ನಟ ದರ್ಶನ್​ ಭೇಟಿ ಮಾಡಿದ ಬಳಿಕ ಸಾಧುಕೋಕಿಲ ಹೇಳಿದ್ದೇನು?

sadu
Published on

ಬೆಂಗಳೂರು: ನಟ ದರ್ಶನ್​ ಅವರನ್ನು ನೋಡಲು ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಚಿತ್ರರಂಗದ ಆಪ್ತರು ಕೂಡ ಜೈಲಿಗೆ ಬಂದು ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಇಂದು (ಜುಲೈ 25) ಹಾಸ್ಯನಟ ಸಾಧುಕೋಕಿಲ ಅವರು ಜೈಲಿಗೆ ಬಂದಿದ್ದಾರೆ. ಅವರ ಜೊತೆ ದಿನಕರ್​ ತೂಗುದೀಪ್​ ಕೂಡ ಇದ್ದರು.

ಅಲ್ಲಿ ನಡೆದ ಮಾತುಕಥೆಯ ಬಗ್ಗೆ ಸಾಧುಕೋಕಿಲ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಮಂಗಳವಾರ ನಟ ದರ್ಶನ್ ಭೇಟಿ ಸಾಧ್ಯವಾಗಿರಲಿಲ್ಲ. ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕ ರಾಮಮೂರ್ತಿ ಇತರೆ ಸ್ನೇಹಿತರು ಭೇಟಿ ಮಾಡಬೇಕಿತ್ತು, ಇದರಿಂದ ವಾರಕ್ಕೆ ಎರಡೇ ಎಂಟ್ರಿಗೆ ಅವಕಾಶ ಹಿನ್ನೆಲೆ ದರ್ಶನ್ ಅವರನ್ನು ಭೇಟಿ ಮಾಡದೆ ವಾಪಸ್ ಹೋಗಿದ್ದೆ, ಇಂದು ಎಲ್ಲಾ ಸ್ನೇಹಿತರು ನಟ ದರ್ಶನ್ ಭೇಟಿ ಮಾಡಿದ್ದೇವೆ ಎಂದು ಹೇಳಿದರು.

ಬುಕ್ಸ್ ಓದಿಕೊಂಡು ಕೂಲಾಗಿ, ಕಾಮಾಗಿ ಇದ್ದಾರೆ. ಅವರನ್ನು ನೋಡಿ ನಮಗೂ ನೆಮ್ಮದಿ ಸಿಕ್ತು. ಮೊದಲನೇ ಸಿನಿಮಾ ಮೆಜೆಸ್ಟಿಕ್​ನಿಂದ ನಾವು ಸ್ನೇಹಿತರು. ನಟ ದರ್ಶನ್ ಏನೂ ಅಂತಾ ಚೆನ್ನಾಗಿ ಗೊತ್ತು. ಒಬ್ಬ ಬ್ರದರ್ ಆಗಿ ನಟ ದರ್ಶನ್ ನೋಡ್ಲಿಕ್ಕೆ ಬಂದಿದ್ದೇನೆ ಎಂದು ಹೇಳಿದರು.

ದರ್ಶನ್ ಆರೋಗ್ಯವಾಗಿದ್ದು, ಕಾನೂನು ರೀತಿಯಲ್ಲಿ ನಟ ದರ್ಶನ್​ಗೆ ಚಿಕಿತ್ಸೆ ಮತ್ತು ಇತರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಾಧುಕೋಕಿಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net