ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದರ ಹಿಂದಿರುವ ಅಸಲಿ ವಿಜ್ಞಾನವೇನು? Charan Sparsh

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Charan Sparsh: ಹಿಂದೂ ಸಂದಾಯದಲ್ಲಿ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಒಂದು ವಿಶೇಷ ಆಧ್ಯಾತ್ಮಿಕ ಸಂಪ್ರದಾಯ ಎಂದು ನಂಬಲಾಗಿದೆ. ಜನರು ಹೆಚ್ಚಾಗಿ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ.  ಪಾದಗಳನ್ನು ಸರಿಯಾಗಿ ಸ್ಪರ್ಶಿಸುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಮತ್ತು ಅದೃಷ್ಟವನ್ನು ಸುಧಾರಿಸುತ್ತದೆ, ಪ್ರತಿಕೂಲ ಸಂದರ್ಭಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. 

ಪಾದಗಳನ್ನು ಮುಟ್ಟುವುದು ಏಕೆ ಪ್ರಯೋಜನಕಾರಿ?

ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಿರ್ದಿಷ್ಟ ರೀತಿಯ ಶಕ್ತಿ ಇರುತ್ತದೆ. ಆ ಶಕ್ತಿಯು ಬೆರಳುಗಳು ಮತ್ತು ಕಾಲ್ಬೆರಳುಗಳ ಮೂಲಕ ಹರಿಯುತ್ತದೆ. ಈ ಶಕ್ತಿಯು ಸ್ಪರ್ಶದ ಮೂಲಕ ಹರಡುತ್ತದೆ. ಇದರಿಂದ ನಮ್ಮ ಕೈಗಳಿಂದ ಕಾಲುಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ಇನ್ನೊಬ್ಬರ ಶಕ್ತಿಯನ್ನು ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ತಲೆಯ ಮೇಲೆ ಕೈಗಳನ್ನು ಇಡುವ ಮೂಲಕ, ಒಬ್ಬರು ತಮ್ಮ ಶಕ್ತಿಯನ್ನು ಬಿಡುಗಡೆ ಮಾಡುತ್ತಾರೆ. ಶಕ್ತಿಯು ಸಕರಾತ್ಮಕವಾಗಿದ್ದರೆ, ತಕ್ಷಣವೇ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಪಾದಗಳನ್ನು ಮುಟ್ಟುವ ವಿಧಾನಗಳು ಯಾವುವು?

ಪಾದಗಳನ್ನು ಮುಟ್ಟಲು ಮೂರು ಮಾರ್ಗಗಳಿವೆ. ಮೊದಲನೆಯದಾಗಿ, ನಮಸ್ಕರಿಸಿ ಪಾದಗಳನ್ನು ಮುಟ್ಟುವುದು ಎರಡನೆಯದು ಮಂಡಿಯೂರಿ ಪಾದಗಳನ್ನು ಮುಟ್ಟುವುದು ಮತ್ತು ಮೂರನೆಯದು ನಮಸ್ಕರಿಸುವುದು. ಈ ಮೂರು ವಿಧಾನಗಳು ಉತ್ತಮ ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ.

ಪಾದಗಳನ್ನು ಮುಟ್ಟುವ ನಿಯಮಗಳೇನು?

ಯಾವ ವ್ಯಕ್ತಿಯನ್ನು ಗೌರವಿಸುತ್ತೀರೋ ಅವರನ್ನುಮಾತ್ರ ಮುಟ್ಟಬೇಕು. ಪಾದಗಳನ್ನು ಮುಟ್ಟಿ ನಮಸ್ಕರಿಸಿದರೆ, ಬೆರಳುಗಳಿಂದ ಕಾಲ್ಬೆರಳುಗಳನ್ನು ಮುಟ್ಟಬೇಕು. ಹಾಗೆಯೇ ಪಾದಗಳನ್ನು ಮುಟ್ಟಲು ಮಂಡಿಯೂರಿದರೆ, ತಲೆಯನ್ನು ಪಾದಗಳ ಮೇಲೆ ಇರಿಸಬೇಕು. ಯಾರಾದರೂ ನಿಮ್ಮ ಕಾಲುಗಳಿಗೆ ಬಿದ್ದು ನಮಸ್ಕರಿಸಿದಾಗ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಬೇಕು. ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ತಮ್ಮ ಪಾದವನ್ನು ಮುಟ್ಟಬೇಕು ಎಂದು ಒತ್ತಾಯಿಸಬಾರದು.

ಪಾದಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ಆಗುವ ಪ್ರಯೋಜನಗಳೇನು?

ತಂದೆಯ ಪಾದ ಸ್ಪರ್ಶ ಮಾಡುವುದರಿಂದ ದುಷ್ಟ ಶಕ್ತಿಗಳು ಶಮನಗೊಳ್ಳುತ್ತವೆ. ಹಾಗೆಯೇ ತಾಯಿಯ ಪಾದದ ಸ್ಪರ್ಶವನ್ನು ಮಾಡುವುದರಿಂದ  ಬುಧ ಮತ್ತು ಶುಕ್ರನನ್ನು ಬಲಪಡಿಸುತ್ತದೆ. ಸಹೋದರ ಅಥವಾ ಸಹೋದರಿಯ ಪಾದ ಸ್ಪರ್ಶವು ಮಂಗಳ ಗ್ರಹದ ತೊಂದರೆಗಳನ್ನು ಶಮನಗೊಳಿಸುತ್ತದೆ. ಆದಾಗ್ಯೂ, ಹಿರಿಯರ ಪಾದಗಳನ್ನು ಸ್ಪರ್ಶ ಮಾಡುವುದರಿಂದ  ಗುರುವನ್ನು ಬಲಪಡಿಸುತ್ತದೆ.  ಎಂದು ಜ್ಯೋತಿಷ್ಯವು ತಿಳಿಸುತ್ತದೆ.
ನಿಮ್ಮ ಜಾತಕದಲ್ಲಿ ಗುರು ನಕಾರಾತ್ಮಕವಾಗಿದ್ದರೆ, ನೀವು ಭೇಟಿಯಾಗುವ ಪ್ರತಿಯೊಬ್ಬರನ್ನು ಕೈಗಳನ್ನು ಜೋಡಿಸಿ ಸ್ವಾಗತಿಸಲು ಪ್ರಾರಂಭಿಸಿ. ಏಕೆಂದರೆ, ಪಾದ ಸ್ಪರ್ಶದ ಸಮಯದಲ್ಲಿ  ಎಡಗೈಯಿಂದ ಎಡ ಪಾದವನ್ನು ಮತ್ತು ಬಲಗೈಯಿಂದ ಬಲ ಪಾದವನ್ನು ಸ್ಪರ್ಶಿಸುವುದರಿಂದ ಸಂಬಂಧಿಕರ ದೇಹದ ಮೂಲಕ ಶಕ್ತಿಯ ಹರಿವು ವೇಗಗೊಳ್ಳುತ್ತದೆ. ವಿರುದ್ಧವಾಗಿ ನಮಸ್ಕಾರ ಮಾಡುವುದರಿಂದ ಶಕ್ತಿಯ ಹರಿವು ಅಡ್ಡಿಯಾಗುತ್ತದೆ. ಪಾದ ಸ್ಪರ್ಶ ಮಾಡುವುದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ. ಶಾಂತಿ ದೊರಕುತ್ತದೆ ಜೊತೆಗೆ ನಿಮ್ಮ ಚಿಂತೆಯನ್ನು ದೂರಗೊಳಿಸುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net