

ನವದೆಹಲಿ: ದೇಶದ ಆರ್ಥಿಕ ಭದ್ರತೆ ಮತ್ತು ಕೈಗಾರಿಕಾ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ, ದೀರ್ಘಕಾಲದಿಂದ ವಿವಾದದಲ್ಲಿದ್ದ ಖನಿಜ ತೆರಿಗೆ ಪದ್ಧತಿಗೆ ಸ್ಪಷ್ಟ ರೂಪ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಮೂೂರೂವರೆ ದಶಕಗಳಿಂದ ಗಣಿಗಾರಿಕೆ ಕ್ಷೇತ್ರವನ್ನು ಕಾಡುತ್ತಿದ್ದ ಕಾನೂನು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ 'ಮೈನಿಂಗ್ ಅಂಡ್ ಮಿನರಲ್ಸ್ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026' ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಲೋಕಸಭೆಯಲ್ಲಿ ಆಗಸ್ಟ್ 12ರಂದು ಹಾಗೂ ರಾಜ್ಯಸಭೆಯಲ್ಲಿ ಅದರ ಮರುದಿನವೇ ಈ ಮಸೂದೆಗೆ ಅನುಮೋದನೆ ದೊರೆತಿದೆ.