ಭಾರತದ ಶಿಕ್ಷಣ ಕ್ಷೇತ್ರಕ್ಕೆ ಉದಯೋನ್ಮುಖ ತಂತ್ರಜ್ಞಾನಗಳ ಆಧಾರ: ನವದೆಹಲಿಯಲ್ಲಿ ದುಂಡು ಮೇಜಿನ ಸಮಾಲೋಚನಾ ಸಭೆ
NFPRC PANJ Foundation Roundtable Delhi
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
2026ರ ಆಗಸ್ಟ್ 10ರಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಕಾರ್ಯಕ್ರಮ ನಡೆಯಿತು.
NFPRC ಮತ್ತು ಪಾಂಜ್ ಫೌಂಡೇಶನ್ ಸಹಯೋಹದಲ್ಲಿ ನಡೆದ ಸಭೆ
ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು’ ಎಂಬ ವಿಷಯದ ಕುರಿತು ಸಭೆ.
ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು’ ಎಂಬ ಮಹತ್ವದ ವಿಷಯದ ಕುರಿತು
ದುಂಡು ಮೇಜಿನ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.
ಎನ್‌ಎಫ್‌ಪಿಆರ್‌ಸಿಮತ್ತು ಪಾಂಜ್ ಫೌಂಡೇಶನ್‌ಗಳ ಸಹಯೋಗದಲ್ಲಿ ನಡೆದ ಈ ಸಭೆಯು
ಆಗಸ್ಟ್ 10ರಂದು ನವದೆಹಲಿಯ ಪ್ರತಿಷ್ಠಿತ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ
ನಡೆಯಿತು.
ದಿಗ್ಗಜರು ಭಾಗಿ
ಈ ಸಭೆಯಲ್ಲಿ ದೇಶದ ವಿವಿಧ ಕ್ಷೇತ್ರಗಳ ಪ್ರಮುಖ ದಿಗ್ಗಜರು ಭಾಗವಹಿಸಿದ್ದರು. ಸಂಸದರು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ಕೈಗಾರಿಕಾ ಕ್ಷೇತ್ರದ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ಈ ಸಮಾಲೋಚನೆಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಿದರು.
ಸಭೆಯ ಉದ್ದೇಶ ಹೀಗಿತ್ತು
ಉದಯೋನ್ಮುಖ ಅವಕಾಶಗಳನ್ನು ಸಮಗ್ರವಾಗಿ ಪರಿಶೀಲಿಸುವುದು, ಭವಿಷ್ಯದ ದೃಷ್ಟಿಕೋನಗಳನ್ನು ರೂಪಿಸುವುದು ಹಾಗೂ ಚರ್ಚೆಯಿಂದ ದೊರೆತ ಅಮೂಲ್ಯ ಒಳನೋಟಗಳು ನೇರವಾಗಿ ರಾಷ್ಟ್ರೀಯ ನೀತಿ ರೂಪಿಸುವಿಕೆಗೆ ಪೂರಕವಾಗುವಂತೆ ಮಾಡುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.
ಚರ್ಚೆಯಲ್ಲಿ ಗೌರವಾನ್ವಿತ ಸಂಸದರಾದ ಮನೀಶ್ ತಿವಾರಿ, ಅತುಲ್ ಗರ್ಗ್, ಕಾರ್ತಿ ಚಿದಂಬರಂ, ಸುಜೀತ್ ಕುಮಾರ್ ಮತ್ತು ಕೊಂಡ ವಿಶ್ವೇಶ್ವರ ರೆಡ್ಡಿ ಅವರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಮಹತ್ವದ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಹಂಚಿಕೊಂಡರು.
ಇದರೊಂದಿಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) NIELIT India ಹಾಗೂ ಶಿಕ್ಷಣ ಸಚಿವಾಲಯದ ಹಿರಿಯ ಪ್ರತಿನಿಧಿಗಳು ಸರ್ಕಾರದ ಅಧಿಕೃತ ಪ್ರತಿನಿಧಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ವತಿಯಿಂದ ಮಾಹಿತಿಗಳನ್ನು ಹಂಚಿಕೊಂಡರು, (ಏಜೆನ್ಸೀಸ್)