ಗ್ರಹಗತಿಗಳ ಬದಲಾವಣೆ: ಏಪ್ರಿಲ್ ತಿಂಗಳಲ್ಲಿ ಈ ರಾಶಿಯವರ ಕೈ ಸೇರಲಿದೆ ಅಪಾರ ಸಂಪತ್ತು! Astrology

Astrology  (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಏಪ್ರಿಲ್​ ತಿಂಗಳಲ್ಲಿ ಬುದ್ಧಾದಿತ್ಯ ರಾಜಯೋಗವು ಪ್ರಭಾವಶಾಲಿಯಾಗಿರುತ್ತದೆ. ಆದಾಗ್ಯೂ, ಈ ತಿಂಗಳು ಮೀನ ರಾಶಿಯಲ್ಲಿ ಬುಧ ಮತ್ತು ಸೂರ್ಯ ಸಂಯೋಗವು ಬುದ್ಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದ ಪ್ರಭಾವದಿಂದ ಕೆಲವೊಂದು ರಾಶಿಯವರು ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಬುಧ ಒಟ್ಟಾಗಿ ಈ ಜನರಿಗೆ ಗೌರವವನ್ನು ನೀಡುವುದಲ್ಲದೆ ವ್ಯಾಪಕ ಸಾಮಾಜಿಕ ಬೆಂಬಲವನ್ನೂ ನೀಡುತ್ತಾರೆ. ಹಾಗಿದ್ದರೆ ಏಪ್ರಿಲ್ ತಿಂಗಳಲ್ಲಿ ಯಾವ ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಏಪ್ರಿಲ್ ತಿಂಗಳು ಮಿಥುನ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ತರುವಂತಹ ಸಮಯ. ಉದ್ಯೋಗಿಗಳು ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದು. ಈ ತಿಂಗಳು, ನೀವು ಕೆಲಸದ ಜೊತೆಗೆ ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲಿದ್ದೀರಿ. ಪ್ರೇಮ ಜೀವನವು ಸಂತೋಷದಿಂದ ಕೂಡಿರುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದೆ. ಸ್ವಲ್ಪ ವೆಚ್ಚಗಳು ಹೆಚ್ಚಾಗಬಹುದು.

ಸಿಂಹ ರಾಶಿ

ಏಪ್ರಿಲ್ ತಿಂಗಳು ಸಿಂಹ ರಾಶಿಯವರು ವೃತ್ತಿಪರ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ತಿಂಗಳು ಹೊಸ ಯೋಜನೆಗಳು ನಿಮ್ಮನ್ನು ಮುನ್ನಡೆಸಲು ಸಹಾಯ ಮಾಡುತ್ತವೆ. ಕೆಲಸದ ಸ್ಥಳದಲ್ಲಿ ಬಡ್ತಿ, ಸಂಬಳ ಹೆಚ್ಚಾಗಲಿದೆ. ಕುಟುಂದೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಆರ್ಥಿಕ ಸಮಸ್ಯೆಗಳು ಕೊನೆಗಾಣಲಿವೆ. ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಳೆಯಲಿದ್ದೀರಿ.

ಧನು ರಾಶಿ

ಏಪ್ರಿಲ್ ತಿಂಗಳು ಕೆಲಸದಲ್ಲಿ ಹೆಚ್ಚಿನ ಗೌರವವನ್ನು ಪಡೆಯಬಹುದಾಗಿದೆ. ಈ ಸಮಯದಲ್ಲಿ ಹೊಸ ಜವಬ್ದಾರಿಗಳು ನಿಮ್ಮ ಮೇಲೆ ಬರಲಿವೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಬರಲಿವೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net