ಗುರು-ಮಂಗಳ ಯುತಿ: ಈ ರಾಶಿಯವರ ಬಾಳಿನಲ್ಲಿ ಇನ್ನು ಸುವರ್ಣ ಯುಗ ಆರಂಭ! Astrology
Astrology (ಸಾಂದರ್ಭಿಕ ಚಿತ್ರ)
Published on:
Copied
Follow Us
Astrology: ಇನ್ನೇನು ಕೆಲವೇ ದಿನಗಳಲ್ಲಿ ಮೇ ತಿಂಗಳು ಆರಂಭವಾಗಲಿದೆ. ಈ ಸಮಯದಲ್ಲಿ ಗ್ರಹಗಳ ಚಲನೆಯು ಪ್ರಮುಖ ಬದಲಾವಣೆಯನ್ನು ತರಲಿದೆ. ಮೇ 5 ರಂದು ಗುರು ಮತ್ತು ಮಂಗಳನ ನಡುವೆ ರಾಜ ಯೋಗವು ರೂಪುಗೊಳ್ಳಲಿದೆ.
ಜ್ಯೋತಿಷ್ಯದ ಪ್ರಕಾರ ಗುರು ಧೈರ್ಯ, ಸಂತೋಷವನ್ನು ಪ್ರತಿನಿಧಿಸಿದರೆ ಮಂಗಳನು ಕರ್ಮ ಮತ್ತು ನ್ಯಾಯವನ್ನು ಸಂಕೇತಿಸುತ್ತದೆ. ಈ ದಿನದಂದು ಎರಡೂ ರಾಶಿಗಳು ಸಂಯೋಗ ಹೊಂದುವುದರಿಂದ ಈ ರಾಶಿಯವರಿಗೆ ಉತ್ತಮ ಪ್ರಯೋಜನ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ...
ಕನ್ಯಾ ರಾಶಿ
ಈ ಸಮಯ ಕನ್ಯಾ ರಾಶಿಯವರಿಗೆ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಪ್ರಯೋಜನಕಾರಿಯಾಗಲಿದೆ. ಉದ್ಯೋಗಿಗಳಿಗೆ ಸಂಬಳ ಮತ್ತು ಬಡ್ತಿ ಹೆಚ್ಚಾಗಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಹೂಡಿಕೆಗಳು ಲಾಭವನ್ನು ನೀಡಲಿದ್ದು, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.
ಸಿಂಹ ರಾಶಿ
ಗ್ರಹಗಳ ಸಂಯೋಗವು ಸಿಂಹ ರಾಶಿಯವರಿಗೆ ಹೊಸ ಅವಕಾಶಗಳನ್ನು ತರುತ್ತದೆ. ಕೆಲಸದಲ್ಲಿ ಪ್ರಗತಿಯ ಜೊತೆಗೆ ಹೊಸ ಜವಬ್ದಾರಿಗಳು ಸಿಗುವಂತಹ ಸಮಯ ಇದಾಗಿದೆ. ಆರ್ಥಿಕ ಪರಿಸ್ಥಿತಿಗಳಲ್ಲಿನ ಸುಧಾರಣೆ ನಿಮ್ಮನ್ನು ಬೇರೆಡೆ ಕರೆದೊಯ್ಯುತ್ತದೆ. ವಿದೇಶದಲ್ಲಿ ವೃತ್ತಿ ಆರಂಭಿಸುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ವಿದ್ಯಾರ್ಥಿಗಳು ಒಳ್ಳೆಯ ಸುದ್ದಿಯನ್ನು ಕೇಳಲಿದ್ದಾರೆ.
ಮೀನಾ ರಾಶಿ
ಮೀನಾ ರಾಶಿಯವರಿಗೆ ಈ ಸಮಯವು ಬಹಳ ಉತ್ತಮವಾಗಲಿದೆ. ಈ ಸಮಯದಲ್ಲಿ ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿಯನ್ನು ಕೇಳಬಹುದು. ವಿವಾಹ ಪ್ರಸ್ತಾಪಗಳು ಬರಲಿವೆ. ಅಂದುಕೊಂಡ ಕೆಲಸಗಳು ಮಾಡಿ ಮುಗಿಸಲಿದ್ದೀರಿ. ಹೊಸ ಕೆಲಸ ಹುಡುಕುವವರಿಗೆ ಉದ್ಯೋಗವಕಾಶಗಳು ಸಿಗಲಿವೆ. ವಾಹನ ಖರೀದಿಸುವವರಿಗೆ ಈ ಸಮಯ ಸೂಕ್ತವಾಗಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.