ಚೆನ್ನೈ: ಇತ್ತೀಚಿನ ಕ್ರೀಡಾ ಲೋಕದ ಸಂಚಲನವೊಂದರಲ್ಲಿ, ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್(Laxman Sivaramakrishnan ) ಬಿಸಿಸಿಐ (BCCI) ಕಾಮೆಂಟರಿ ಪ್ಯಾನೆಲ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಕೇವಲ ನಿವೃತ್ತಿಯಷ್ಟೇ ಅಲ್ಲದೆ, ಅವರು ಬಿಸಿಸಿಐ ವಿರುದ್ಧ "ಬಣ್ಣದ ತಾರತಮ್ಯ"ದ (Color Discrimination) ಗಂಭೀರ ಆರೋಪ ಮಾಡಿದ್ದು, ಇದು ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.