Benefits Of Mint Leaves: ಇತ್ತೀಚಿನ ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕಿನಲ್ಲಿ ಆಹಾರ ಸೇವನೆ ಹಾಗೂ ನಮ್ಮ ಆರೋಗ್ಯಕ್ಕಾಗಿ ನಾವು ಸಮಯ ಕೊಟ್ಟುಕೊಳ್ಳುವುದು ವಿರಳ. ಹರಿಬರಿಯಲ್ಲಿ ತಿನ್ನುವುದು, ದಿನಪೂರ ನೀರು ಕುಡಿಯದೇ ಸಾಗುವುದು ಬಾಹ್ಯ ಹಾಗೂ ದೇಹದ ಒಳಗಿನ ಅಂಗಾಗದ ಆರೋಗ್ಯದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ. ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಕಣ್ಣು ಬೇನೆ, ಗ್ಯಾಸ್ಟಿಕ್, ಉರಿಯೂತ, ಎದೆಯುರಿ ಒಂದಾ ಎರಡಾ ಸಾಲು ಸಾಲು ರೋಗಗಳು ನಮ್ಮನ್ನು ಆವರಿಸಿಕೊಂಡು ಸ್ಲೋ ಪಾಯಿಸನ್ನಂತೆ ಹಿಂಸೆ ಮಾಡುತ್ತದೆ. ಸಾಮಾನ್ಯವಾಗಿ ಯುವಜನತೆ ನರಳುತ್ತಿರುವುದು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಇದರಿಂದ ಪಾರಾಗೋದು ಅಥವಾ ನಿಯಂತ್ರಣದಲ್ಲಿ ಇರಿಸಿಕೊಳ್ಳೋದು ಹೇಗೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.