ಎನ್‌ಡಿಎಯಲ್ಲಿ ಕೇವಲ ನಾಲ್ಕು ಬಾರಿ ಪರಿಷ್ಕರಣೆ ಮಾಡಲಾಗಿದೆ. 2014, 2020, 2025ರ ಎರಡು ಮಾತ್ರ ಆಗಿದೆ. ಆದ್ರೆ, ಯುಪಿಎ-2ರಲ್ಲಿ ದರಗಳು ತೀವ್ರವಾಗಿ ಏರಿಕೆಯಾಗಿದ್ದವು. ಪ್ರತಿ ಕಿ.ಮೀ.ಗೆ 10-30 ಪೈಸೆ ಏರಿಕೆಯಾಗಿದ್ದು, ಎಲ್ಲರ ಮೇಲೆ ಪರಿಣಾಮ ಬೀರಿದೆ. ಯುಪಿಎಯಲ್ಲಿ 1,711 ಅಪಘಾತಗಳು, 2,453 ಸಾವುಗಳು ಸಂಭವಿಸಿವೆ ಎಂದು ಆರೋಪಿಸಿರುವ ಕೇಂದ್ರ, ಎನ್‌ಡಿಎಯಲ್ಲಿ ಅಪಘಾತಗಳು 95% ಕಡಿಮೆಯಾಗಿದ್ದು, ಸುರಕ್ಷತಾ ವೆಚ್ಚ 4,702 ಕೋಟಿಯಿಂದ 1.16 ಲಕ್ಷ ಕೋಟಿಗೆ ಏರಿಕೆಯಾಗಿದೆ.