ಸೌರಭ-26 ರಂಗ ಸ್ಪರ್ಧೆ: ಫೆ.28ಕ್ಕೆ ಸಮಾರೋಪ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ!

Saurabha26
Saurabha26
Published on
ಬೆಂಗಳೂರು: ರಂಗ ಸೌರಭ ಅರ್ಪಿಸುವ ಸೌರಭ 26 ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ಫೆ.28ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಶ್ವಿನ್ ಪುನೀತ್ ರಾಜಕುಮಾರ್, ಖ್ಯಾತ ಭರತನಾಟ್ಯ ಕಲಾವಿದರಾದ ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು, ನಟರಾದ ವಿಜಯ ರಾಘವೇಂದ್ರ, ಅವಿನಾಶ್, ಅರುಣ್ ಸಾಗರ್, ನಿರುಪ್ ಭಂಡಾರಿ ಸೇರಿದಂತೆ ಚಲನಚಿತ್ರ ಹಾಗೂ ನಾಟಕ ರಂಗದ ವಿವಿಧ ಗಣ್ಯರು ಆಗಮಿಸಲಿದ್ದಾರೆ.
ಇದೇ ಫೆ.11 ರಿಂದ ನಿರಂತರವಾಗಿ ರಂಗ ಸ್ಪರ್ಧೆಗಳು ನಡೆದಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 35ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೌರಭ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಕಾಲೇಜಿಗೆ ಕೊಡಮಾಡುವ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಪ್ರಥಮ ಸರ್ವೋತ್ತಮ ಪರ್ಯಾಯ ಪಾರಿತೋಷಕವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಾಯೋಜಿಸಿದ್ದು, ಅವರು ಕಾರ್ಯಕ್ರಮದಲ್ಲಿ ಖುದ್ದು ಹಾಜರಿದ್ದು ಪ್ರಶಸ್ತಿಯನ್ನು ನೀಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net