ಜೂನ್​​ನಲ್ಲಿ ಗ್ರಹಗಳ ಬದಲಾವಣೆಯಿಂದ ಈ ರಾಶಿಗಳ ಭಾಗ್ಯದ ಬಾಗಿಲು ಓಪನ್! ನಿಮ್ದೂ ಇದೇ ರಾಶಿನಾ ಚೆಕ್ ಮಾಡಿ!.. Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrologyಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನದಿಂದ 2026 ರ ಜೂನ್​ ತಿಂಗಳು ಅತ್ಯಂತ ವಿಶಿಷ್ಟ ಹಾಗೂ ಮಹತ್ವದ ಗ್ರಹ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಈ ತಿಂಗಳು ನವಗ್ರಹಗಳಲ್ಲಿ ಅತ್ಯಂತ ಶುಭ ಗ್ರಹಗಳಾದ ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿ ಸಂಯೋಜನೆಗೊಳ್ಳುತ್ತಿದ್ದು, ಇದರಿಂದ ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಮಂಗಳಕರವಾದ 'ಲಕ್ಷ್ಮಿ ನಾರಾಯಣ ಯೋಗ' ನಿರ್ಮಾಣವಾಗುತ್ತಿದೆ. 
ಜೂನ್ ತಿಂಗಳ ಎರಡನೇ ವಾರದ ನಂತರ ಕರ್ಕಾಟಕ ರಾಶಿಯಲ್ಲಿ ಉಂಟಾಗಲಿರುವ ಈ ಗ್ರಹಗಳ ಮೈತ್ರಿಯು ಎಲ್ಲಾ 12 ರಾಶಿಗಳ ಮೇಲೆ ವ್ಯಾಪಕ ಪ್ರಭಾವ ಬೀರಲಿದ್ದರೂ, ಕೆಲವು ರಾಶಿಗಳ ಜೀವನದಲ್ಲಿ ಆಕಸ್ಮಿಕ ಧನಲಾಭ ಮತ್ತು ಯಶಸ್ಸಿನ ಸುವರ್ಣ ಯುಗವನ್ನು ಆರಂಭಿಸಲಿದೆ. ಹಾಗಿದ್ದರೆ, ಗ್ರಹಗಳ ಸಂಯೋಗದಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ನೋಡೋಣ ಬನ್ನಿ...
ವೃಷಭ ರಾಶಿ
ಈ ರಾಶಿಯಲ್ಲಿ ಜನಿಸಿದವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಗಮನಾರ್ಹ ಆರ್ಥಿಕ ಯಶಸ್ಸನ್ನು ತರಲಿದೆ. ಈ ಜನರಿಗೆ ಉದ್ಯೋಗದಲ್ಲಿ ಪ್ರತಿಷ್ಠೆ , ಬಡ್ತಿ, ಸಂಬಳ ಹೆಚ್ಚಾಗಲಿದೆ. ಈ ಜನರು ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳತ್ತ ಮೊರೆ ಹೋಗುತ್ತಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ, ಈ ರಾಜಯೋಗವು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿದೆ. ಈ ಜನರಿಗೆ ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಬಲವಾಗಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ, ಹೊಸ ಅವಕಾಶಗಳು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ. 

ಕನ್ಯಾ ರಾಶಿ

ಈ ರಾಶಿಯಲ್ಲಿ ಜನಿಸಿದ ಜನರು ತಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತಾರೆ. ಅವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿಗಳು ಧನನೀಯ ಸಹಾಯವನ್ನು ಮಾಡಲಿವೆ. ಉದ್ಯೋಗದಲ್ಲಿರುವವರಿಗೆ ಈ ಸಮಯವು ಬಹಳ ಉಪಯುಕ್ತವಾಗಿದ್ದು, ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ವಿವಾಹ ಪ್ರಸ್ತಾವಗಳು ಕೂಡಿ ಬರಲಿವೆ (ಏಜೆನ್ಸೀಸ್​).
 ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net