

ಮೇಷ ರಾಶಿಯಲ್ಲಿ ಜನಿಸಿದವರಿಗೆ ಗುರು ಏಕಾದಶದಲ್ಲಿದ್ದರೂ ಮೇ 28ರಿಂದ ಶನಿಯು ವಕ್ರಗತಿಯಲ್ಲಿ ಸಾಗಿದ್ದಾನೆ. ಹಾಗೆಂದರೆ ಹತ್ತರ ಶನಿಯು 9ರ ಮನೆಯ ಕೆಲವೊಂದು ಉಪಯುಕ್ತ ಕೆಲಸ ಮಾಡಿಸುತ್ತಾನೆ. ಹಣಕಾಸು ವಹಿವಾಟಿನಲ್ಲಿ ಎಚ್ಚರವಹಿಸಿ. ಆತುರದ ನಿರ್ಧಾರ ಬೇಡ ಅಥವಾ ದುರಾಸೆಯೂ ಬೇಡ. ಆತ್ಮಗೌರವ ಮುಖ್ಯ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಕಾಲಭೈರವನನ್ನು ಪೂಜಿಸಿ.
ಶುಕ್ರ, ಬುಧ, ರಾಹು ಸ್ವಕ್ಷೇತ್ರಗತನಾಗಿ ಶುಕ್ರನು ಬುಧನ ಸಂಯೋಗದಲ್ಲಿದ್ದಾನೆ. ರಾಹುವಿಗೆ ವೃಷಭ ರಾಶಿ ವಿಶೇಷವಾದ ಫಲವನ್ನು ಕೊಡುವ ಮನೆ. ನಿಮ್ಮ ಕೆಲಸಗಳಲ್ಲಿ ಅಡೆತಡೆ ಬಂದರೂ 9ರಲ್ಲಿ ಶನಿಯು ಉತ್ಸಾಹ ಕೊಟ್ಟು ನಡೆಸುತ್ತಾನೆ. ಅರ್ಧನಾರೀಶ್ವರ ಸ್ತೋತ್ರ ಪಾರಾಯಣ ಮಾಡಿ. ವಿಶೇಷವಾಗಿ ಹನುಮಂತನನ್ನು ಪ್ರಾರ್ಥಿಸಿ. ಸಂಜೆಯ ಹೊತ್ತು ಉಪವಾಸವಿದ್ದು ಬಾಳೆಹಣ್ಣು, ಸಕ್ಕರೆ, ಕಾಯಿಯನ್ನು ಮಾರುತಿಗೆ ಅರ್ಪಿಸಿ.
ಅಂಗಾರಕನು ಮಿಥುನ-ಕನ್ಯಾ ರಾಶಿಗಳಿಗೆ ಒಳ್ಳೆಯ ಗ್ರಹವಲ್ಲ. ಆದರೆ 9ರ ಗುರು ನಿಮ್ಮನ್ನು ಅಷ್ಟಮ ಗುರು-ಶನಿಯ ಹೊಂದಾಣಿಕೆಯಿಂದ ಆಚೆ ತಂದು ಕಾಪಾಡುತ್ತಾನೆ. ಗುರುವಿನ ಮೇಲೆ ಶ್ರದ್ಧೆ, ದೃಢವಾದ ಭಕ್ತಿ ಇರಲಿ. ಮಾರ್ಗದರ್ಶನ ತೋರುವವರನ್ನು ಮರೆಯಬೇಡಿ. ಗುರುನಿಂದನಂ ಸರ್ವನಾಶನಂ ಎಂಬುದನ್ನು ನೆನೆಸಿಕೊಂಡು ಜಗದ್ಗುರುವಾದ ಶ್ರೀಕೃಷ್ಣನನ್ನು ಪ್ರಾರ್ಥಿಸಿ.
ಸಪ್ತಮ, ಅಷ್ಟಮದಲ್ಲಿ ಶನಿ-ಗುರುಗಳು ಶುಭವನ್ನು ಕೊಡದಿದ್ದರೂ ‘ಮನುಷ್ಯನನ್ನು ಕಾಪಾಡಲು ಗುರುವೊಬ್ಬನೇ ಸಾಕು’ ಎಂದು ಗುರುಚರಿತ್ರೆಯ 53 ಅಧ್ಯಾಯಗಳು ಸಾರುತ್ತವೆ. ಕುಗ್ಗಬೇಡಿ. ಭಯಪಡಬೇಡಿ. ಉತ್ಸಾಹದಿಂದ ನಿಮ್ಮ ಕೆಲಸ ಮಾಡಿ. ವ್ಯವಹಾರ ಮುಗಿಯುವ ಕಾಲವಲ್ಲ. ಆದರೆ ಚಿಂತೆ ಬೇಕಿಲ್ಲ. ಶಿವಗೀತ ಭಾಗವಾದ ಶಿವದಾರಿದ್ರ್ಯ ದಹನ ಸ್ತೋತ್ರ ಪಾರಾಯಣ ಮಾಡಿ.
ನವಮದಲ್ಲಿ ಸೂರ್ಯನಿದ್ದರೂ, ಮೋಡ ಕವಿದಾಗ ತೇಜಸ್ಸು ಕುಗ್ಗುತ್ತದೆ. ಹಾಗೆಯೇ ಕೆಲಸದಲ್ಲಿ ಮುಂದೆ ಸಾಗಿ ಹಿಂದೆ ಬಂದರೆ ಆತಂಕದ ಅಗತ್ಯವಿಲ್ಲ. ಷಷ್ಠ ಶನಿ ಪಂಚಮಕ್ಕೆ ವಕ್ರಗತಿಯಲ್ಲಿ ಬಂದಿರುತ್ತಾನೆ. ಸಪ್ತಮ ಗುರುವೊಂದೇ ಸಾಕು ನಿಮ್ಮನ್ನು ಕಾಪಾಡಲು. ಶ್ರೀಹರಿಯನ್ನು ಅರ್ಚಿಸಿ. ರುದ್ರಪಾರಾಯಣ ಮಾಡಿ. ಸಕಲಾಭೀಷ್ಠ ನೆರವೇರಿಸುತ್ತಾನೆ. ಆರೋಗ್ಯಕ್ಕೆ ಹಾನಿಯಿಲ್ಲ.
ಕನ್ಯಾ ರಾಶಿಗೆ ಅಧಿಪತಿ ಮಹಾವಿಷ್ಣುವೇ. ನೀವು ದೈವವನ್ನು ಉಳಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆದರೆ ನಿಮ್ಮನ್ನು ದೇವರೇ ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ. ಶನಿಯು ವಕ್ರನಾಗಿ ಧನುರ್ರಾಶಿಗೆ ಬಂದಿದ್ದಾನೆ. ಆದರೆ ಗುರುವಿನ ಮನೆಯಲ್ಲಿ ಅಧಿಪತ್ಯದಿಂದ ನಿಮ್ಮನ್ನು ಕಾಡುವುದಿಲ್ಲ. ಭಕ್ತಿಯಿಂದ ಶಿವಪೂಜೆ ಮಾಡಿದರೆ ಬೇಡಿದ್ದನ್ನು ಕೊಡುತ್ತಾನೆ.
ವಕ್ರ ಶನಿಯು 3ನೇ ಮನೆಗೆ ಬಂದು ಮುಖ್ಯವಾದ ಕೆಲಸಗಳಲ್ಲಿ ನಿಮಗೆ ಅಭಯ, ಸಂತೋಷ ನೀಡುತ್ತಾನೆ. ಪಂಚಮ ಗುರುವಿರುವುದರಿಂದ ನಿಮ್ಮನ್ನು ಶಿರದಿಂದ ಪಾದದವರೆಗೆ ಸಂರಕ್ಷಿಸುತ್ತಾನೆ. ಅನಗತ್ಯ ವಿಚಾರಗಳಿಗೆ ಹೋಗಬೇಡಿ. ಉಪಕಾರ ಮಾಡುವುದು ಮರೆಯಬೇಡಿ. ನಕಾರಾತ್ಮಕ ಯೋಚನೆಗಳಿಗೆ ಆಸ್ಪದ ಬೇಡ. ಗುರು ನಿಮ್ಮನ್ನು ಕಾಪಾಡುತ್ತಾನೆ.
ಕುಬೇರ ಮಂತ್ರವನ್ನು ಜಪಿಸಲು ಹೇಳಿ ಎರಡುವಾರ ಜರುಗಿದೆ. ಜಪ ಮಾಡಿದವರಿಗೆ ದೇವರು ಫಲ ಕೊಡಬೇಕೆಂಬ ನಿಯಮವಿದೆ. ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿರಿ. ಮಹಾಗಣಪತಿ ಪೂಜೆಯೇ ಶ್ರೇಷ್ಠವಾದದ್ದು. ಕೇವಲ ನೈವೇದ್ಯದಿಂದ ತೃಪ್ತನಾಗುವುದು ಮಹಾಗಣಪತಿ. ಗರಿಕೆಯನ್ನು, ಕಡುಬನ್ನು ಕೊಟ್ಟು ಕಾರ್ಯಾನುಕೂಲ ಮಾಡಿಕೊಳ್ಳಿ. ಸರಸ್ವತಿ ಸ್ತೋತ್ರ ಪಾರಾಯಣ ಮಾಡಿ.
ಅನುಮಾನಂ ಪೆದ್ದ ರೋಗಂ ಎಂದಿದ್ದಾರೆ. ಯಾರ ಮೇಲೂ ಅನುಮಾನ, ಗುಮಾನಿಗಳು ಬೇಡ. ನಿಮ್ಮ ಮುಖಲಕ್ಷಣವೇ ತೋರುತ್ತದೆ, ನಿಮ್ಮ ಕಾರ್ಯವು ಜಯದ ಕಡೆ ಹೋಗುತ್ತದೆ. ಎಲ್ಲವನ್ನೂ ಕೊಡುವವನು ಗುರುವೇ. ಭಯಬೇಡ. ಚಿಂತೆಯೂ ಬೇಡ. ಊಟ ಬಿಟ್ಟರೂ ಪರವಾಗಿಲ್ಲ, ದೈವವನ್ನು ಪ್ರಾರ್ಥಿಸಿ. ಶ್ರೀಗುರುಚರಿತ್ರೆಯ ಪಾರಾಯಣವನ್ನು ಮಾಡಿರಿ.
ವಕ್ರಗತಿಯಲ್ಲಿ ಶನಿಯು ದ್ವಾದಶಕ್ಕೆ ಬಂದಿರುತ್ತಾನೆ. ಇನ್ನೂ ಎಚ್ಚರವಹಿಸಿ. ಆದರೆ ದ್ವಿತೀಯ ಗುರುವು ನಿಮ್ಮನ್ನು ಸಂರಕ್ಷಣೆ ಮಾಡಿ ನಡೆಸಿಕೊಂಡು ಹೋಗುತ್ತಾನೆ. ಶಿವಾನಂದ ಲಹರಿ ಪಾರಾಯಣ ಮಾಡಿ. ಲಲಿತಾ ತ್ರಿಶತಿಯನ್ನು ಅತ್ಯಂತ ಶ್ರದ್ಧೆಯಿಂದ ಪಠಿಸಿ. ದುರ್ಗೆಯನ್ನು ಪ್ರಾರ್ಥಿಸಿ. ಎಲ್ಲ ಕಷ್ಟ ಕಾರ್ಪಣ್ಯಗಳೂ ದೂರವಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.
ವಕ್ರಗತಿಯ ಏಕಾದಶ ಶನಿಯು ಸಣ್ಣಪುಟ್ಟ ಲಾಭವನ್ನು ಕೊಡ ಬಹುದು. ಅಷ್ಟಕ್ಕೆ ತೃಪ್ತರಾಗಿ ನಿಮ್ಮನ್ನು ಕಾಪಾಡಿಕೊಳ್ಳಿ. ಸುಬ್ರ ಹ್ಮಣ್ಯ ಸಹಸ್ರನಾಮ ಪಾರಾಯಣ ಮಾಡಿ. ಸ್ವಾಮಿಯನ್ನು ಅರ್ಚಿಸಿ- ಪೂಜಿಸಿ. ಮನಸ್ಸಿಗೆ, ಶರೀರಕ್ಕೆ ತಾಪತ್ರಯವಿರುತ್ತದೆ. ಸರ್ವಾಂತರ್ಯಾಮಿ ಭಗವಂತನನ್ನು ಪ್ರಾರ್ಥಿಸಿ. ಶರೀರವನ್ನು ಸದೃಢಗೊಳಿಸಬಹುದು. ಧನ್ವಂತರಿ ಪ್ರಾರ್ಥನೆ ಮಾಡಿರಿ. ಎಲ್ಲ ರೋಗವನ್ನು ಶಾಶ್ವತವಾಗಿ ಕೊನೆಗೊಳಿಸಬಹುದು.
ಏಕಾದಶ ಶನಿಯು ದಶಮಕ್ಕೆ ಬಂದು ಗುರುವು ಶನಿ ಮನೆಯ ಸಂಚಾರವಿರುವುದರಿಂದ ಮಿಶ್ರಫಲಗಳು ಒದಗಿ ಕೆಲಸಗಳಲ್ಲಿ ಸ್ವಲ್ಪ ಏರಿಳಿತವಾಗಬಹುದು. ಯೋಚನೆ ಬೇಡ. ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ದೇವರು ಕೊಟ್ಟದ್ದು ಅನನ್ಯ ಎಂದು ಮುಂದೆ ಸಾಗಿರಿ. ಶನಿಯು ಇನ್ನೂ ಒಂದೂವರೆ ವರ್ಷ ಇರುತ್ತಾನೆ. ನವಗ್ರಹ ಸ್ತೋತ್ರ ಪಾರಾಯಣವನ್ನು ಮಾಡಿ ಸುಖವಾಗಿರಿ.