

ವೃಷಭ: ದ್ವಾದಶದಲ್ಲಿ ಸೂರ್ಯ ಇದ್ದು, ಶನಿಯು ಏಕಾದಶಕ್ಕೆ ಬಂದಿದ್ದಾನೆ. ಮೇ 13ರ ನಂತರ ರಾಜಯೋಗ ತನ್ನಿಂದ ತಾನೇ ಪ್ರಾಪ್ತವಾಗುತ್ತದೆ. ನಿಂತ ನೀರು ಕುಡಿಯಲು ಯೋಗ್ಯವಲ್ಲ. ಹಾಗೆಯೇ ಯಾರನ್ನು ನಂಬಬೇಕು ಎಂಬುದನ್ನು ಪರಮಾತ್ಮನೇ ಅರ್ಥೈಸುತ್ತಾನೆ. ವಿಭಿನ್ನ ಸಮಯೋಚಿತ ಮಾರ್ಗ ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಚಂಡಿಕಾ ಅಷ್ಟೋತ್ತರ ಪಾರಾಯಣ ಮಾಡಿರಿ.
ಮಿಥುನ: ಗುರು ದ್ವಾದಶದಲ್ಲಿ ಮುಂದುವರಿದಿದ್ದಾನೆ. ದಶಮದಲ್ಲಿ ಶನಿಯು ಇರುವುದರಿಂದ ಗ್ರಹಸ್ಥಿತಿಯ ಮುನ್ನೋಟದಿಂದ ದೇವರಿಗೆ ಪ್ರಾರ್ಥನೆ, ಒಳ್ಳೆಯ ಸಂಕಲ್ಪ, ಶುದ್ಧವಾದ ಮನಸ್ಸಿದ್ದರೆ ದೇವರು ನಿಮ್ಮ ಮೇಲೆ ಕರುಣೆ ತೋರುತ್ತಾನೆ. ನಿಮ್ಮ ಕಾರ್ಯ ಯಶಸ್ವಿಯಾಗಿ ಮುಂದುವರಿಯುತ್ತದೆ. ರಾಮ ಅಷ್ಟೋತ್ತರ ಪಠಿಸಿ.
ಕಟಕ: ಏಕಾದಶದಲ್ಲಿ ಗುರುವಿದ್ದಾನೆ. ನವಮಕ್ಕೆ ಶನಿ ಬಂದು ಸೇರಿ, ಅಷ್ಟಮ ಶನಿಯ ಪ್ರಭಾವವನ್ನು ಕಡಿಮೆ ಮಾಡಿ ಮುಖವನ್ನು ಕಾಂತಿಯುಕ್ತವಾಗಿಟ್ಟು ಗೆಲುವಿನ ಸೂಚನೆ ತಂದಿರುತ್ತಾನೆ. ಗುರುವು ದ್ವಾದಶಕ್ಕೆ ಬಂದರೂ, ಗುರುವಿನ ಉಚ್ಛ ರಾಶಿಯಲ್ಲಿ ಹುಟ್ಟಿದ ನಿಮಗೆ, ಗುರು ಎಲ್ಲಿದ್ದರೂ ಒಂದೇ, ಸೂರ್ಯನು ಬೆಳಕನ್ನು ನೀಡುವಂತೆ ಆತನ ಕೃಪೆ ಇದ್ದೇ ಇರುತ್ತದೆ.
ಸಿಂಹ: ಸಿಂಹವು ಗರ್ಜಿಸಿದರೆ ದುರ್ಗೆ ಅವಳ ವಾಹನದಲ್ಲಿ ಹೋಗುತ್ತಿದ್ದಾಳೆ ಎಂದರ್ಥ. ದುರ್ಗೆಯು ಇಲ್ಲದಿದ್ದರೆ ಹುಲಿಯೇ ಇಲಿಯಾಗುತ್ತದೆ. ಆದರೆ ಸಿಂಹ ರಾಶಿಯವರಿಗೆ ಎಲ್ಲ ದೇವತಾ ಅನುಗ್ರಹವು ಸದಾಕಾಲ ಇರುತ್ತದೆ. ನಿಸ್ವಾರ್ಥ ಜೀವನ ನಡೆಸಿದರೆ, ಗ್ರಹಗಳು ಎಲ್ಲಿದ್ದರೂ ಒಂದೇ. ಉತ್ತಮ ಸಮಯವು ನಿಮ್ಮ ಬಾಗಿಲು ತಟ್ಟುತ್ತದೆ. ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತೀರಿ. ಅನ್ಯರಿಗೆ ಉಪಕಾರ ಮಾಡುವ ಬುದ್ಧಿ ಮುಂದುವರಿಯಲಿ.
ಕನ್ಯಾ: ಕನ್ಯಾ ಇಲ್ಲದೆ ಜಗತ್ತಿಲ್ಲ. ಸೃಷ್ಟಿಯನ್ನು ಮಾಡಲು ತತ್ತಿಯನ್ನು ಒಡೆದು ಮೂರು ಭಾಗಗಳಾಗಿ ಮಾಡಿದ್ದು ಭಗವಂತನೇ. ಆತನೇ ನಲ್ಮೆಯಿಂದ ನಡೆಯೆಂದು ಕನ್ಯೆಯನ್ನು ಸೃಷ್ಟಿಸಿದ್ದಾನೆ. ಕನ್ಯೆಯೇ ಕಾಳಿಯಾಗಬಹುದು, ಸರಸ್ವತಿಯೂ, ಲಕ್ಷ್ಮಿಯೂ ಆಗಬಹುದು. ಶನಿಯು ಸಪ್ತಮಕ್ಕೆ ಹೋಗಿದ್ದಾನೆ. ಸುಖ ಶಾಂತಿಯಿಂದ ಇರಲು ಶನಿಯನ್ನು ಪ್ರಾರ್ಥಿಸಿ.
ತುಲಾ: ಎಲ್ಲವೂ ನಿಮ್ಮದೇ. ಭಗವಂತನು ಸರ್ವಸ್ವವನ್ನು ನಿಮ್ಮ ಕೈಯಲ್ಲಿ ಕೊಟ್ಟಿರುತ್ತಾನೆ. ಸಕಲ ಸಂಪತ್ತು, ರಾಜಯೋಗವನ್ನು ಅನುಭವಿಸಲು ಶನಿಯು, ಗುರುವು ನಿಮ್ಮ ಏಳಿಗೆಗಾಗಿ ಬಂದಿದ್ದಾರೆ. ಮೃಷ್ಟಾನ್ನ ಭೋಜನ ಮಾಡಿ, ಇನ್ನೊಬ್ಬರಿಗೂ ನೀಡಿ. ಮುಖ್ಯವಾದ ಕೆಲಸಗಳನ್ನು ಮಾಡಿ ಬೇರೆಯವರಿಗೆ ಮಾರ್ಗದರ್ಶಕರಾಗಿ ಬದುಕಿ. ದುರ್ಗೆಯನ್ನು ಪೂಜಿಸಲು ಮರೆಯದಿರಿ.
ವೃಶ್ಚಿಕ: ಕೂತಲ್ಲೇ ಕುಳಿತರೆ ತಲೆ ಕೆಡುತ್ತದೆ. ನಿಂತಲ್ಲೇ ನಿಂತರೆ ಕಾಲು ನೋಯುತ್ತದೆ. ಎರಡು ಕೈಗಳು ಬಲಹೀನವಾದರೂ ಬುದ್ಧಿಯೊಂದಿ ದ್ದರೆ ಎಲ್ಲವೂ ಸರಿಯಾಗಿ ಕೆಲಸವನ್ನು ಮಾಡುತ್ತದೆ. ನಿಮ್ಮ ಬುದ್ಧಿ ಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನಿಮ್ಮ ಕೆಲಸಗಳು ಪೂರ್ಣಗೊಂಡು ಬರಬೇಕಾದ ಧನಸಂಪತ್ತು ಬಂದು ಸೇರುತ್ತದೆ. ಮೇಷ-ವೃಶ್ಚಿಕ ರಾಶಿಯವರಿಗೆ ಸುಬ್ರಹ್ಮಣ್ಯನ ಅನುಗ್ರಹ ಬೇಕೇ ಬೇಕು.
ಧನುಸ್ಸು: ಇಂದಿನ ಜಗತ್ತಿನಲ್ಲಿ ಕ್ಷಿಪಣಿಗಳನ್ನು ಉಪಯೋಗಿಸಿ, ಎಲ್ಲ ರಾಷ್ಟ್ರಗಳು ದೈವ ಸಂಪತ್ತನ್ನು ಪಂಚ ತತ್ವಗಳನ್ನು ಹಾಳುಮಾಡುತ್ತಿವೆ. ರಾಮಚಂದ್ರನ ಆಳ್ವಿಕೆ ಯಲ್ಲಿ ಬಿಲ್ವಿದ್ಯೆಯಿಂದ ಶತ್ರುಗಳನ್ನು ಸಂಹಾರ ಮಾಡಿ ರಾಕ್ಷಸರನ್ನು ನರಕಕ್ಕೆ ಅಟ್ಟುತ್ತಿದ್ದರು. ಸಜ್ಜನರನ್ನು ಕಾಪಾಡಿದ ಉದಾಹರಣೆ ನಮ್ಮಲ್ಲೇ ಇದೆ. ಎಲ್ಲ ರಾಶಿಗಳಿಗಿಂತ ಧನುರ್-ಮೀನ ರಾಶಿಯವರಿಗೆ ದೇವರು ಜನ್ಮತಾ ವಿಶೇಷ ಯೋಗ ಕೊಟ್ಟಿದ್ದಾನೆ. ಆಧಿಪತ್ಯ ಇದ್ದು ಗುರು ಎಲ್ಲವನ್ನೂ ಕೊಡುತ್ತಾನೆ. ದೈವವೇ ನಿಮಗೆ ಸಹಾಯ ಮಾಡುತ್ತದೆ. ರಾಮತಾರಕ ಮಂತ್ರ ಜಪಿಸಿ.
ಮಕರ: ಮಕರ ರಾಶಿಯಲ್ಲಿ ಸೂರ್ಯನು ಬಂದ ಕೂಡಲೇ ಉತ್ತರಾಯಣವು ಆರಂಭ ವಾಗುತ್ತದೆ. ಆಗಲೇ ಸೂರ್ಯನು ನಾಲ್ಕನೇ ಮನೆಯಲ್ಲಿ ಕುಳಿತ್ತಿದ್ದಾನೆ. ಈಗಾಗಲೇ ಶನಿಯು ನಿಮ್ಮನ್ನು ಬಿಟ್ಟು ಒಂದು ಮಾಸ ಮುಗಿದು ಬಂದಿದೆ. ಯಾವ ವಿಚಾರವನ್ನು ಸರಿಮಾಡಿಕೊಂಡಿದ್ದೇನೆ ಎಂದು ಯೋಚಿಸಿ. ಸಮಯ ಹಾಳು ಮಾಡದೆ ಬಿಟ್ಟ ಶನಿ ಒಳ್ಳೆಯ ಫಲ ಕೊಡುತ್ತಾನೆ. ಪಂಚಮದಲ್ಲಿ ಗುರುವಿದ್ದಾನೆ. ಎಲ್ಲ ಕೆಲಸವನ್ನು ಜಯಿಸಬಹುದು.
ಕುಂಭ: ರಾಶಿಗೆ ಎರಡನೇ ಮನೆಯಲ್ಲಿ ಗುರು ಸಾನ್ನಿಧ್ಯದಲ್ಲಿ ಶನಿಯು ಕುಳಿತಿ ದ್ದಾನೆ. ಹಾಗೆಯೇ ಗುರುವು ನಾಲ್ಕನೇ ಮನೆಯಲ್ಲಿ ಇದ್ದರೂ ಶುಕ್ರನ ಮನೆ ಯಾಗಿರುವುದರಿಂದ ಯಾವ ಕೆಲಸವೂ ನಿಂತಿಲ್ಲ. ವೇಗದ ಫಲ ಕೊಡದಿದ್ದರೂ ಏನು ಬೇಕೋ ಅದೆಲ್ಲಾ ಕೊಟ್ಟೇ ಇದ್ದಾನೆ. ಗುರು ಪಂಚಮಕ್ಕೆ ಬಂದಮೇಲೆ ಏನನ್ನು ಬೇಕಾದರೂ ಮಾಡಿ ಜಯುದ ಹಾದಿಯಲ್ಲಿ ಹೋಗಿ ಸುಖವನ್ನು ಕಾಣಿರಿ. ಸುಂದರಕಾಂಡ ಪಾರಾಯಣ ಮಾಡಿರಿ.
ಮೀನ: ಮೈನಾಕ ಪಕ್ಷಿಯನ್ನು ಆಕಾಶದಲ್ಲಿ ಹಾರಲು ನೋಡುವುದು ತುಂಬಾ ಚೆನ್ನ.ಸುಂದರವಾದ ಹೆಣ್ಣಿನಲ್ಲಿ ಮನುಷ್ಯನು ಸ್ಪುರದ್ರೂಪಿಯಾದ, ಚೆಲುವು ಒಲವು ತೋರುವ ಲಲಿತಾ ಪರಮೇಶ್ವರಿಯನ್ನು ನೋಡಬಲ್ಲ. ಕಣ್ಣಲ್ಲಿ ಕಣ್ಣಿಟ್ಟು ದೇವ ರನ್ನು ನೋಡಿ ಅವಳೇ ಕಾಣುತ್ತಾಳೆ. ಬೇಕಾದ್ದೆಲ್ಲಾ ನೀಡಿ, ಸದ್ಭುದ್ಧಿಯನ್ನು ಕರುಣಿಸುವ ಲಲಿತಾ ತ್ರಿಪುರಸುಂದರಿಯನ್ನು ಪ್ರಾರ್ಥಿಸಿ. ಶನಿ ಸಂಚಾರ ದಾಟಿ, ಗುರುಬಲ ಇಲ್ಲದಿದ್ದರೂ ಎಲ್ಲಾ ಆಕಾಂಕ್ಷೆಗಳನ್ನು ಪೂರೈಸುತ್ತಾಳೆ.