Vastu tips: ವಾಸ್ತು ಶಾಸ್ತ್ರವು ನಮ್ಮ ಜೀವನದ ಪ್ರತಿಯೊಂದು ಅಂಶದ ಮಹತ್ವವನ್ನು ವಿವರಿಸುತ್ತದೆ. ಇದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅವುಗಳು ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂದಹಾಗೇ, ಮನೆಯಲ್ಲಿರುವ ಕೆಲವೊಂದು ವಸ್ತುಗಳು ಕೇವಲ ಅಲಂಕಾರವನ್ನು ಮಾತ್ರ ತೋರುವುದಿಲ್ಲ. ಬದಲಿಗೆ ಅವು ಜೀವನದ ಮೇಲೆ ಸಕರಾತ್ಮಕ ಮತ್ತು ನಕರಾತ್ಮಕವಾಗಿ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
ಈ ಪ್ರಮುಖ ವಸ್ತುಗಳಲ್ಲಿ ಗೋಡೆಯ ಮೇಲೆ ನೇತಾಡುವ ಗಡಿಯಾರ ಕೂಡ ಒಂದು. ಇದು ಸಮಯವನ್ನು ತಿಳಿಸುವುದಲ್ಲದೇ, ನಮ್ಮ ಜೀವನದಲ್ಲಿನ ವೇಗ, ಪ್ರಗತಿ ಮತ್ತು ಅವಕಾಶಗಳನ್ನು ಸಂಕೇತಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನೀವೇನಾದರೂ ಗಡಿಯಾರವನ್ನು ತಪ್ಪು ಸ್ಥಳ ಹಾಗೂ ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಇದು ನಿಮಗೆ ಒತ್ತಡ, ಅಡೆತಡೆಗಳನ್ನು ಉಂಟು ಮಾಡುತ್ತದೆ.
ಗಡಿಯಾರವನ್ನು ಈ ದಿಕ್ಕಿನಲ್ಲಿ ಇರಿಸಬೇಡಿ
ವಾಸ್ತು ಶಾಸ್ತ್ರದ ಪ್ರಕಾರ , ದಕ್ಷಿಣ ದಿಕ್ಕಿನಲ್ಲಿ ಗೋಡೆಯ ಗಡಿಯಾರವನ್ನು ಇಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಇದು ಆರ್ಥಿಕ ಪ್ರಗತಿಯನ್ನು ಕುಗ್ಗಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನೀವೇನಾದರೂ ನಿಮ್ಮ ಮನೆ ಮತ್ತು ಕಚೇರಿಗಳಲ್ಲಿ ಗಡಿಯಾರವನ್ನು ಇಟ್ಟುಕೊಳ್ಳುತ್ತಿದ್ದರೆ, ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಇರಿಸಬೇಡಿ.
ಅಂದಹಾಗೇ, ಪೂರ್ವ ದಿಕ್ಕು ಸೂರ್ಯನ ದಿಕ್ಕು, ಇದು ಶಕ್ತಿ, ಆರೋಗ್ಯ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಈ ಸ್ಥಳದಲ್ಲಿ ಗಡಿಯಾರವನ್ನು ಇಡುವುದರಿಂದ ಜೀವನದಲ್ಲಿ ಉತ್ಸಾಹ, ಶಿಸ್ತು ಮತ್ತು ಯಶಸ್ಸು ಬರುತ್ತದೆ. ಹಾಗೆಯೇ, ಇದು ವ್ಯಕ್ತಿಯ ಜೀವನಕ್ಕೆ ಸಂತೋಷ ಮತ್ತು ನೆಮ್ಮದಿಯನ್ನು ಉಂಟು ಮಾಡುತ್ತದೆ.
ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ನೇತು ಹಾಕಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಮೇಲೆ ಅಥವಾ ಮುಂದೆ ಗಡಿಯಾರವನ್ನು ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಇದು ಮನೆಗೆ ನಕರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ, ಜೀವನದಲ್ಲಿ ಉತ್ತಮ ಅವಕಾಶಗಳು ಸಿಗದಂತೆ ತಡೆಯುತ್ತದೆ.
ಇತರ ವಾಸ್ತು ಸಲಹೆಗಳು
ಗಡಿಯಾರವು ಯಾವಾಗಲೂ ಸರಿಯಾದ ಸಮಯವನ್ನು ತೋರಿಸಬೇಕು. ನಿಮ್ಮ ಮನೆಯಲ್ಲಿ ಹಾಳಾದ ಅಥವಾ ಮುರಿದ ಗಡಿಯಾರ ಇದ್ದರೆ, ಇಂದೇ ಅದನ್ನು ಬಿಸಾಕಿ. ಇಲ್ಲದಿದ್ದರೆ, ಇದು ನಿಮ್ಮ ಜೀವನದಲ್ಲಿ ಅಡತಡೆಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ನೀವೇನಾದರೂ ಧನಾತ್ಮಕ ಪ್ರಯೋಜನಗಳನ್ನು ಪಡೆಯಬೇಕೆಂದರೆ, ದುಂಡಾಗಿರುವ ಗಡಿಯಾರವನ್ನು ಉಪಯೋಗಿಸಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.