ಮೊಮ್ಮಗಳು ಮದುವೆಯಾಗುವುದೇ ನನಗೆ ಇಷ್ಟ ಇಲ್ಲ ಎಂದ ಜಯಾ ಬಚ್ಚನ್​...ನೀಡಿದ ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ! Jaya bachchan

Jaya Bachchan
Jaya Bachchan
Published on
Jaya Bachchan : ಮದುವೆ ಎಂಬುದು ಹಳೆಯ ಪದ್ಧತಿ (outdated institution) ನನ್ನ ಮೊಮ್ಮಗಳು ನವ್ಯಾ ಮದುವೆಯಾಗುವುದನ್ನು ನಾನು ನೋಡಲು ಬಯಸುವುದಿಲ್ಲ ಎಂದು ಹಿರಿಯ ನಟಿ ಜಯಾ ಬಚ್ಚನ್ ಮದುವೆಯ ಬಗ್ಗೆ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆಯೊಬ್ಬರು ಮದುವೆಯ ವಿಚಾರದಲ್ಲಿ ನಿಮ್ಮ ಮೊಮ್ಮಕ್ಕಳು ಹಾಗೂ ಇಂದಿನ ಯುವತಿಯರು ತೆಗೆದುಕೊಳ್ಳುತ್ತಿರುವ ನಿರ್ಧಾರವನ್ನು ನೀವು ಪ್ರೊತ್ಸಾಹಿಸುತ್ತೀರಾ ಎಂದು ಕೇಳಿದಾಗ ನನ್ನ ಮೊಮ್ಮಗಳು ನವ್ಯಾ ಮದುವೆಯಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ರೂಢಿಗಳು ಮತ್ತು ಪೋಷಕರ ವ್ಯವಸ್ಥೆ ತುಂಬಾ ಬೇಗನೆ ಬದಲಾಗಿದೆ. ಹಾಗಾಗಿ ಮಕ್ಕಳು ಹೆಚ್ಚು ಬುದ್ಧಿವಂತರಾಗುತ್ತಿರುವುದರಿಂದ ಮಹಿಳೆಯರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ತಿಳಿದುಕೊಳ್ಳಬೇಕು.
ನಾನು ಈಗಾಗಲೇ ಅಜ್ಜಿಯಾಗಿದ್ದೇನೆ. ನವ್ಯಾಗೆ ಕೇವಲ 28 ವರ್ಷ ಅಷ್ಟೇ. ಇಂದಿನ ಹುಡುಗಿಯರಿಗೆ ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ಸಲಹೆ ನೀಡಲು ನನಗೆ ತುಂಬಾ ವಯಸ್ಸಾಗಿದೆ. ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಇಂದಿನ ಪುಟ್ಟ ಮಕ್ಕಳು ತುಂಬಾ ಬುದ್ಧಿವಂತರು ಅವರು ನಮ್ಮನ್ನು ಮೀರಿಸುತ್ತಾರೆ ಎಂದು ಹೇಳಿದರು.
ಸಂಬಂಧವನ್ನು ವ್ಯಾಖ್ಯಾನಿಸಲು ಯಾವುದೇ ಕಾನೂನು ಮುದ್ರೆಯ ಅಗತ್ಯವಿಲ್ಲ. ನನಗೆ ನಿಜವಾಗಿಯೂ ಗೊತ್ತಿಲ್ಲ. ಪ್ರತಿನಿತ್ಯ ಜೀವನವನ್ನು ಆನಂದಿಸಿ ಎಂದು ಪ್ರತಿಕ್ರಿಯಿಸಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net