

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ ನಂತರ ಮರಣ ಹೊಂದಿದ ಎಲ್ಲರನ್ನೂ ತೋರಿಸಲು ಶ್ರೀಕೃಷ್ಣನು ದ್ರೌಪದಿಯನ್ನು ರಣರಂಗಕ್ಕೆ ಕರೆತರುತ್ತಾನೆ. ಯುದ್ಧದಲ್ಲಿ ಮರಣ ಹೊಂದಿದ ಹೆಣಗಳ ರಾಶಿಯನ್ನು ನೋಡಲು ಹೆಣ್ಣೊಬ್ಬಳನ್ನು ಶ್ರೀಕೃಷ್ಣ ಏಕೆ ಯುದ್ಧರಂಗಕ್ಕೆ ಕರೆತಂದು ಎಂದು ನಮಗೆ ಆಶ್ಚರ್ಯ ಆಗಬಹುದು.
ಕೃಷ್ಣ ದ್ರೌಪದಿಯನ್ನು ಯುದ್ಧಭೂಮಿಗೆ ಕೆರದೋಯ್ದಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ದ್ರೌಪದಿಯನ್ನು ರಣರಂಗಕ್ಕೆ ಕೃಷ್ಣನು ಕೆರದುಕೊಂಡು ಹೋಗಲು ಒಂದು ಹಿನ್ನೆಲೆ ಇದೆ. ಪಾಂಡವರು ವನವಾಸ ಮುಗಿಸಿ ಬಂದ ಬಳಿಕ ಶ್ರೀಕೃಷ್ಣನು ಕೌರವರ ಬಳಿ ಸಂಧಾನಕ್ಕೆ ಹೋಗುತ್ತಾನೆ.
ಸಂಧಾನಕ್ಕೆ ಹೋಗುವ ಮುನ್ನ ಶ್ರೀಕೃಷ್ಣನು ಪಾಂಡವರೈವರ ಬಳಿ ಒಬ್ಬರಲ್ಲಿಯೂ ಅವರ ಅಭಿಪ್ರಾಯವನ್ನು ಕೇಳುತ್ತಾನೆ. ಕೇಳಿ ಹೊರಡುವ ಮುನ್ನ ದ್ರೌಪದಿಯು ತನ್ನ ಬಿಚ್ಚಿದ ತಲೆಮುಡಿಯನ್ನು ಹಿಡಿದುಕೊಂಡು ಬಂದು ಕೃಷ್ಣನ ಬಳಿ ಹೇಳುತ್ತಾಳೆ. ರಾಜಸೂಯದ ಪವಿತ್ರ ತೀರ್ಥದಿಂದ ಅಭಿಷೇಕವಾಗಿದ್ದ ಈ ಕೂದಲನ್ನು ನೀಚ ದುಶ್ಯಾಸನ ಮುಟ್ಟಿ ಅಪವಿತ್ರಗೊಳಿಸಿದ್ದಾನೆ.ಇದರಿಂದಿ ನನಗಾದ ನೋವು ಎಷ್ಟೆಂಬುದು ನಿನಗೆ ತಿಳಿದಿದೆ ಎಂದು ಹೇಳಿ ಕೃಷ್ಣನ ಕಾಲ್ಗಳನ್ನು ಮುಟ್ಟಿ ನಮಸ್ಕರಿಸುತ್ತಾಳೆ.
ಹೀಗೆ ಕೃಷ್ಣನ ಪಾದಗಳನ್ನು ಮುಟ್ಟಿ ನಮಸ್ಕರಿಸುವಾಗ ದ್ರೌಪದಿಯ ಕಣ್ಣೀರು ಶ್ರೀಕೃಷ್ಣನ ಪಾದದ ಮೇಲೆ ಬೀಳುತ್ತದೆ. ಅದನ್ನು ಗಮನಿಸಿದ ಕೃಷ್ಣ ದ್ರೌಪದಿಗೆ ಕಣ್ಣೀರನ್ನು ಒರೆಸಿಕೊಳ್ಳುವಂತೆ ಹೇಳಿ, ಯಾರ ಮೇಲೆ ಕೋಪದಿಂದ ಕಣ್ಣೀರು ಸುರಿಸುತ್ತಿರುವೆಯೋ ಅವರು ದುರಂತದ ಫಲವನ್ನನುಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ ಎಂದು ಹೇಳಿ ಹೊರಡುತ್ತಾನೆ.
ಸಂಧಾನ ಫಲಿಸದೆ ಕುರುಕ್ಷೇತ್ರ ಯುದ್ಧ ಸಂಭವಿಸುತ್ತದೆ. ಯುದ್ಧದ ನಂತರ ಕೃಷ್ಣನು ತನ್ನ ಮಾತಿಗನುಗುಣವಾಗಿ ದ್ರೌಪದಿಯನ್ನು ರಣರಂಗಕ್ಕೆ ಕರೆತಂದು ಹೇಳುತ್ತಾನೆ. ನೋಡು ಇದು ಭೀಮನ ಗದೆಯ ಅಥವಾ ಅರ್ಜುನನ ಗಾಂಡೀವದ ಫಲವಲ್ಲ, ಇದು ನಿನ್ನ ಕಣ್ಣೀರಿನ ಫಲ. ಒಬ್ಬ ಪತಿವ್ರತೆ ಹೆಣ್ಣಿನ ಕಣ್ಣೀರಿಗಿರುವ ಶಕ್ತಿ ಪ್ರಪಂಚದ ಯಾವ ಆಯುಧಕ್ಕೂ ಇಲ್ಲ. ದ್ರೌಪದಿಯ ಕಣ್ಣೀರಿ ಫಲ ಏನೆಲ್ಲಾ ಮಾಡಿದೆ ಎಂಬುದನ್ನು ಕೃಷ್ಣನು ಕುರುಕ್ಷೇತ್ರ ಯುದ್ಧದಲ್ಲಿ ಮಡಿದಿದ್ದವರ ಹೆಣದ ರಾಶಿಯನ್ನು ತೋರಿಸುತ್ತಾನೆ.
ನೀರು ಯಾರ ಮೇಲೆ ಕೋಪಿಸಿಕೊಂಡು ಕಣ್ಣೀರು ಸುರಿಸಿದೆಯೋ ನೋಡು ಅವರ ಸ್ಥಿತಿಯನ್ನು, ಇದು ನಿನ್ನ ಕಣ್ಣೀರಿನ ಮತ್ತು ನಿನ್ನ ಕಣ್ಣೀರಿನಿಂದ ಜಾಗೃತವಾದ ಭೀಮನ ಗದೆಯ ಪ್ರಹಾರದ ಫಲ. ಭೀಮನ ಗದೆಯಿಂದ ಮುರಿದ ತೊಡೆ, ಒಡೆದ ಎದೆಯನ್ನು ನೋಡು ಎಂದು ರಣರಂಗದ ಆ ಭೀಕರ ದೃಶ್ಯವನ್ನು ತೋರಿಸುತ್ತಾ ದ್ರೌಪದಿಗೆ ಹೇಳುತ್ತಾನೆ.