏನನ್ನು ಸೇವಿಸುತ್ತಾರೆ.?

ಸಾಮಾನ್ಯವಾಗಿ ಆಟಗಾರರಿಗೆ ಫಿಟ್ನೆಸ್​ ಮತ್ತು​ ಡೈಯಟ್​ ಪ್ರಕಾರ ಆಹಾರವನ್ನು ನೀಡಲಾಗುತ್ತದೆ. ಊಟದ ಸಮಯದಲ್ಲಿ ಆಟಗಾರರೊಂದಿಗೆ ವಿಶೇಷ ಪೌಷ್ಟಿಕತಜ್ಞರು ಕೂಡಾ ಇರುತ್ತಾರೆ. ಅವರು ಊಟದ ಮೆನುವನ್ನು ತಯಾರಿಸುತ್ತಾರೆ. ಇದು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಒಳಗೊಂಡಿರುತ್ತದೆ. ಇದರಲ್ಲಿ ದಾಲ್ ರೈಸ್, ತರಕಾರಿ, ಕೋಳಿ, ಮೀನು, ರೊಟ್ಟಿ, ಸಲಾಡ್‌, ಹಣ್ಣುಗಳು ಮತ್ತು ಎನರ್ಜಿ ಪಾನೀಯಗಳು ಸೇರಿರುತ್ತವೆ.

ಪ್ರತಿದಿನ ಟೆಸ್ಟ್ ಪಂದ್ಯ ಪ್ರಾರಂಭವಾದ ನಂತರ ಎರಡು ಗಂಟೆಗೆ ಒಂದು ಅವಧಿ ಕೊನೆಗೊಳ್ಳುತ್ತದೆ. ಈ ಅವಧಿ ಮುಗಿದ ನಂತರ, 40 ನಿಮಿಷಗಳ ವಿರಾಮವಿರುತ್ತದೆ. ಇದನ್ನು 'ಭೋಜನ ವಿರಾಮ' ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮೈದಾನದಲ್ಲಿ ಆಡುವ ಆಟಗಾರರು ಸ್ವಲ್ಪ ವಿಶ್ರಾಂತಿ ಪಡೆಯುತ್ತಾರೆ.

ಬ್ಯಾಟ್ಸ್‌ಮನ್ ಓಲಿ ಪೋಪ್ ಆಹಾರ ಪದ್ಧತಿ ಹೇಗಿರುತ್ತದೆ.?

ಟೆಸ್ಟ್ ಕ್ರಿಕೆಟ್‌ನಲ್ಲಿ ಊಟ ಮತ್ತು ಚಹಾ ವಿರಾಮದ ಸಮಯದಲ್ಲಿ ಆಟಗಾರರು ಏನು ಸೇವಿಸುತ್ತಾರೆ ಎಂಬುದರ ಕುರಿತು ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಓಲಿ ಪೋಪ್ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪೋಪ್, ಆಟಗಾರರ ಆಹಾರ ಪದ್ಧತಿ ಅವರು ಆಟದಲ್ಲಿ ತೊಡಗಿಕೊಂಡಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಅವಲಂಬಿಸಿ ಬದಲಾಗುತ್ತದೆ ಎಂದಿದ್ದಾರೆ.

(ಏಜೆನ್ಸೀಸ್)

ಟೆಸ್ಟ್ ಕ್ರಿಕೆಟ್‌ನ ವಿಶಿಷ್ಟ ಬ್ರಿಟಿಷ್ ಭಾಗವಾದ ಸಾಂಪ್ರದಾಯಿಕ 'ಚಹಾ ವಿರಾಮ'ದ ವಿಷಯಕ್ಕೆ ಬಂದಾಗ, ಅದು ಯಾವಾಗಲೂ ಚಹಾ ಕುಡಿಯುವುದರ ಬಗ್ಗೆ ಅಲ್ಲ ಎಂದು ಪೋಪ್ ಒಪ್ಪಿಕೊಂಡರು. ಕೆಲವರು ಚಹಾ ಕುಡಿಯಲು ಇಷ್ಟಪಡುತ್ತಾರೆ, ನಾನು ಸಾಮಾನ್ಯವಾಗಿ ಕಾಫಿ ಕುಡಿಯುತ್ತೇನೆ. ಕೆಲವೊಮ್ಮೆ ಮಾತ್ರ ಒಂದು ಕಪ್ ಚಹಾ ಕುಡಿಯುತ್ತೇನೆ ಎಂದಿದ್ದಾರೆ.

ಸಾಮಾನ್ಯವಾಗಿ ಕೋಳಿ, ಮೀನು, ಬಹುಶಃ ಪಾಸ್ತಾ ಜೊತೆ ಸ್ಟೀಕ್ ಸೇವಿಸುತ್ತಾರೆ ಎಂದು ಪೋಪ್ ಹೇಳಿದ್ದಾರೆ. ನಾನು ಬ್ಯಾಟಿಂಗ್ ಮಾಡುತ್ತಿದ್ದರೆ ನಿಜವಾಗಿಯೂ ಹೆಚ್ಚು ತಿನ್ನುವುದಿಲ್ಲ, ದೇಹವು ಹೆಚ್ಚು ತಿನ್ನಲು ಬಯಸುವುದಿಲ್ಲ, ಹಾಗಾಗಿ ನಾನು ಪ್ರೋಟೀನ್ ಶೇಕ್ ಮತ್ತು ಬಾಳೆಹಣ್ಣನ್ನು ಸೇವಿಸುತ್ತೇನೆ. ದಿನವಿಡೀ ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು ಏನನ್ನಾದರೂ ಸ್ವಲ್ಪ ಮಟ್ಟದಲ್ಲಿ ತಿನ್ನುತ್ತೇನೆ, ಏಕೆಂದರೆ ಅದನ್ನು ಒಳಗೆ ತೆಗೆದುಕೊಳ್ಳುವುದು ತುಂಬಾ ಕಷ್ಟ. ಹಾಗಾಗಿ ದಿನದ ಕೊನೆಯಲ್ಲಿ ಪ್ರೋಟೀನ್​ ಶೇಕ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net