ಮಂಗಳೂರು: ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ವೊಂದು ಮನೆ ಮೇಲೆ ಉರುಳಿ ಬಿದ್ದಿದ್ದು. ಸ್ಥಳದಲ್ಲೇ ಐವರು ದುರ್ಮರಣಕ್ಕೀಡಾಗಿದ್ದಾರೆ.
ಕರ್ನಾಟಕ -ಕೇರಳ ಗಡಿಭಾಗದ ಕಲ್ಲಪಳ್ಳಿ ಬಳಿ ಭಾನುವಾರ ಈ ಅವಘಡ ಸಂಭವಿಸಿದೆ. ಕೊಡಗಿನ ಕರಿಕೆಯಲ್ಲಿ ಮದುವೆ ಕಾರ್ಯಕ್ರಮ ಇತ್ತು.
ಮದುವೆ ಮನೆಗೆ 63 ಮಂದಿಯನ್ನು ಬಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆ ಅಂದ್ರೆ ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆ ಮೇಲೆ ಉರುಳಿದೆ. ಬಸ್ನಲ್ಲಿದ್ದ ಐವರು ಮೃತಪಟ್ಟಿದ್ದು. ಹಲವರು ಗಂಭೀರ ಗಾಯಗೊಂಡಿದ್ದಾರೆ.