ಸತ್ಯಾಂಶವನ್ನು ಹೊರಗಿಟ್ಟು... ಟೀಮ್ ಇಂಡಿಯಾ ವಿರುದ್ಧ ಸೋತ ಬೆನ್ನಲ್ಲೇ ಪಾಕ್ ಮಾಜಿ ಆಟಗಾರನ ಹೇಳಿಕೆ ವೈರಲ್​

Pakistan Cricket Team
Published on

ನವದೆಹಲಿ: ಫೆಬ್ರವರಿ 23ರಂದು ನಡೆದ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿಗಳನ್ನು ಬಗ್ಗು ಬಡಿಯುವ ಮೂಲಕ ಭಾರತ ಪಾಕಿಸ್ತಾನದ ವಿರುದ್ಧ ತನ್ನ ಅಧಿಪತ್ಯವನ್ನು ಮುಂದುವರೆಸಿದೆ. ಪಾಕಿಸ್ತಾನ ನೀಡಿದ 241 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ (100 ರನ್, 11 ಎಸೆತ, 7 ಬೌಂಡರಿ) ಅಮೋಘ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಗುರಿಯನ್ನು 4 ವಿಕೆಟ್​ ನಷ್ಟಕ್ಕೆ 42.3 ಓವರ್​ಗಳಲ್ಲಿ ಬೆನ್ನತ್ತಿ ಗೆಲುವಿನ ನಗೆ ಬೀರಿತು.

ಹಾಲಿ ಚಾಂಪಿಯನ್ಸ್ ಪಟ್ಟದೊಂದಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನವು (Pakistan) ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಫೆಬ್ರವರಿ 27ರಂದು ಬಾಂಗ್ಲಾದೇಶ ವಿರುದ್ಧ ಔಪಚಾರಿಕವಾಗಿ ಪಂದ್ಯವನ್ನು ಆಡಲಿದೆ. ಇನ್ನೂ ಭಾರತದ ವಿರುದ್ಧ ಸೋಲಿನ ನಂತರ ಪಾಕಿಸ್ತಾನ ತಂಡದ ವಿರುದ್ಧ ಅಲ್ಲಿನ ಹಾಲಿ ಹಾಗೂ ಮಾಜಿ ಆಟಗಾರರು ಕಿಡಿಕಾರುತ್ತಿದ್ದು, ಇದೀಗ ತಂಡದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಸತ್ಯವನ್ನು ಜನರ ಮುಂದಿಡುವುದಾಗಿ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶೆಹಜಾದ್​, ತಂಡದಲ್ಲಿ ಫೇವರಿಟಿಸಮ್ ತುಂಬಾ ನಡೆಯುತ್ತಿದ್ದು, ಆಯ್ಕೆ ಸಮಿತಿಯವರ ಒಲವು ಯಾರ ಮೇಲಿರುತ್ತದರೋ ಅಂತಹವರನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ. ನಮಗೆ ಎಲ್ಲವೂ ತಿಳಿದಿದೆ. ನೀವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ ಎಂದು ನಮಗೆ ಅನಿಸದ ಹೊರತು ನಾವು ಇಡೀ ಜಗತ್ತಿಗೆ ಸತ್ಯವನ್ನು ಹೇಳುತ್ತೇವೆ. ಪಾಕಿಸ್ತಾನದಲ್ಲಿ ಒಂದೇ ಒಂದು ಕ್ರೀಡೆ ಉಳಿದಿದೆ. ಅದು ಕ್ರಿಕೆಟ್. ಇಂದು ಅದು ಕೂಡ ಮುಗಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ರಾಷ್ಟ್ರೀಯ ತಂಡದ ಆಯ್ಕೆಗೆ ಪಿಎಸ್‌ಎಲ್ ಮಾನದಂಡವಾಗಬಾರದು ಎಂದು ನಾನು ಪಿಸಿಬಿಗೆ ವಿನಂತಿಸುತ್ತೇನೆ. ದೇಶೀಯ ಕ್ರಿಕೆಟ್‌ನಿಂದ ಉತ್ತಮ ಪ್ರದರ್ಶನ ನೀಡುವವರು ನಿಮ್ಮ ಆದ್ಯತೆಯಾಗಿರಬೇಕು. 1980-90ರ ಮನಸ್ಥಿತಿಯಿಂದ 2025 ರಲ್ಲಿ ಕ್ರಿಕೆಟ್ ಆಡಿದರೆ ನೀವು ಖಂಡಿತವಾಗಿಯೂ ಪಂದ್ಯವನ್ನು ಸೋಲುತ್ತೇವೆ. 2017ರ ನಂತರ ಪಾಕಿಸ್ತಾನ ಯಾವುದೇ ಐಸಿಸಿ ಟೂರ್ನಿಯಲ್ಲಿ ಜಯಿಸಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಪಿಸಿಬಿ (Pakistan Cricket Board) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net