ಇತ್ತೀಚೆಗೆ "PAPER LEAKED NEET" ಮತ್ತು "Re-NEET 2026" ಹೆಸರಿನ ಹಲವು ಟೆಲಿಗ್ರಾಮ್ ಚಾನೆಲ್‌ಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಣ ವಂಚಿಸುತ್ತಿದ್ದವು ಎನ್ನಲಾಗಿದೆ. ನಕಲಿ ಪ್ರಶ್ನೆಪತ್ರಿಕೆ ನೀಡುವುದಾಗಿ ಹೇಳಿ ₹14,000 ರಿಂದ ₹25,000 ವರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ₹10 ಲಕ್ಷದವರೆಗೂ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.