ಶನಿ ಮತ್ತು ಶುಕ್ರನ ಜುಗಲ್‌ಬಂದಿಯಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ! ನಿಮ್ದೂ ಇದೇ ರಾಶಿನಾ? Astrology

Astrology  (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಏಪ್ರಿಲ್ 21 ರಂದು, ಶುಕ್ರನು ಭರಣಿ ನಕ್ಷತ್ರವನ್ನು ಬಿಟ್ಟು ಕೃತಿಕಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. 22 ರಂದು ಶನಿಯು ಉತ್ತರ ಭಾದ್ರಪದ ನಕ್ಷತ್ರದ ನಾಲ್ಕನೇ ಪಾದವನ್ನು ಪ್ರವೇಶಿಸುತ್ತಾನೆ. ಜ್ಯೋತಿಷಿಗಳು ಇದನ್ನು ಕಾಕತಾಳೀಯ ಎಂದು ಬಣ್ಣಿಸುತ್ತಾರೆ. ಆದಾಗ್ಯೂ, ಈ ಗ್ರಹಗಳ ಚಲನೆಯಿಂದಾಗಿ ಕೆಲವೊಂದು ರಾಶಿಯವರು ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ನೋಡೋಣ ಬನ್ನಿ..

ಕರ್ಕಾಟಕ ರಾಶಿ

ನಿಮ್ಮನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ ಇಂದಿಗೆ ಮುಕ್ತಾಯಗೊಳ್ಳಬಹುದು. ಉದ್ಯೋಗಿಗಳಿಗೆ ಕೆಲಸದಲ್ಲಿದ್ದ ಅಡತಡೆಗಳು ದೂರಾಗಲಿವೆ. ಹಠಾತ್​ ಆರ್ಥಿಕ ಲಾಭಗಳಾಗುವ ಸಾಧ್ಯತೆ ಹೆಚ್ಚಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಸ್ನೇಹಿತರ ಆಗಮನ ಸಂತೋಷವನ್ನು ನೀಡಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ಸಿಂಹ ರಾಶಿ

ವೃತ್ತಿ ಕ್ಷೇತ್ರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗಲಿವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಹೊಸ ದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಅವಕಾಶಗಳು ದೊರೆಯಲಿವೆ. ವಾಹನ ಮತ್ತು ಆಸ್ತಿ ಖರೀದಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ತಂದೆ ತಾಯಿ ಆಶೀರ್ವಾದದಿಂದ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ.

ಧನು ರಾಶಿ

ನಿಮ್ಮ ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿವೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚಾಗಲಿದೆ. ಹೊಸ ವಾಹನ ಖರೀದಿಸುವವರಿಗೆ ಈ ಸಮಯ ಒಳ್ಳೆಯದಾಗಲಿದೆ. ಕಚೇರಿಗಳಲ್ಲಿ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಪ್ರೀತಿ ಪಾತ್ರರಿಂದ ಒಳ್ಳೆಯ ಸಂದೇಶವನ್ನು ಕೇಳಲಿದ್ದೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net