ಸುಜಲಾಂ ಭಾರತ್ ವಿಷನ್ ಆರು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.1ನದಿಗಳು ಮತ್ತು ನದಿ ಮೂಲಗಳ ಪುನರುಜ್ಜೀವನ, 2. ಬೂದುನೀರಿನ ನಿರ್ವಹಣೆ, 3.ತಂತ್ರಜ್ಞಾನ ಆಧಾರಿತ ನೀರಿನ ಪರಿಹಾರಗಳು, 4.ನೀರಿನ ಸಂರಕ್ಷಣೆ, 5.ಸುಸ್ಥಿರ ಕುಡಿಯುವ ನೀರು ಸರಬರಾಜು,6 ಸಮುದಾಯ ಭಾಗವಹಿಸುವಿಕೆಯಾಗಿದೆ. ಭವಿಷ್ಯದ ಪೀಳಿಗೆಗೆ ಭಾರತದ ಜಲ ಸಂಪನ್ಮೂಲಗಳನ್ನು ಸುರಕ್ಷಿತಗೊಳಿಸಲು ಸಮಗ್ರ, ವಿಜ್ಞಾನ ಆಧಾರಿತ ಚೌಕಟ್ಟನ್ನು ರಚಿಸುವ ಗುರಿಯನ್ನು ಈ ವಿಧಾನವು ಹೊಂದಿದೆ.