ಟಿ20 ವಿಶ್ವಕಪ್​ನಲ್ಲಿ ಪಪುವಾ ನ್ಯೂಗಿನಿ ಎದುರು ಪ್ರಯಾಸಕರ ಗೆಲುವು ಸಾಧಿಸಿದ ವೆಸ್ಟ್​ ಇಂಡೀಸ್​​

web west indies t20 wc
Published on

ಪ್ರಾವಿಡೆನ್ಸ್​ (ಗಯಾನಾ): ಕ್ರಿಕೆಟ್​ ಶಿಶು ಪಪುವಾ ನ್ಯೂಗಿನಿ ಎದುರು ಸಾಧಾರಣ ಮೊತ್ತದ ಚೇಸಿಂಗ್​ನಲ್ಲಿ ಪರದಾಡಿದ ನಡುವೆ ಆತಿಥೇಯ ವೆಸ್ಟ್​ ಇಂಡೀಸ್​ ತಂಡ ಟಿ20 ವಿಶ್ವಕಪ್​ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಗೆಲುವು ಸಾಧಿಸಿ ಶುಭಾರಂಭ ಕಂಡಿದೆ.

ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಪಪುವಾ ನ್ಯೂಗಿನಿ, ಆರಂಭಿಕ ಆಘಾತದ ನಡುವೆ ಸೆಸೆ ಬವು (50 ರನ್​, 43 ಎಸೆತ, 6 ಬೌಂಡರಿ, 1 ಸಿಕ್ಸರ್​) ಅರ್ಧಶತಕದ ಹೋರಾಟದಿಂದ 8 ವಿಕೆಟ್​ಗೆ 136 ರನ್​ ಕಲೆಹಾಕಿತು. ಪ್ರತಿಯಾಗಿ ವಿಂಡೀಸ್​, ಬ್ರೆಂಡನ್​ ಕಿಂಗ್​ (34), ನಿಕೋಲಸ್​ ಪೂರನ್​ (27) ಉತ್ತಮ ಬುನಾದಿ ಹಾಕಿದ ನಡುವೆ ಮಧ್ಯಮ ಕ್ರಮಾಂಕದಲ್ಲಿ 36 ರನ್​ ಅಂತರದಲ್ಲಿ 4 ವಿಕೆಟ್​ ಕಳೆದುಕೊಂಡು ಪರದಾಡಿತು. ಅಂತಿಮವಾಗಿ ರೋಸ್ಟನ್​ ಚೇಸ್​ (42*), ಆಂಡ್ರೆ ರಸೆಲ್​ (15*) ಆಸರೆಯಲ್ಲಿ 19 ಓವರ್​ಗಳಲ್ಲಿ 5 ವಿಕೆಟ್​ಗೆ 137 ರನ್​ ಗಳಿಸಿ ಜಯ ಒಲಿಸಿಕೊಂಡಿತು.

ಪಪುವಾಗೆ ಕಡಿವಾಣ: 2021ರ ಬಳಿಕ ಮತ್ತೆ ಟಿ20 ವಿಶ್ವಕಪ್​ಗೆ ಪ್ರವೇಶ ಪಡೆದಿರುವ ಪಪುವಾ ನ್ಯೂಗಿನಿ 50 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಪರದಾಡಿತು. ಬಳಿಕ ಸೆಸೆ ಚೇತರಿಕೆ ನೀಡಿದರೆ, ಕೊನೆಯಲ್ಲಿ ವಿಕೆಟ್​ ಕೀಪರ್-ಬ್ಯಾಟರ್​ ಕಿಪ್ಲಿನ್​ ಡೊರಿಗಾ (27*) ಮೊತ್ತವನ್ನು ಏರಿಸಿದರು. ಆಂಡ್ರೆ ರಸೆಲ್​ (19ಕ್ಕೆ 2), ಅಲ್ಜಾರಿ ಜೋಸ್​ೆ (34) ಬಿಗಿ ದಾಳಿಯ ನಡುವೆ ಪಪುವಾ ಕೊನೇ 5 ಓವರ್​ಗಳಲ್ಲಿ 42 ರನ್​ ಕಸಿದು ಗೌರವಯುತ ಮೊತ್ತ ಪೇರಿಸಿತು.

ಪಪುವಾ ನ್ಯೂಗಿನಿ: 8 ವಿಕೆಟ್​ಗೆ 136 (ಅಸದ್​ ವಾಲಾ 21, ಸೆಸೆ ಬವು 50, ಕಿಪ್ಲಿನ್​ ಡೊರಿಗಾ 27*, ರಸೆಲ್​ 19ಕ್ಕೆ 2, ಅಲ್ಜಾರಿ ಜೋಸ್​ೆ 34ಕ್ಕೆ 2, ಶೆರ್ಡ್​ 23ಕ್ಕೆ 1, ಅಕೀಲ್​ 9ಕ್ಕೆ 1, ಮೋತಿ 24ಕ್ಕೆ 1). ವೆಸ್ಟ್​ ಇಂಡೀಸ್​: 19 ಓವರ್​ಗಳಲ್ಲಿ 5 ವಿಕೆಟ್​ಗೆ 137 (ಬ್ರೆಂಡನ್​ ಕಿಂಗ್​ 34, ಪೂರನ್​ 27, ರೋಸ್ಟನ್​ ಚೇಸ್​ 42*, ರಸೆಲ್​ 15*, ಅಸದ್​ ವಾಲಾ 28ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net