Vastu Tips: ಪ್ರತಿಯೊಬ್ಬರೂ ಕೂಡಾ ನೆಮ್ಮದಿ, ಹಣ ಮತ್ತು ಸಂತೋಷಕ್ಕಾಗಿ ಹಲವಾರು ವರ್ಷ ದುಡಿಮೆ ಮಾಡುತ್ತಾರೆ. ಆದರೂ ಕೂಡಾ ಸುಖವಿಲ್ಲದೇ, ನರಳಾಟ ನಡೆಸುತ್ತಾರೆ. ಅಂದಹಾಗೇ, ವಾಸ್ತು ಶಾಸ್ರ್ರದಲ್ಲಿ ಮನೆಯ ದಿಕ್ಕುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಮನೆಯ ಈಶಾನ್ಯ ದಿಕ್ಕನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ಪೂರ್ತಿಯಾದ ಸಕರಾತ್ಮಕ ಶಕ್ತಿಯನ್ನು ನೀಡುತ್ತದೆ.