ಶುಕ್ರ-ಸೂರ್ಯ ಸಂಗಮ: ಈ ರಾಶಿಗಳೇ ನಿಜವಾದ ಅದೃಷ್ಟವಂತರು! ನಿಮ್ದೂ ಇದೇ ರಾಶಿನಾ? Astrology

Astrology (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯಲ್ಲಿನ ಬದಲಾವಣೆಗಳು ಅನೇಕ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಆದಾಗ್ಯೂ, ಮಾರ್ಚ್ 15 ರಂದು ಸೂರ್ಯನು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈಗಾಗಲೇ ಶುಕ್ರನು ಅಲ್ಲಿ ನೆಲಸಿದ್ದಾನೆ. ವಾಸ್ತವವಾಗಿ, ಮಾರ್ಚ್ 15 ರಂದು ಸೂರ್ಯ ಮತ್ತು ಶುಕ್ರರ ಸಂಯೋಗವು ಶುಕ್ರ ಆದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದ ಪರಿಣಾಮ ಕೆಲವೊಂದು ರಾಶಿ ಚಕ್ರದವರು ಲಾಭವನ್ನು ನಿರೀಕ್ಷಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಗ್ರಹಗಳ ಚಲನೆಯಿಂದ ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಈ ಸಮಯವು ಮಿಥುನ ರಾಶಿಯವರಿಗೆ ವೃತ್ತಿಪರವಾಗಿ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ಕೆಲಸಗಳು ಸಾಗಲಿವೆ. ನಿಮ್ಮ ಮೇಲಧಿಕಾರಿಗಳಿಂದ ಬೆಂಬಲ ಸಿಗುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಹೊಸ ಯೋಜನೆಗಳಲ್ಲಿ ಅಧಿಕ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಉಳಿತಾಯ ಹೆಚ್ಚಾಗಲಿದೆ.

ತುಲಾ ರಾಶಿ

ಶುಕ್ರನು ತುಲಾ ರಾಶಿಯ ಅಧಿಪತಿಯಾಗಿರುವುದರಿಂದ, ಈ ಸಂಯೋಗವು ಈ ರಾಶಿಯವರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ಮದುವೆಯಾಗಲು ಬಯಸುವವರಿಗೆ ಕಂಕಣ ಬಲ ಕೂಡಿ ಬರಲಿದೆ. ಉದ್ಯೋಗಗಳನ್ನು ಬದಲಾಯಿಸುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ದೊರಕಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಈ ರಾಜಯೋಗವು ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮರಳಿ ಪಡೆಯಬೇಕಿದ್ದ ಹಣ ಮತ್ತೆ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಸಂಬಳ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ತಂದೆ ಆಶೀರ್ವಾದದಿಂದ ಎಲ್ಲಾ ಕೆಲಸಗಳು ಸುಗಮವಾಗಿ ಸಾಗಲಿವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net